ಮಂಗಳೂರು: ನಗರದ ಹೊರವಲಯದ ಶಿಕ್ಷಣ ಸಂಸ್ಥೆ ಮೇಲೆ ಎನ್‍ಐಎ ದಾಳಿ
Twitter
Facebook
LinkedIn
WhatsApp
ಮಂಗಳೂರು ಜ 04: ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎನ್ ಐ ಎ ತಂಡ ನಗರದ ಹೊರವಲಯದ ಶಿಕ್ಷಣ ಸಂಸ್ಥೆಯೊಂದಕ್ಕೆ ದಾಳಿ ನಡೆಸಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಶಾರೀಖ್ ವಿಚಾರಣೆ ನಡೆಸಿದ ಎನ್ ಐ ಎ ಅಧಿಕಾರಿಗಳು ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದ್ದಾರೆ.
ಈಗಾಗಲೇ ಎನ್ ಐಎ ದಿಂದ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಎಂಬಾತ ಇದೇ ಶಿಕ್ಷಣ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದನು. ಬೆಂಗಳೂರಿನಿಂದ ಬಂದಿರುವ ಏಳು ಮಂದಿಯ ತಂಡ ತನಿಖೆ ನಡೆಸುತ್ತಿದೆ.