ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!
ಮಂಗಳೂರು: ಮಂಗಳೂರು ಲೋಕಸಭೆ 2024ರ ಚುನಾವಣೆ ಮುಗಿದಿದ್ದು, ಪದ್ಮರಾಜ್ ಹಾಗೂ ಬ್ರಿಜೇಶ್ ಚೌಟ ವಿಜಯದ ಬಗ್ಗೆ ದಕ್ಷಿಣ ಕನ್ನಡದ ಹಳ್ಳಿ ಗಲ್ಲಿಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಈ ನಡುವೆ ಫೇಸ್ಬುಕ್ನಲ್ಲಿ, ವಾಟ್ಸಪ್ ಗಳಲ್ಲಿ ಸಹ ವ್ಯಾಪಕ ಚರ್ಚೆ ಆರಂಭವಾಗಿದೆ. ಬೆಳ್ತಂಗಡಿಯಲ್ಲಿ ಪಡೆಯಲಾಗುವ ನೋಟಾದ ಬಗ್ಗೆ ಬಹುದೊಡ್ಡ ಚರ್ಚೆ ನಡೆಯುತ್ತಿದೆ.
ಈ ನಡುವೆ ನೋಟಾ ಹೆಚ್ಚುವರಿ ಮತ ಪಡೆದರೆ ಅದು ಬಿಜೆಪಿಗೆ ಕಂಟಕವಾಗುತ್ತದೆ ಎಂಬ ಚರ್ಚೆ ಆರಂಭವಾಗಿದೆ.
ಇನ್ನೊಂದು ಕಡೆ ಬಿಲ್ಲವರ ಸುಮಾರು 45 ಶೇಕಡಾ ಮತಗಳಿರುವ ಬೆಳ್ತಂಗಡಿ ಹಾಗೂ ಮೂಡುಬಿದ್ರಿಯಲ್ಲಿ ಯಾರಿಗೆ ಹೆಚ್ಚು ಮತ ಸಿಕ್ಕಿದೆ ಎಂಬುದರ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ.
ಪದ್ಮರಾಜ್ ಬೆಂಬಲಿಗರ ಪ್ರಕಾರ ಮೂಡುಬಿದ್ರಿ ಹಾಗೂ ಬೆಳ್ತಂಗಡಿಯಲ್ಲಿ ಬಿಲ್ಲವರು ಅತಿ ಹೆಚ್ಚು ಸಂಖ್ಯೆಯಲ್ಲಿ ಪದ್ಮರಾಜ್ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ವಾದಿಸುತ್ತಿದ್ದಾರೆ.
ಆದರೆ ಈ ವಾದವನ್ನು ಬಿಜೆಪಿ ಒಪ್ಪುತ್ತಿಲ್ಲ. ಪದ್ಮರಾಜ್ ರವರಿಗೆ ಅತಿ ಹೆಚ್ಚು ಬಿಲ್ಲವರಿರುವ ಬೆಳ್ತಂಗಡಿ , ಮೂಡಬಿದ್ರೆಯಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಅವರ ಪ್ರಭಾವ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಬೆಳ್ತಂಗಡಿ ಹಾಗೂ ಮೂಡುಬಿದ್ರಿಯಲ್ಲಿ ಏನು ಇಲ್ಲ. ಬಿಜೆಪಿಯನ್ನು ಬಿಟ್ಟು ಬಿಲ್ಲವರು ಕಾಂಗ್ರೆಸ್ಸಿಗೆ ಮತ ಹಾಕಿಲ್ಲ ಎಂಬ ವಾದವನ್ನು ಮಂಡಿಸುತ್ತಿದ್ದಾರೆ.
ಅಲ್ಪಸಂಖ್ಯಾತರು ಅಧಿಕವಾಗಿರುವ ಮಂಗಳೂರು (ಉಳ್ಳಾಲ ), ಬಂಟ್ವಾಳ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರದಲ್ಲಿ ಈ ಬಾರಿ ಹೆಚ್ಚು ಮತದಾನವಾಗಿರುವುದು ಕಾಂಗ್ರೆಸ್ಸಿಗೆ ವರದಾನವಾಗಿದೆ ಎಂಬುದನ್ನು ಕಾಂಗ್ರೆಸ್ ಬೆಂಬಲಿಗರು ವಾದಿಸುತ್ತಿದ್ದಾರೆ.
ನೋಟಾದ ಮತಗಳು ನಮಗೆ ಹೆಚ್ಚು ತೊಂದರೆ ಕೊಡಲಿಕ್ಕೆ ಇಲ್ಲ ಎಂಬುದನ್ನು ಬಿಜೆಪಿ ಹೇಳುತ್ತಿದೆ. ಅದರ ಗ್ಯಾರಂಟಿ ಮತಗಳ ಬಗ್ಗೆ ಬಿಜೆಪಿ ಇನ್ನು ಸ್ಪಷ್ಟ ನಿಲುವನ್ನು ಹೊಂದಿಲ್ಲ ಎನ್ನಲಾಗುತ್ತಿದೆ.
ಎರಡು ಪಕ್ಷಗಳು ತಮ್ಮ ತಮ್ಮ ಸಕಾರಾತ್ಮಕ ಅಂಶಗಳ ಮೇಲೆ ವಾದಿಸುತ್ತಿದ್ದು, ಏನಾಗಲಿದೆ ಎಂಬುದನ್ನು ಜೂನ್ ಮೂರರ ಫಲಿತಾಂಶ ಸ್ಪಷ್ಟವಾಗಿ ತಿಳಿಸಲಿದೆ.