ಮಡಿಕೇರಿ ಕ್ಷೇತ್ರಕ್ಕೆ ಡಾ. ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರಕ್ಕೆ ಎ ಎಸ್ ಪೊನ್ನನ್ನ, ಸುಳ್ಯ ಕ್ಷೇತ್ರಕ್ಕೆ ನಂದಕುಮಾರ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಬಹುತೇಕ ಅಂತಿಮ.
ಮಡಿಕೇರಿ: ಕೊಡಗು ಜಿಲ್ಲೆಯ ಮೂರು ಅಭ್ಯರ್ಥಿಗಳು ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆಯುವುದು ಬಹುತೇಕ ಅಂತಿಮವಾಗಿದೆ ಎಂದು ತಿಳಿದುಬಂದಿದೆ.ಮಡಿಕೇರಿ ಕ್ಷೇತ್ರಕ್ಕೆ ಕೊಡಗಿನಲ್ಲಿ ಅಭಿವೃದ್ಧಿ ಚಿಂತಕ ಎಂಬ ಹೆಸರಿನಿಂದ ಖ್ಯಾತಿ ಹೊಂದಿರುವ ಡಾ. ಮಂತರ್ ಗೌಡ ಹೆಸರು ಅಂತಿಮವಾಗಿದೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಎಲ್ಲ ಸರ್ವೆಗಳಲ್ಲಿ ಮಂಥರ್ ಗೌಡ ಪರವಾದ ಪ್ರಬಲವಾದ ಅಲೆ ಕೊಡಗು ಜಿಲ್ಲೆಯಲ್ಲಿ ವ್ಯಕ್ತವಾಗಿರುವುದು ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದಿದೆ. ಅಲ್ಲದೆ ಮಂತರ್ ಗೌಡ ತನ್ನ ಚಿಂತನೆಯಿಂದ ಕೊಡಗಿನ ಹೊರ ಪ್ರದೇಶದಲ್ಲೂ ತನ್ನ ಇಮೇಜ್ ಸೃಷ್ಟಿ ಮಾಡಿರುವುದು ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ.
ಇನ್ನು ಕಾಂಗ್ರೆಸ್ ಕಾನೂನು ವಿಭಾಗದ ಮುಖ್ಯಸ್ಥರಾಗಿರುವ ವಕೀಲರಾದ ಎಎಸ್ ಪೊನ್ನಣ್ಣ ಹೆಸರು ವಿರಾಜಪೇಟೆ ಕ್ಷೇತ್ರಕ್ಕೆ ಅಂತಿಮವಾಗಿದೆ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ. ತನ್ನ ಟ್ರಸ್ಟಿನ ಮುಖಾಂತರ ಹಲವಾರು ಜನಪರ ಕಾರ್ಯಗಳನ್ನು ನಡೆಸಿರುವ ಪೊನ್ನನ್ನ ಅವರ ಹೆಸರು ಸರ್ವೆಯಲ್ಲೂ ಉತ್ತಮ ವಾಗಿ ಮೂಡಿ ಬಂದಿರುವ ಕಾರಣ ಈ ಹೆಸರು ಅಂತಿಮವಾಗಿದೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಇನ್ನು ಸುಳ್ಯ ಕ್ಷೇತ್ರಕ್ಕೆ ನಂದಕುಮಾರ್ ಅವರ ಹೆಸರು ಅಂತಿಮವಾಗಿದೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಸಂಯೋಜಕರಾದ ನಂದಕುಮಾರ್ ಸುಳ್ಯದಲ್ಲಿ ಜನಪರ ಕೆಲಸಗಳ ಮೂಲಕ ಜನರ ಗಮನವನ್ನು ಸೆಳೆದಿದ್ದರು. ಅಲ್ಲದೆ ಬಹುತೇಕ ಸರ್ವೇಗಳಲ್ಲಿ ಅವರ ಹೆಸರು ಅಂತಿಮವಾಗಿದೆ ಎಂದು ತಿಳಿದುಬಂದಿದೆ. ನಂದಕುಮಾರ್ ಇಡೀ ಸುಳ್ಯ ಕ್ಷೇತ್ರದಲ್ಲಿ ಓಡಾಡಿ ಬಹಳಷ್ಟು ಗಮನ ಸೆಳೆದಿದ್ದರು.
ಈ ವಾರ ಕಾಂಗ್ರೆಸ್ಸಿನ ಪ್ರಥಮ ಪಟ್ಟಿ ಹೊರಬರಲಿದ್ದು ಅಂತಿಮವಾಗಿ ಎಲ್ಲವೂ ಬಹಿರಂಗವಾಗಲಿದೆ ಎಂದು ತಿಳಿದು ಬಂದಿದೆ.