ಮಂಡ್ಯ: ಜಮೀನು ವಿವಾದ, ದಂಪತಿಗೆ ಕಾರಿನಿಂದ ಗುದ್ದಿದ ದುಷ್ಕರ್ಮಿಗಳು, ಪತ್ನಿ ಸಾವು, ಪತಿಗೆ ಗಂಭೀರ ಗಾಯ
Twitter
Facebook
LinkedIn
WhatsApp
ಮಂಡ್ಯ: ಜಮೀನು ವಿವಾದ ಸಂಬಂಧ ದುಷ್ಕರ್ಮಿಗಳು ದಂಪತಿಗೆ ಕಾರಿನಿಂದ ಗುದ್ದಿ ಹತ್ಯೆಗೆ (Murder Attempt) ಯತ್ನಿಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಗಾಣಸಂದ್ರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಜಯಲಕ್ಷ್ಮಿ (45) ಎಂಬವರು ಸಾವನ್ನಪ್ಪಿದ್ದು, ಇವರ ಪತಿ ರಾಮಕೃಷ್ಣಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡಿಸುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ತ ಎಸಗಿದ್ದಾರೆ. ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಗೌಡಯ್ಯ, ಅನಿಲ್, ಗೌಡಯ್ಯನ ಪತ್ನಿ ಖಾಕಿ ವಶಕ್ಕೆ ಪಡೆದಿದ್ದಾರೆ.
ಕೂಡಲೇ ದಂಪತಿಯನ್ನು ಎಸಿ ಗಿರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಜಯಲಕ್ಷ್ಮಿ ಕೊನೆಯುಸಿರೆಳೆದರು. ರಾಮಕೃಷ್ಣಯ್ಯ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.