ಶನಿವಾರ, ಜನವರಿ 11, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಂಗಳೂರಿನಲ್ಲಿ ಹಿಮದ ಅನುಭವ ನೀಡುವ ಸ್ನೋ ಫ್ಯಾಂಟಸಿ ಆರಂಭ.!

Twitter
Facebook
LinkedIn
WhatsApp
ಮಂಗಳೂರಿನಲ್ಲಿ ಹಿಮದ ಅನುಭವ ನೀಡುವ ಸ್ನೋ ಫ್ಯಾಂಟಸಿ ಆರಂಭ.!

ಮಂಗಳೂರು: ಎಲ್ಲೆಲ್ಲಿ ನೋಡಿದ್ರು ಹಿಮವೋ ಹಿಮ, ಜಾಕೆಟ್‌ ಇಲ್ಲದೇ ಇರಲು ಸಾಧ್ಯವೇ ಇಲ್ಲ, ಸುತ್ತಲೂ ಮೈ ಕೊರೆಸುವ ಚಳಿ… ಇದೇನಪ್ಪಾ ಇದು, ಮಂಗಳೂರಿನಲ್ಲಿ ಅದು ಈ ಬಿರುಬೇಸಿಗೆಯಲ್ಲಿ ಚಳಿ ಅಂದ್ರೆ ಎಂತ ಮಾರಾಯ್ರೆ ಅಂತ ಕೇಳ್ಬೇಡಿ. ನಿಮಗೂ ಕುಡ್ಲದಲ್ಲಿ ಇಂತಹ ಅನುಭವ ಬೇಕು ಅಂದ್ರೆ ಸ್ನೋ ಫ್ಯಾಂಟಸಿಗೆ ಭೇಟಿ ನೀಡಬೇಕು. ಏನಿದು ಸ್ನೋ ಪ್ಯಾಂಟಸಿ ಅಂತೀರಾ, ಹಾಗಿದ್ರೆ ಮುಂದೆ ಓದಿ.

 

ಹಿಮ ವಾತಾವರಣದ ಮತ್ತು ಮಂಜಿನ ವಿಶೇಷ ಅನುಭವ ನೀಡುವ ಸ್ನೋ ಫ್ಯಾಂಟಸಿ ಈಗ ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಝ್ಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭಗೊಂಡಿದೆ.

ಕೊಯಂಬತ್ತೂರು ಮತ್ತು ಕಲ್ಲಿಕೋಟೆಯ ನಂತರ ಮಂಗಳೂರಿನ ಈ ಪಾರ್ಕ್ ಇವರ ಮೂರನೆಯ ಹೆಗ್ಗುರುತಾಗಿದೆ. ಅದಲ್ಲದೆ ಮಂಗಳೂರಿಗೆ ಇದು ಪ್ರಪ್ರಥಮ.

ಈ ಹಿಮ ಮಳಿಗೆಯೊಳಗೆ ಮಂಜು ಬೀಳುವ ಅನುಭವ, ಡಿಜೆ, ಕಾಫಿ ಶಾಪ್, ಹಿಮ ಪ್ರಾಣಿಗಳ ಚಿತ್ರಗಳನ್ನು ಆಸ್ವಾದಿಸುವ, ಹಾಗೆಯೇ ಹಿಮ ಶಿಖರಗಳ, ಹಿಮ ಕಣಿವೆಯೊಳಗೆ ಓಡಾಡುವ ಅನುಭವ ಅದ್ಭುತ. ಮ್ಯಾಜಿಕಲ್ ಹಿಮಗಳು, ಹಿಮದ ಗುಡ್ಡೆ ಕಟ್ಟುವ ಆಟಗಳು ಇನ್ನು ಅನೇಕ ರೀತಿಯ ವಿಶೇಷಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ.

 

ಮಂಗಳೂರಿನ ಈ ಬಿಸಿಲಿನ ವಾತಾವರಣದಲ್ಲಿ ಚಿಲ್‌ ಅನ್ನಿಸಬೇಕು ಅಂದ್ರೆ ಮನೆ-ಮಂದಿ-ಮಕ್ಕಳೆಲ್ಲಾ ಸೇರಿ ಸ್ನೋ ಫ್ಯಾಂಟಿಸಿಯಲ್ಲಿ ಒಂದು ಸುತ್ತು ಬಂದರೆ ಉತ್ತಮ ಎನ್ನುತ್ತಾರೆ ಸ್ನೋ ಫ್ಯಾಂಟಸಿಯ ಡೈರೆಕ್ಟರ್ ಆದಿತ್ಯ.

ಅಂತರರಾಷ್ಟ್ರೀಯ ಗುಣಮಟ್ಟದ ಈ ಸ್ನೋ ಫ್ಯಾಂಟಸಿಗೆ ಒಳಗೆ ಹೋಗುವವರಿಗೆ ಜಾಕೆಟ್, ಸಾಕ್ಸ್, ಬೂಟ್ ಮುಂತಾದವುಗಳನ್ನ ನೀಡಲಾಗುವುದು. ಅವರ ಆರೋಗ್ಯದ ಕುರಿತು ಮತ್ತು ಅಪಾಯವನ್ನು ತಡೆಗಟ್ಟುವ ಎಲ್ಲಾ ಕಾರ್ಯಕ್ಷಮತೆ, ಸೇಫ್ಟಿ ಫೀಚರ್‌ಗಳನ್ನು ಇಲ್ಲಿ ಅಳವಡಿಸಲಾಗಿದೆ.

 

ನೆಕ್ಸಸ್ ಮಾಲ್‌ ಸಿ.ಓ.ಓ. ಜಯೇನ್ ನಾಯಕ್ ಮಾತನಾಡಿ ʼಈ ಅನುಭವ ನಿಜವಾಗಿಯೂ ವಿಶೇಷ. ಸ್ನೋ ಫ್ಯಾಂಟಸಿ ಫೆಂಟಾಸ್ಟಿಕ್ ಆಗಿದ್ದು ನಮ್ಮ ಮಾಲ್‌ ಅನ್ನು ಆಯ್ಕೆ ಮಾಡಿರುವುದು ಸಂತೋಷʼ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ನೋ ಫ್ಯಾಂಟಸಿಯ ವಿಶೇಷತೆಗಳ ಬಗ್ಗೆ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ ಮಾತನಾಡಿ ʼಮಂಗಳೂರಿನ ಜನತೆ ತಮ್ಮ ಕಿಟಿ ಪಾರ್ಟಿಗಳನ್ನು, ಬರ್ತಡೇ ಹಾಗೂ ಗೆಳೆಯರ ಆಟ-ಕೂಟಗಳನ್ನು ಗ್ರೂಪ್ ಬುಕಿಂಗ್ ಮೂಲಕ ನಡೆಸಿದರೆ ಅವರ ಸಂತೋಷ ದುಪ್ಪಟ್ಟಾಗುವುದು ಖಂಡಿತ” ಎಂದರು.

ಕಂಪನಿಯ ಇನ್ನೊಬ್ಬ ನಿರ್ದೇಶಕ ವಿಪಿನ್ ಝಕಾರಿಯ ಮಾತನಾಡಿ ʼಈ ಪಾರ್ಕ್ ಮಕ್ಕಳಿಗೆ, ಯುವಕರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಸಂತೋಷ ನೀಡುವ ಉದ್ದೇಶದಿಂದಾಗಿ ಆರಂಭವಾಗಿದೆ. ಈ ಪಾರ್ಕ್‌ನಲ್ಲಿ ಯುವ ಜನತೆಗಾಗಿ ಹಲವು ಸಾಹಸ ಕ್ರೀಡೆಗಳನ್ನು ಅಳವಡಿಸಲಾಗಿದೆʼ ಎಂದು ವಿವರಣೆ ನೀಡಿದ್ದಾರೆ.

ʼಅಂತರಾಷ್ಟ್ರೀಯ ಗುಣಮಟ್ಟದ ಸೌಂಡ್ ಸಿಸ್ಟಮ್, ಲೇಸರ್ ಶೋ, ಮ್ಯಾಜಿಕಲ್ ಸ್ನೋ ಫಾಲ್, ರೋಪ್ ವಾಕ್ ಈ ಸ್ನೋ ಫ್ಯಾಂಟಸಿಯ ವಿಶೇಷಗಳುʼ ಎನ್ನುತ್ತಾರೆ ನಿಯೋಸ್ನೋ ಎಮ್ಯೂಸ್ಮೆಂಟ್ ಆಂಡ್ ಪಾರ್ಕ್ ಇಂಡಿಯಾ (ಪ್ರೈ) ಲಿಮಿಟೆಡ್ ಕಂಪನಿಯ ಚೇರ್ಮನ್ ಹಾಗೂ ಮುಖ್ಯಸ್ಥ ಕ್ಯಾಪ್ಟನ್ ಟಿ.ಎಸ್. ಅಶೋಕನ್.

ಕೇರಳದಲ್ಲಿ ಪ್ರಪ್ರಥಮ ಎಮ್ಯೂಸ್ಮೆಂಟ್ ಪಾರ್ಕ್‌ ಅನ್ನು ಮಲಪ್ಪುರಂ ಜಿಲ್ಲೆಯಲ್ಲಿ ನೀಡಿದ ನಾವು ಮಂಗಳೂರಿಗೂ ಈ ಪ್ರಪ್ರಥಮ ಸ್ನೋ ಫ್ಯಾಂಟಸಿಯನ್ನು ನೀಡುತ್ತಿದ್ದೇವೆʼ ಎಂದು ಸಂತಸ ಹಂಚಿಕೊಂಡಿದ್ದಾರೆ.

ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿದಿನ ಈ ಸ್ನೋ ಫ್ಯಾಂಟಸಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯ ಆಡಳಿತ ಅಧಿಕಾರಿ ಬಿಪಿನ್ ಝಕಾರಿಯ, ಮಂಗಳೂರು ಮಾಲ್ ಮುಖ್ಯಸ್ಥ ಅರವಿಂದ್ ಶ್ರೀವಾಸ್ತವ್ ಹಾಗೂ ನೆಕ್ಷಸ್ ಸೆಲೆಕ್ಟ್ ಮಾಲ್ಸ್, ರೀಜನಲ್ ಮುಖ್ಯಸ್ಥ ತನ್ವೀರ್ ಶೇಕ್ ಹೇಳುತ್ತಾರೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist