ಶುಕ್ರವಾರ, ಮಾರ್ಚ್ 29, 2024
ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಕ್ಕಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಆನೆಯ ನೀರಾಟ ನೋಡಿ... ವೈರಲ್ ವಿಡಿಯೋ

Twitter
Facebook
LinkedIn
WhatsApp
ಮಕ್ಕಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಆನೆಯ ನೀರಾಟ ನೋಡಿ… ವೈರಲ್ ವಿಡಿಯೋ

ಆನೆಗಳು ಆಟವಾಡುವುದನ್ನು ಬಹಳ ಇಷ್ಟಪಡುತ್ತವೆ. ಬುದ್ಧಿವಂತ ಪ್ರಾಣಿಗಳಾದ ಆನೆಗಳು ಅದರಲ್ಲೂ ಸಾಕಾನೆಗಳು ಮನುಷ್ಯನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು ಈ ಹಿಂದೆಯೂ ಆನೆಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ಹಿಂದೂ ತೀರ್ಥಕ್ಷೇತ್ರ ಕುಕ್ಕೆ ಸುಬ್ರಮಣ್ಯದ ಆನೆಯ ನೀರಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ 

ಸುಬ್ರಹ್ಮಣ್ಯ ದೇಗುಲದ ಒಳಗೆ ಇರುವ ದ್ವಾದಶಿ ಮಂಟಪದ ಸಮೀಪ ವರಾಂಡದಲ್ಲಿ ನೀರನ್ನು ಬಿಡಲಾಗಿದ್ದು, ಇಲ್ಲಿ ಮಕ್ಕಳೊಂದಿಗೆ ಆನೆ ನೀರಾಟವಾಡುತ್ತಿದೆ. ಮಕ್ಕಳು ಆನೆಗೆ ತಮ್ಮ ಪುಟ್ಟ ಪುಟ್ಟ ಕೈಗಳಲ್ಲಿ ನೀರನ್ನು ಎರಚುತ್ತಿದ್ದರೆ ಇತ್ತ ಆನೆ ತನ್ನ ಕಾಲು ಹಾಗೂ ಸೊಂಡಿಲಿನಲ್ಲಿ ನೀರನ್ನು ಎರಚಿ ಮಕ್ಕಳಿನ್ನು ಒದ್ದೆ ಮಾಡುತ್ತಿದೆ. ಆನೆ ತಮ್ಮನ್ನು ನೀರೆರಚಿ ಒದ್ದೆ ಮಾಡುತ್ತಿದ್ದಂತೆ ಮಕ್ಕಳು ಜೋರಾಗಿ ಬೊಬ್ಬೆ ಹಾಕುತ್ತಾ ಹಿಂದೆ ಸರಿಯುತ್ತಾರೆ. ವಿಡಿಯೋದಲ್ಲಿ ಸುಮಾರು ಮಕ್ಕಳ ಜೊತೆ ದೊಡ್ಡವರು ಕೂಡ ಇದ್ದು ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದನ್ನು ನೀರುಬಂಡಿ ಉತ್ಸವ ಅಥವಾ ಆಟ ಎಂದು ಕರೆಯುತ್ತಾರೆ. ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿಯ ದಿನ ದೇವಾಲಯದ ಪ್ರಾಂಗಣದಲ್ಲಿ ಪೂರ್ತಿ ನೀರು ತುಂಬಿಸಿ ಆನೆ ಯಶಸ್ವಿಯನ್ನು ಅಲ್ಲಿಗೆ ಕರೆತರಲಾಗುತ್ತದೆ. ಅಲ್ಲಿ ಮಕ್ಕಳೊಂದಿಗೆ ಆನೆ ನೀರಲ್ಲಿ ಆಟವಾಡುತ್ತದೆ. 

ಸರ್ಪ ಸಂಸ್ಕಾರಕ್ಕೆ ಖ್ಯಾತಿ ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇದ್ದು, ಸರ್ಪ ಸಂಸ್ಕಾರದ ಕಾರಣಕ್ಕೆ ದೇಶಾದ್ಯಂತ ಪ್ರಸಿದ್ಧವಾಗಿದೆ. ಬಾಲಿವುಡ್ ಸಿನಿಮಾ ತಾರೆಯರಿಂದ ಹಿಡಿದು ಕ್ರಿಕೆಟಿಗರು ಹಾಗೂ ರಾಷ್ಟ್ರಮಟ್ಟದ ರಾಜಕಾರಣಿಗಳು ಕೂಡ ಇಲ್ಲಿಗೆ ಸರ್ಪ ಸಂಸ್ಕಾರ, ಸರ್ಪ ದೋಷ ನಿವಾರಣೆಯ ಕಾರಣಕ್ಕೆ ಆಗಮಿಸುತ್ತಾರೆ. ಅಲ್ಲದೇ ಸರ್ಪ ದೋಷದ ಕಾರಣಕ್ಕೆ ಬೇರೆ ಧರ್ಮದ ಜನರು ಕೂಡ ಇಲ್ಲಿಗೆ ಆಗಮಿಸಿ ಪ್ರಾರ್ಥನೆ ಮಾಡುತ್ತಾರೆ. 

ಪತ್ರಕರ್ತನ ಕಿವಿಹಿಂಡಿ ಮೂಗೆಳೆದ ಆನೆಮರಿ

ಸಾಮಾನ್ಯವಾಗಿ ಆನೆಮರಿಗಳು ಮಕ್ಕಳಂತೆ ಆಟವಾಡುತ್ತಾ ಮೋಜು ಮಾಡಲು ಬಯಸುತ್ತವೆ. ತನ್ನ ಆತ್ಮೀಯರ ಜೊತೆ ಮುದ್ದು ಮಾಡಿಸಿಕೊಳ್ಳಲು ಬಯಸುವ ಆನೆಮರಿಗಳು ತನ್ನ ಪ್ರೀತಿಪಾತ್ರರೊಂದಿಗೆ ಮುದ್ದಾಡುತ್ತಾ ತುಂಟಾಟವಾಡುತ್ತವೆ. ಕೆಲದಿನಗಳ ಹಿಂದೆ ಆನೆಯೊಂದು ಆಟವಾಡುತ್ತಾ ತನ್ನದೇ ಸೊಂಡಿಲಿನ ಮೇಲೆ ಕಾಲಿಟ್ಟು, ನೋವಿನಿಂದ ಚೀರಿಕೊಂಡ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಈಗ ಪುಟ್ಟ ಆನೆಮರಿಯೊಂದು ಪಿಟುಸಿ ನೀಡುತ್ತಿದ್ದ ಪತ್ರಕರ್ತನಿಗೆ ಕೀಟಲೆ ಮಾಡಿ ಆತನ ಪಿಟುಸಿ ಮಾಡಲು ಬಿಡದೇ ಕ್ವಾಟ್ಲೆ ನೀಡಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವಿಡಿಯೋವನ್ನು sheldricktrust ಎಂಬ ಇನಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಪ್ರತಿಯೊಬ್ಬರು ತಾರೆಯಾಗಲು ಬಯಸುತ್ತಾರೆ. ಆನೆಮರಿ ಕಿಂದನಿ, ಪತ್ರಕರ್ತ ಅಲ್ವಿನ್ (Alvin) ಅವರ ವರದಿಗಾರಿಕೆ ನೋಡಿ ಅವರಿಂದ ಪ್ರಭಾವಿತಗೊಂಡು ಕ್ಯಾಮರಾ ಮುಂದೆ ತನ್ನದೇ ಸ್ಟೈಲ್‌ನಲ್ಲಿ ಪೋಸ್ ನೀಡಿ ಎಲ್ಲರ ಗಮನ ಸೆಳೆಯಲು ಮುಂದಾಗಿದೆ ಎಂದು ಬರೆದುಕೊಂಡು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ಕ್ಯಾಮರಾದೆದುರು ಆನೆಮರಿಗಳ ಮುಂದೆ ನಿಂತು sheldricktrustನ ಸೇವಾಕಾರ್ಯಗಳ ಬಗ್ಗೆ ಹೇಳುತ್ತಾ ಅಂತಿಮ ವರದಿ ನೀಡುತ್ತಿದ್ದಾರೆ. ಈ ವೇಳೆ ಕಿಂದನಿ ಹೆಸರಿನ ಆನೆ ಮರಿಯೊಂದು (Elephant calf) ತನ್ನ ಸೊಂಡಿಲಿನಿಂದ ಮೊದಲಿಗೆ ಈ ಪತ್ರಕರ್ತನ ಕಿವಿಯನ್ನು ಚಿವುಟಿದೆ. ನಂತರ ತಲೆಗೆ ಸೊಂಡಿಲಿರಿಸಿ ಆಶೀರ್ವಾದ (Blessings) ಮಾಡಿದಂತೆ ಮಾಡಿ ತಲೆಯಿಂದ ಕೆಳಗೆ ಮುಖದ ಭಾಗದಲ್ಲಿ ಸೊಂಡಿಲನ್ನು ಇಳಿಸಿ ಮೂಗನ್ನು ಎಳೆದು ಮುತ್ತಿಕ್ಕಿದೆ. ಇದರಿಂದ ಪತ್ರಕರ್ತನಿಗೆ ಪೂರ್ತಿ ಕಚಗುಳಿ ಇಟ್ಟಂತಾಗಿದ್ದು, ಆತ ಪಿಟುಸಿ ಮರೆತು ಆನೆಯ ತುಂಟಾಟಕ್ಕೆ ಜೋರಾಗಿ ನಕ್ಕು ಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ