ಮಂಗಳೂರು: 7 ಲಕ್ಷ ರೂ. ಕರೆಂಟ್ ಬಿಲ್ ನೋಡಿ ಶಾಕ್ ಆದ ಮನೆ ಮಾಲೀಕ!
Twitter
Facebook
LinkedIn
WhatsApp
ಪ್ರತಿ ತಿಂಗಳು 3 ಸಾವಿರ ರೂಪಾಯಿ ಬರುತ್ತಿದ್ದ ಕರೆಂಟ್ ಬಿಲ್ (Electricity Bills) ಏಕಾಏಕಿ 7,71,072 ರೂ. ಬಂದಿದ್ದು ಕರೆಂಟ್ ಬಿಲ್ ನೋಡಿದ ಮಂಗಳೂರಿನ ಓರ್ವ ವ್ಯಕ್ತಿಗೆ ನಿಜಕ್ಕೂ ಶಾಕ್ ಹೊಡೆದಂತಾಗಿದೆ. ಮಂಗಳೂರು ಹೊರವಲಯದ ಉಳ್ಳಾಲ ಬೈಲುನಲ್ಲಿರುವ ಸದಾಶಿವ ಆಚಾರ್ಯ ಎಂಬುವವರು ಏಳು ಲಕ್ಷ ಕರೆಂಟ್ ಬಿಲ್ ಕಂಡು ದಂಗಾಗಿದ್ದಾರೆ. ಮೀಟರ್ ರೀಡರ್ ಯಡವಟ್ಟಿನಿಂದ ಈ ರೀತಿ ಬಿಲ್ ಬಂದಿದ್ದೆ ಎನ್ನಲಾಗುತ್ತಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಮೆಸ್ಕಾಂ ಮೀಟರ್ ರೀಡರ್ ಉಡಾಫೆ ಉತ್ತರ ನೀಡಿ ತೆರಳಿದ್ದಾರೆ.
99,338 ಯೂನಿಟ್ ವಿದ್ಯುತ್ ಬಳಸಿದ್ದೀರಿ ಎಂದು ಮೀಟರ್ ರೀಡರ್ ಹೇಳಿದ್ದಾರೆ. ತಕ್ಷಣ ಮೆಸ್ಕಾಂ ಉಪ ವಿಭಾಗದ ಕಚೇರಿ ಸಂಪರ್ಕಿಸಿದ್ದ ಆಚಾರ್ಯ, ಮೀಟರ್ ರೀಡರ್ ಎಡವಟ್ಟವನ್ನು ಮೆಸ್ಕಾಂ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ತಪ್ಪು ಸರಿಪಡಿಸಿ ಹೊಸದಾಗಿ 2,833 ರೂ. ವಿದ್ಯುತ್ ಬಿಲ್ನ್ನು ಮೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ.