ಮಣಿಪುರ: ಸೋಮವಾರ ಏಕಾಏಕಿ ಭುಗಿಲೆದ್ದ ಹಿಂಸಾಚಾರ
Twitter
Facebook
LinkedIn
WhatsApp
ಇಂಫಾಲ್: ಒಂದು ವಾರದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಸೋಮವಾರ ಏಕಾಏಕಿ ಹಿಂಸಾಚಾರ ಭುಗಿಲೆದ್ದಿದೆ.
ಮಾರುಕಟ್ಟೆ ಪ್ರದೇಶಕ್ಕೆ ಬಂದ ಕೆಲವು ದುಷ್ಕರ್ಮಿಗಳು ಅಂಗಡಿ ಮುಚ್ಚುವಂತೆ ಬೆದರಿಕೆ ಹಾಕಿದ್ದು, ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಇದಾದ ಸ್ವಲ್ಪ ಹೊತ್ತಲ್ಲೇ ಹಿಂಸಾಚಾರ ವ್ಯಾಪಿಸಿ, ಕೆಲವು ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಘಟನೆ ಬೆನ್ನಲ್ಲೇ ಸೇನಾಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಗುಂಪನ್ನು ಚದುರಿಸಿ, ಇಬ್ಬರನ್ನು ವಶಕ್ಕೆ ಪಡೆದಿವೆ. ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿ ಮೈತೇಯಿ ಮತ್ತು ಬುಡಕಟ್ಟು ಜನರ ನಡುವೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಈ ಹಿಂಸಾಚಾರದಲ್ಲಿ 70 ಮಂದಿ ಸಾವಿಗೀಡಾಗಿ, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿತ್ತು