ಮದುವೆ (Marriage) ಒಂದು ಸುಂದರವಾದ ಅನುಬಂಧ. ದಾಂಪತ್ಯ ಅನ್ನೋ ಹೆಸರಲ್ಲಿ ಇದು ಅಪರಿಚಿತರನ್ನು ಒಗ್ಗೂಡಿಸುತ್ತದೆ. ಎರಡು ಕುಟುಂಬ (Family)ಗಳನ್ನು ಒಂದು ಮಾಡುತ್ತದೆ. ಹೀಗಾಗಿಯೇ ಎಲ್ಲರ ಪಾಲಿಗೆ ಮದುವೆ ಅನ್ನೋದು ದಿ ಬಿಗ್ ಡೇ. ಮದುವೆ ದಿನ ಹೇಗೆ ರೆಡಿಯಾಗ್ಬೇಕು, ಯಾವ ರೀತಿ ಡ್ರೆಸ್ ಮಾಡ್ಕೋಬೇಕು, ಮಂಟಪ ಡೆಕೋರೇಶನ್ ಹೇಗಿರಬೇಕು, ಊಟ ಹೇಗಿದ್ದರೆ ಚೆಂದ ಹೀಗೆ ಎಲ್ಲಾ ರೀತಿಯಲ್ಲಿ ಪ್ರಿಪರೇಶನ್ ಮಾಡಿಕೊಳ್ತಾರೆ. ಇಷ್ಟೆಲ್ಲಾ ತಯಾರಿ (Preparation) ಮಾಡಿಕೊಂಡ್ರೂ ಕೆಲವೊಮ್ಮೆ ಗಡಿಬಿಡಿಯಾಗಿ ಕೆಲವೊಂದು ವಸ್ತುಗಳು ಮರೆತು ಹೋಗೋದಿದೆ. ಆದ್ರೆ ಇಲ್ಲೊಬ್ಬ ವಧು (Bride) ಮರೆತ್ತಿದ್ದು ಸಣ್ಣಪುಟ್ಟ ವಸ್ತುವಲ್ಲ. ವೆಡ್ಡಿಂಗ್ ವಟ್‌ಫಿಟ್‌ನ್ನೇ ಮರೆತುಬಿಟ್ಟಿದ್ದಾಳೆ.
ಮದುವೆಗಿಂತ ನಾಲ್ಕು ಗಂಟೆಯ ಮೊದಲಷ್ಟೇ ತಾನು ಮದುವೆಯ ಉಡುಪನ್ನು (Outfit) ಮರೆತಿರೋದು ಗೊತ್ತಾಗಿದೆ. ಆಕೆಯ ಪ್ರತಿಕ್ರಿಯೆ ವೀಡಿಯೋ ವೈರಲ್ ಆಗಿದೆ. ಮದುವೆಗೆ ನಾಲ್ಕು ಗಂಟೆಗಳ ಮೊದಲು ತನ್ನ ಮದುವೆಯ ಉಡುಪಿಲ್ಲ ಎಂದು ವಧು ಅರಿತುಕೊಂಡ ಕ್ಷಣವನ್ನು ತೋರಿಸುವ ವಧುವಿನ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ (Social media) ಹರಿದಾಡ್ತಿದೆ. ವೀಡಿಯೊವನ್ನು @makemeupbytashikakaur ಅವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮದುವೆಗೆ ನಾಲ್ಕು ಗಂಟೆಯ ಮೊದಲು ಎಲ್ಲಾ ಕಡೆ ಹುಡುಕಾಡಿದ ನಂತರ ಆಕೆಗೆ ಮದುವೆಗೆ ಲೆಹಂಗಾ ಹಾಗೂ ದುಪ್ಪಟ್ಟಾ ಸಿಗುತ್ತದೆ. ಆದರೆ ಜೊತೆಗೆ ಬ್ಲೌಸ್ ಇರುವುದಿಲ್ಲ. ನಂತರ ಆಕೆ ಕಾಕ್ಟೇಲ್ ಪಾರ್ಟಿಯ ಬ್ಲೌಸ್ನ್ನು ಮದುವೆಗೆ ಹಾಕಿಕೊಂಡಳು ಎಂದು ತಿಳಿದುಬಂದಿದೆ. ‘ಯಾವುದೇ ಪರಿಸ್ಥಿತಿ ಸಂಭವಿಸಲಿ, ಸಕಾರಾತ್ಮಕವಾಗಿರಿ’ ಎಂದು ವೈರಲ್ ಆಗಿರೋ ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ. ವೈರಲ್ ಆದ ವಿಡಿಯೋ 2 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ಇಂತಹ ಒತ್ತಡದ (Pressure) ಪರಿಸ್ಥಿತಿಯಲ್ಲೂ ಶಾಂತವಾಗಿರುವ ವಧುವಿನ ಮನಸ್ಥಿತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಒಬ್ಬ ವ್ಯಕ್ತಿ, ‘ನೀವು ನಾನು ನೋಡಿರುವ ಅತ್ಯಂತ ಶಾಂತವಾದ ವ್ಯಕ್ತಿ. ಮದುವೆಗೆ ದಿರಿಸು ಇಲ್ಲ ಎಂದು ತಿಳಿದರೂ ನೀವು ಒಂದು ಸೆಕೆಂಡ್ ಕೂಡಾ ಭಯಪಡಲಿಲ್ಲ. ಇದನ್ನು ಕಣ್ಣಾರೆ ನೋಡಿದಾಗಿನಿಂದ ನಾನು ಕೂಡಾ ತುಂಬಾ ಪ್ರಭಾವಶಾಲಿಯಾಗಿದೆ’ ಎಂದಿದ್ದಾರೆ. ಮತ್ತೊಬ್ಬರು ‘ಇಂಥಾ ಘಟನೆ ನನಗೂ ಸಂಭವಿಸಿದೆ. ಒತ್ತಡಕ್ಕೆ ಒಳಗಾಗದಿದ್ದಕ್ಕಾಗಿ ನಿಮಗೆ ಅಭಿನಂದನೆಗಳು’ ಎಂದು ತಿಳಿಸಿದ್ದಾರೆ.
ಮೂರನೇ ಬಳಕೆದಾರ, ‘ನಾನಾಗಿದ್ದರೆ, ನಾನು ತುಂಬಾ ಅಳುತ್ತಿದ್ದೆ ಮತ್ತು ಮದುವೆ ಮನೆಯಲ್ಲಿ ರಂಪಾಟ ಮಾಡುತ್ತಿದ್ದೆ’ ಎಂದು ಸೇರಿಸಿದರು. ಮತ್ತೊಬ್ಬರು, ‘ಹೀಗೂ ಆಗುತ್ತಾ, ಮದುವೆಯ ದಿನವೇ ವಧುವಿನ ಉಡುಗೆ ಮರೆತು ಹೋಗುತ್ತಾ’ ಎಂದು ಪ್ರಶ್ನಿಸಿದ್ದಾರೆ.
ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿಯರು !
ಮುಂಬೈ: ಮುಂಬೈನಲ್ಲಿ ಐಟಿ ಎಂಜಿನಿಯರ್ ಆಗಿರುವ ಅವಳಿ ಸಹೋದರಿಯರು (Twin sisters) ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಒಬ್ಬನೇ ವ್ಯಕ್ತಿಯನ್ನೇ ವಿವಾಹ (Wedding)ವಾಗಿದ್ದಾರೆ. ಎಲ್ಲರ ಅಚ್ಚರಿಗೆ ಕಾರಣವಾದ ಈ ವಿವಾಹಕ್ಕೆ ಹುಡುಗಿಯ ಹಾಗೂ ಹುಡುಗನ ಕುಟುಂಬದವರು ಸಹ ಒಪ್ಪಿಗೆ ಸೂಚಿಸಿದ್ದಾರೆ. ಸೋಲಾಪುರ ಜಿಲ್ಲೆಯ ಅಕ್ಲುಜ್ ಗ್ರಾಮದಲ್ಲಿ ವಿವಾಹವನ್ನು ಅದ್ಧೂರಿಯಾಗಿ ಮಾಡಲಾಯಿತು. ಆದರೆ, ಇದು ಕಾನೂನುಬದ್ಧವೇ ಅಥವಾ ನೈತಿಕವೇ ಎಂದು ಸಾಮಾಜಿಕ ಜಾಲತಾಣ (Social media)ಗಳಲ್ಲಿ ಜನರು ಕೇಳುತ್ತಿದ್ದಾರೆ. ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಐಟಿ ಇಂಜಿನಿಯರ್‌ಗಳಾಗಿದ್ದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಬ್ಬರು ಸಹೋದರಿಯರು ತಮ್ಮ ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ನೋಡಲು ಸಹ ಇಬ್ಬರೂ ಒಂದೇ ರೀತಿಯಿದ್ದಾರೆ. ಹಾಗೆಯೇ ಜೀವನ (Life)ದಲ್ಲಿಯೂ ಇಬ್ಬರೂ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿತಿ ಅತುಲ್‌ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಅವಳಿ ಸಹೋದರಿಯರ ಮದುವೆಗೆ ಶುಭಾಷಯ (Wishes) ಕೋರಿರೆ, ಇನ್ನು ಕೆಲವರು ಮೀಮ್ಸ್ ಹಾಕಿ ಮದುವೆ ಬಗ್ಗೆ ತಮಾಷೆ ಮಾಡಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist