ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ - ಆರೋಪಿಗೆ ಸಾರ್ವಜನಿಕರಿಂದ ಥಳಿತ
Twitter
Facebook
LinkedIn
WhatsApp
![arrest asa 620x406 1](https://urtv24.com/wp-content/uploads/2023/01/arrest-asa-620x406-1.jpg)
ಮಂಗಳೂರು, ಜ 22: ನಗರದ ಕಂಕನಾಡಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದವನಿಗೆ ಸಾರ್ವಜನಿಕರು ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಆರೋಪಿಯನ್ನು ಉಳ್ಳಾಲದ ನಿವಾಸಿ ನವಾಜ್ (35) ಎಂದು ಗುರುತಿಸಲಾಗಿದೆ.
8 ವರ್ಷದ ಬಾಲಕಿ ಗಿಡವೊಂದರಿಂದ ಹಣ್ಣು ಕೀಳುತ್ತಿದ್ದಾಗ ಅಲ್ಲಿಯೇ ಸಮೀಪ ಗಾರೆ ಕೆಲಸ ಮಾಡುತ್ತಿದ್ದ ನವಾಜ್ ಲೈಂಗಿಕ ಕಿರುಕುಳ ನೀಡಿದ್ದು, ಆಗ ಬಾಲಕಿ ಬೊಬ್ಬೆ ಹಾಕಿದ್ದು, ಕೂಡಲೇ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.