ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳ ನೇಮಕ-ಅರ್ಜಿ ಆಹ್ವಾನ; ಇಲ್ಲಿದೆ ಅಪ್ಡೇಟ್ಸ್
ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL), ‘ಎ’ ಗ್ರೇಡ್ ಮಿನಿರತ್ನ ಕೇಂದ್ರೀಯ ಸಾರ್ವಜನಿಕ ಕ್ಷೇತ್ರದ ಉದ್ದಿಮೆ ಆಗಿದೆ. ಭಾರತದ ಅಗ್ರ ತೈಲ ಕಂಪೆನಿ ಒಎನ್‌ಜಿಸಿ’ಯ ಅಂಗಸಂಸ್ಥೆಯಾಗಿದೆ. ಇಲ್ಲಿ ಪ್ರತಿಭಾನ್ವಿತ, ಕ್ರಿಯಾಶೀಲ ಹಾಗೂ ಮಹತ್ವಾಕಾಂಕ್ಷಿ ವೃತ್ತಿಪರರಿಗೆ ಈ ಕೆಳಗಿನ ಹುದ್ದೆಗಳ ನೇಮಕಾತಿಗೆ ಅವಕಾಶ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಂಆರ್‌ಪಿಎಲ್ ಆಡಳಿತೇತರ ಶ್ರೇಣಿಯ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಕೆಮಿಲ್ ಇಂಜಿನಿಯರ್, ಇಲೆಕ್ಟ್ರಿಕಲ್ ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್, ಕೆಮಿಸ್ಟ್ರಿ , ಡ್ರಾಫ್ಟ್ಸ್‌ಮ್ಯಾನ್ ಹಾಗೂ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ
ಕೆಮಿಲ್ ಇಂಜಿನಿಯರ್- 19.
ಇಲೆಕ್ಟ್ರಿಕಲ್ ಇಂಜಿನಿಯರ್- 5.
ಮೆಕ್ಯಾನಿಕಲ್ ಇಂಜಿನಿಯರ್- 19.
ಕೆಮಿಸ್ಟ್ರಿ – 1.
ಡ್ರಾಫ್ಟ್ಸ್‌ಮ್ಯಾನ್ – 1.
ಸೆಕ್ರೆಟರಿ – 5.
ಆನ್‌ಲೈನ್ ಅರ್ಜಿಗೆ ಲಿಂಕ್ ಬಿಡುಗಡೆ – 22-05-2023 ರ ಬೆಳಿಗ್ಗೆ 10 ಗಂಟೆಗೆ.
ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ- 16-06-2023 ರ ಸಂಜೆ 6 ಗಂಟೆಯವರೆಗೆ.
ಸ್ಪೀಡ್ ಪೋಸ್ಟ್ / ಕೊರಿಯರ್ ಮೂಲಕ ಅರ್ಜಿಯ ಪ್ರತಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ -20-06-2023.
ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ https://www.mrpl.co.in/careers ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
*ಆಧಾರ್ ಕಾರ್ಡ್
*ವಿದ್ಯಾರ್ಹತೆಯ ದಾಖಲೆಗಳು.
*ಭಾವಚಿತ್ರ.