ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಕ್ಕಳನ್ನು ಬಾಧಿಸುವ ಮೆದುಳು ತಿನ್ನುವ ರೋಗ ಕೇರಳದಲ್ಲಿ ಪತ್ತೆ, ಇನ್ನೊಂದು ಕಡೆ ಡೆಂಗ್ಯೂ. ದಕ್ಷಿಣ ಕನ್ನಡದಲ್ಲಿ ಹೈ ಅಲರ್ಟ್ ಆದ ಆರೋಗ್ಯ ಇಲಾಖೆ!

Twitter
Facebook
LinkedIn
WhatsApp
ಮಕ್ಕಳನ್ನು ಬಾಧಿಸುವ ಮೆದುಳು ತಿನ್ನುವ ರೋಗ ಕೇರಳದಲ್ಲಿ ಪತ್ತೆ, ಇನ್ನೊಂದು ಕಡೆ ಡೆಂಗ್ಯೂ. ದಕ್ಷಿಣ ಕನ್ನಡದಲ್ಲಿ ಹೈ ಅಲರ್ಟ್ ಆದ ಆರೋಗ್ಯ ಇಲಾಖೆ!

ಮಕ್ಕಳನ್ನು ಬಾಧಿಸುವ ಮೆದುಳು ತಿನ್ನುವ ರೋಗ ಕೇರಳದಲ್ಲಿ ಪತ್ತೆ, ಇನ್ನೊಂದು ಕಡೆ ಡೆಂಗ್ಯೂ. ದಕ್ಷಿಣ ಕನ್ನಡದಲ್ಲಿ ಹೈ ಅಲರ್ಟ್ ಆದ ಆರೋಗ್ಯ ಇಲಾಖೆ

ಮಂಗಳೂರು: ಕೇರಳದಲ್ಲಿ ಮಕ್ಕಳನ್ನು ಬಾಧಿಸುವ ಅಮೀಬಾದಂತಹ ಕ್ರಿಮಿನಿಂದ ಉಂಟಾಗುವ ರೋಗ ನಾಲ್ಕು ಜನರನ್ನು ಬಲಿ ಪಡೆದಿದ್ದು, ಇದರಿಂದ ದಕ್ಷಿಣ ಕನ್ನಡದ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ ಎಂದು ತಿಳಿದುಬಂದಿದೆ.

ಇನ್ನೊಂದು ಕಡೆ ರಾಜ್ಯದಲ್ಲಿ ಡೆಂಗ್ಯೂ ವ್ಯಾಪಕವಾಗಿದ್ದು ಇದರಿಂದ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ ಎಂದು ತಿಳಿದು ಬಂದಿದೆ.

ಈ ಕುರಿತಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಆರೋಗ್ಯ ಇಲಾಖೆ ಸರ್ವಸನ್ನದ್ಧವಾಗಿದೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಕೇರಳ ರಾಜ್ಯವನ್ನು ಕಾಡುತ್ತಿರುವ ಮೆದುಳು ತಿನ್ನುವ ಅಮೀಬಾ ಎಂದರೇನು? ಇಲ್ಲಿದೆ ವಿವರ

ಕೇರಳ ರಾಜ್ಯದ ಜನರಲ್ಲಿ ಕಳೆದ ಎರಡು ತಿಂಗಳಿನಿಂದ ಅಪರೂಪದ ‘ಮೆದುಳು ತಿನ್ನುವ ಅಮೀಬಾ’ವು ತೀವ್ರವಾದ ಭಯ, ಆತಂಕವನ್ನು ಉಂಟುಮಾಡಿದೆ. ಕೋಝಿಕೋಡ್‌ನಲ್ಲಿ 12 ವರ್ಷದ ಬಾಲಕ, ಕಣ್ಣೂರಿನಲ್ಲಿ 13 ವರ್ಷದ ಬಾಲಕಿ, ಮಲಪ್ಪುರಂ ಜಿಲ್ಲೆಯಲ್ಲಿ 5 ವರ್ಷದ ಮಗು ಸೇರಿದಂತೆ ಒಟ್ಟು 3 ಮಕ್ಕಳು ಸಾವನ್ನಪ್ಪಿದ್ದಾರೆ. ಮತ್ತು ಕೋಝಿಕೋಡ್ ಜಿಲ್ಲೆಯಲ್ಲಿ ಸದ್ಯಕ್ಕೆ 4ನೇ ಪ್ರಕರಣವು ಪತ್ತೆಯಾಗಿದೆ.

ಮೆದುಳು ತಿನ್ನುವ ಅಮೀಬಾ ಎಂದರೇನು?

ಮೆದುಳು ತಿನ್ನುವ ಅಮೀಬಾ ಎಂಬುದು ನೇಗ್ಲೇರಿಯಾ ಫೌಲೆರಿ (Naegleria fowleri) ಎಂಬ ಏಕ-ಕೋಶ ಜೀವಿಯಿಂದ ಉಂಟಾಗುವ ಪ್ರಾಥಮಿಕ ಅಮೀಬಿಕ್ ಮೆನಿಂಜೊಎನ್ಸೆಫಾಲಿಟಿಸ್ (primary amoebic meningoencephalitis) ಎಂಬ ಅಪರೂಪದ ಮೆದುಳಿನ ಸೋಂಕಾಗಿದೆ.

ನೇಗ್ಲೇರಿಯಾ ಫೌಲೆರಿ, ಇದು ಏಕ-ಕೋಶ ಜೀವಿಯಾಗಿದ್ದು, ಇದು ಬೆಚ್ಚಗಿನ ಸಿಹಿನೀರಿನ ಸರೋವರಗಳು, ಕೊಳಗಳು ಮತ್ತು ನದಿಗಳಲ್ಲಿ ಬೆಳೆಯುವ ಅಮೀಬಾವಾಗಿದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಸರಿಯಾಗಿ ನಿರ್ವಹಿಸಲಾಗದ ಈಜುಕೊಳಗಳಲ್ಲಿಯೂ ಸಹ ಇದು ಬದುಕಬಲ್ಲದು.

ಇದು ಸಾಮಾನ್ಯವಾಗಿ ಮೆದುಳಿಗೆ ಸೋಂಕು ತಗುಲಿ ಅಲ್ಲಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಈ ಏಕಕೋಶ ಜೀವಿಯನ್ನು ‘ಮೆದುಳು ತಿನ್ನುವ ಅಮೀಬಾ’ ಎಂದೂ ಕರೆಯುತ್ತಾರೆ.

ಈ ಅಮೀಬಾವನ್ನು 1965ರಲ್ಲಿ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾಯಿತು, ಇದು ತುಂಬಾ ಚಿಕ್ಕದಾಗಿದ್ದು, ಇದನ್ನು ಸೂಕ್ಷ್ಮದರ್ಶಕದಿಂದ ಮಾತ್ರ ನೋಡಬಹುದಾಗಿದೆ.

ಈ ಸೋಂಕು ಬಹಳ ಅಪರೂಪವಾಗಿದ್ದು, ತೀವ್ರವಾಗಿ ಮಾರಣಾಂತಿಕವಾಗಿರುತ್ತದೆ ಮತ್ತು ಈ ಸೋಂಕು ತಗುಲಿದ ಶೇ. 97 ರೋಗಿಗಳು ಬದುಕುಳಿಯುವುದಿಲ್ಲಎಂದು ಈ ಸೋಂಕಿನ ಮೆಡಿಕಲ್ ಇತಿಹಾಸ ತಿಳಿಸುತ್ತದೆ.

ಬೇಸಿಗೆಯಲ್ಲಿ ಜನರು ಸರೋವರಗಳು, ಕೊಳಗಳು ಅಥವಾ ನದಿಗಳಲ್ಲಿ ಈಜಲು ಹೋದಾಗ ಸೋಂಕು ಸಂಭವಿಸುತ್ತದೆ. ನಂತರ ಅಮೀಬಾವು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಮೆದುಳನ್ನು ತಲುಪುತ್ತದೆ. ಮುಂದೆ ಮೆದುಳಿನ ಅಂಗಾಂಶಗಳನ್ನು ನಾಶಪಡಿಸುತ್ತಾ, ಊತ ಉಂಟುಮಾಡುತ್ತದೆ.

ಇತ್ತೀಚಿನ ಪ್ರಕರಣಗಳಲ್ಲಿ ಇದು ಮಕ್ಕಳನ್ನು ಹೆಚ್ಚು ದುರ್ಬಲವಾಗಿ ಕಾಡುತ್ತದೆ. ಬಹಳ ಮುಖ್ಯವಾಗಿ ಈ ಸೋಂಕು ಜನರಿಂದ ಜನರಿಗೆ ಹರಡುವುದಿಲ್ಲ.

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಸೋಂಕು ತಗುಲಿದ ನಂತರ 1 ರಿಂದ 12 ದಿನಗಳಲ್ಲಿ ಮೊದಲ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.

ಆರಂಭಿಕ ಹಂತಗಳಲ್ಲಿ ತಲೆನೋವು, ವಾಕರಿಕೆ ಮತ್ತು ಜ್ವರದಂತಹ ಮೆನಿಂಜೈಟಿಸ್‌ನ ಲಕ್ಷಣಗಳನ್ನು ಹೋಲುತ್ತವೆ.

ಇದು ಸಾಮಾನ್ಯವಾಗಿ ಐದು ದಿನಗಳ ನಂತರ ಕೋಮಾಗೆ ತಿರುಗಿ ಸಾವಿಗೆ ಕಾರಣವಾಗುತ್ತದೆ ಎಂದು ಸಿಡಿಸಿ ಹೇಳುತ್ತದೆ. ಹೆಚ್ಚಿನ ಜನರು ಒಂದರಿಂದ 18 ದಿನಗಳಲ್ಲಿ ಸಾಯುತ್ತಾರೆ.

ವಾತಾವರಣದ ಬೆಚ್ಚಗಾಗುವಿಕೆ ಮತ್ತು ಅನೈರ್ಮಲ್ಯದಿಂದ ಕೂಡಿದ ಜಲ ಮೂಲಗಳು ಸೋಂಕಿಗೆ ಕಾರಣವಾಗುವ ಕೆಲವು ಪರಿಸ್ಥಿತಿಗಳಾಗಿರಬಹುದು ಎಂದು ತಜ್ಞರು ಸೂಚಿಸುತ್ತಾರೆ. ಈ ರೀತಿಯ ಅಮೀಬಾ ಬೆಚ್ಚಗಿನ ನೀರಿನಲ್ಲಿ ಹೆಚ್ಚು ಸಕ್ರಿಯವಾಗಿರುವುದು ಕಂಡುಬರುತ್ತದೆ.

ಮೂಗು ಮತ್ತು ಮೆದುಳನ್ನು ಬೇರ್ಪಡಿಸುವ ಪದರದ ರಂಧ್ರಗಳ ಮೂಲಕ ಅಥವಾ ಕಿವಿಯ ಟಮಟೆಯಲ್ಲಿರುವ ರಂಧ್ರಗಳ ಮೂಲಕ ಅಮೀಬಾ ಮೆದುಳಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ, ಕಿವಿಯಲ್ಲಿ ಸೋಂಕು ಇರುವ ಮಕ್ಕಳು ಕೊಳಗಳಲ್ಲಿ ಅಥವಾ ನಿಶ್ಚಲವಾಗಿ ನಿಂತಿರುವ ಜಲಮೂಲಗಳಲ್ಲಿ ಸ್ನಾನ ಮಾಡದಂತೆ ಸಲಹೆ ನೀಡಲಾಗಿದೆ.

ಪ್ರಸ್ತುತ ಚಾಲನೆಯಲ್ಲಿರುವ ನೀರಿನ ಥೀಮ್ ಪಾರ್ಕ್‌ಗಳು ಮತ್ತು ಈಜುಕೊಳಗಳಲ್ಲಿ ನಿಯಮಿತವಾಗಿ ನೀರನ್ನು ಕ್ಲೋರಿನೇಟ್ ಮಾಡಲು ಮತ್ತು ಜಲಮೂಲಗಳನ್ನು ಸ್ವಚ್ಛವಾಗಿಡಲು ಕೇರಳದ ಸರ್ಕಾರ ನಿರ್ದೇಶನಗಳನ್ನು ನೀಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist