ಸೋಮವಾರ, ಜೂನ್ 24, 2024
Sports for change Kho Kho ಪಂದ್ಯಾಟ: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಯನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು-T20 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ-ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ-ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಗುಡ್ ನ್ಯೂಸ್; ಜಾಮೀನು ಮಂಜೂರು..!-ದರ್ಶನ್ ಸೇರಿದಂತೆ 17 ಆರೋಪಿಗಳ ಕಸ್ಟಡಿ ಅಂತ್ಯ; ಇಂದು ನ್ಯಾಯಾಲಯಕ್ಕೆ ಹಾಜರು.!-ರಾಜ್ಯದಲ್ಲಿ ಮುಂಗಾರು ಚುರುಕು; ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!-ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ.!-4 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಬಳಿಸಿ ದಾಖಲೆ ಬರೆದ ಲಾಕಿ ಫರ್ಗುಸನ್..!-ದರ್ಶನ್ ಫಾರಂ ಹೌಸ್ ಮ್ಯಾನೇಜರ್ ನಿಗೂಢ ಸಾವು; ಅನುಮಾನಾಸ್ಪದ ಸಾವು ಪ್ರಕರಣ ದಾಖಲು.!-ಶತಕದತ್ತ ಟೊಮೆಟೊ ದರ; ಮತ್ತಷ್ಟು ಏರಿಕೆಯಾಗಲಿದೆಯೇ ಟೊಮೆಟೊ ಬೆಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರು ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರವರಿಗೆ ಸ್ವಬೂತ್ ನಲ್ಲಿ ಬಹುದೊಡ್ಡ ಹಿನ್ನಡೆ: ಇದರ ಹಿಂದೆ ಇದ್ದಾರೆ ಯುವ ಮುಖಂಡ ಪ್ರಕಾಶ್ ಪೂಜಾರಿ ಗರೋಡಿ

Twitter
Facebook
LinkedIn
WhatsApp
ಮಂಗಳೂರು ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರವರಿಗೆ ಸ್ವಬೂತ್ ನಲ್ಲಿ ಬಹುದೊಡ್ಡ ಹಿನ್ನಡೆ: ಇದರ ಹಿಂದೆ ಇದ್ದಾರೆ ಯುವ ಮುಖಂಡ ಪ್ರಕಾಶ್ ಪೂಜಾರಿ ಗರೋಡಿ

ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ತನ್ನ ಬೂತಿನಲ್ಲೇ ಮತಗಳ ಹಿನ್ನಡೆಯಾಗಿಸುವಲ್ಲಿ ಪ್ರಕಾಶ್ ಪೂಜಾರಿ ಗರೋಡಿ‌ ಯಶಸ್ವಿಯಾಗಿದ್ದರೆ.

ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಕುತೂಹಲದ ಕೇಂದ್ರ ಬಿಂದುವಾಗಿತ್ತು. ಬಹುತೇಕ ಬಿಲ್ಲವ ಮತಗಳನ್ನು ಪದ್ಮರಾಜ್ ರವರು ಪಡೆಯುತ್ತಾರೆ ಎಂದು ಭಾವಿಸಲಾಗಿತ್ತು.

ಆದರೆ ಎಲ್ಲ ನಿರೀಕ್ಷೆಗಳು ನೆಲಕಚ್ಚಿದ್ದು, ಪದ್ಮರಾಜ್ ಕನಿಷ್ಠ ಬಿಲ್ಲವ ಮತಗಳನ್ನು ಪಡೆಯಲು ವಿಫಲರಾಗಿದ್ದಾರೆ ಎಂದು ಚುನಾವಣೆ ಅಂಕಿ ಅಂಶಗಳು ಸಾಬೀತುಪಡಿಸಿವೆ. ಬಿಲ್ಲವರು ಅಧಿಕವಾಗಿರುವ ಮೂಡಬಿದ್ರಿ, ಬೆಳ್ತಂಗಡಿ, ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಪದ್ಮರಾಜ್ ಹೀನಾಯವಾದ ಹಿನ್ನಡೆಯನ್ನು ಅನುಭವಿಸಿರುವುದು ಪದ್ಮರಾಜ್ ಬಿಲ್ಲವರ ನಡುವೆ ಯಾವುದೇ ಪ್ರಭಾವ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಿವೆ.

ಸ್ವಬೂತಿನಲ್ಲಿ ಪದ್ಮರಾಜ್ ಗೆ ಹಿನ್ನಡೆ:-

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತಕ್ಕೆ ಒಳಪಟ್ಟಿರುವ ಬೂತ್ ಸಂಖ್ಯೆ 179 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರ ಸ್ವಂತ ಬೂತ್, ಈ ಬೂತಿನಲ್ಲಿ ಬಿಲ್ಲವ ಸಮುದಾಯದ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದ್ದು ಪದ್ಮರಾಜ್ ಗೆ ಮುನ್ನಡೆ ಸಾಧಿಸುವರೆಂದು ಊಹಿಸಲಾಗಿತ್ತು.

ಲೆಕ್ಕಚಾರ ಬದಲಾಯಿಸಿದ ಪ್ರಕಾಶ್ ಗರೋಡಿ:-
ಇವರ ಲೆಕ್ಕಾಚಾರವನ್ನು ಸವಾಲಾಗಿ ಸ್ವೀಕರಿಸಿದ ಬಿಲ್ಲವ ಸಮುದಾಯದ ಯುವಕ, ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಆಪ್ತ ಪ್ರಕಾಶ್ ಪೂಜಾರಿ ಗರೋಡಿ ತನ್ನ ರಾಜಕೀಯ ತಂತ್ರಗಾರಿಕೆಯಿಂದ ಬಿಲ್ಲವ ಮತವನ್ನು ಸಂಪೂರ್ಣವಾಗಿ ಬಿಜೆಪಿಯೆಡೆಗೆ ತಿರುಗಿಸಿ ಸ್ವಬೂತಿನಲ್ಲಿ ಪದ್ಮರಾಜ್ ಗೆ ಹಿನ್ನಡೆಯಾಗಲು ಕಾರಣೀಕರ್ತರಾಗಿದ್ದಾರೆ.

ಬೂತ್ ಸಂಖ್ಯೆ 179 ರಲ್ಲಿ ಚಲಾಯಿತ ಮತಗಳು (733) ಅದರಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ 463 ಮತ ಪಡೆದರೆ, ಪದ್ಮರಾಜ್ ಪೂಜಾರಿ 266 ಮತಗಳನ್ನು ಪಡೆದಿದ್ದು, ಬಿಜೆಪಿಗೆ 197 ಮತಗಳ ಮುನ್ನಡೆ ಲಭಿಸಿದೆ. ಸ್ವ ಬೂತಿನಲ್ಲಿ ಪದ್ಮರಾಜ್ ಹಿನ್ನಡೆ ಅನುಭವಿಸಲು ಕಾರಣೀಕರ್ತರಾದ ಪ್ರಕಾಶ್ ಪೂಜಾರಿ ಗರೋಡಿ ಪಕ್ಷದ ಮುಖಂಡರ ಪ್ರಶಂಸೆಗೆ ಪಾತ್ರರಾಗಿದ್ದಾರೆ‌.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ