ಮಂಗಳೂರು: ಕದ್ರಿ ಪಾರ್ಕ್ ಬಳಿ ಅನ್ಯಕೋಮಿನ ಜೋಡಿಗೆ ಹಲ್ಲೆ; ನಾಲ್ವರ ಬಂಧನ
ಮಂಗಳೂರು: ನಗರದಲ್ಲಿ ಹಲ್ಲೆ ನಡೆಸುವ ಕೃತ್ಯಗಳು ಮತ್ತೆ ಮುಂದುವರೆದಿದೆ. ಕದ್ರಿ ಪಾರ್ಕ್ ಗೆ ಬಂದಿದ್ದ ಜೋಡಿಗೆ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಅನ್ಯ ಸಮುದಾಯದ ಯುವಕ ಯುವತಿ ನಗರದ ಕದ್ರಿ ಪಾರ್ಕ್ ಗೆ ಆಗಮಿಸಿತ್ತು ಎಂದು ವರದಿಯಾಗಿದೆ. ಇದನ್ನು ಗಮನಿಸಿದ ಸಂಘಟನೆಯವರು ಅವರನ್ನು ಪ್ರಶ್ನಿಸಿ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಉತ್ತರ ಕರ್ನಾಟಕ ಮೂಲದ ಅನ್ಯಕೋಮಿನ ಜೋಡಿ ಕದ್ರಿ ಪಾರ್ಕ್ ಗೆ ಬಂದಿದ್ದು, ಇದನ್ನು ಪ್ರಶ್ನಿಸಿ ಸಂಘಟನೆ ಹಲ್ಲೆ ನಡೆಸಿದೆ.
ಹಲ್ಲೆ ನಡೆಸಿದ ಬಳಿಕ ಜೋಡಿಯನ್ನು ಕದ್ರಿ ಠಾಣಾ ಪೊಲೀಸರಿಗೆ ಕಾರ್ಯಕರ್ತರು ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ವಿಚಾರಣೆ ನಡೆಸಿದ ಕದ್ರಿ ಠಾಣಾ ಪೊಲೀಸರು ಜೋಡಿಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರಿನಲ್ಲಿ ಬ್ಯಾನರ್ ಕಿರಿಕ್-ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ:
ಪುತ್ತೂರು: ಅಮಿತ್ ಶಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಂಚಿಕೆ ಜಾಥಾದಲ್ಲಿ ಕಿರಿಕ್ ನಡೆದಿದ್ದು, ಬಿಜೆಪಿಯ ಎರಡು ಬಣಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಶಾಸಕ ಸಂಜೀವ ಮಠಂದೂರು ವಿರುದ್ಧ ಕಾರ್ಯಕರ್ತರು ಹರಿಹಾಯ್ದಿದ್ದಾರೆ.
ಅಮಿತ್ ಶಾ ಸ್ವಾಗತಕ್ಕೆ ಹಾಕಿದ ಬ್ಯಾನರ್ ವಿಚಾರದಲ್ಲಿ ಕಿರಿಕ್ ನಡೆದಿದೆ. ಅಮಿತ್ ಶಾಗೆ ಸ್ವಾಗತ ಕೋರಿ ಅರುಣ್ ಕುಮಾರ್ ಪುತ್ತಿಲ ಬ್ಯಾನರ್ ಹಾಕಿದ್ದರು. ಈ ಬ್ಯಾನರ್ ಗೆ ಶಾಸಕ ಸಂಜೀವ ಮಠಂದೂರು ಅಪಹಾಸ್ಯ ಮಾಡಿದ್ದರು. ಮಳೆ ಬಂದಾಗ ಅಣಬೆಯಂತೆ ಕೆಲವರು ಹುಟ್ಟಿಕೊಳ್ಳುತ್ತಾರೆ ಎಂದು ಅಪಹಾಸ್ಯ ಮಾಡಿದ್ದರು.
ಶಾಸಕರ ನಡೆಗೆ ಇದೀಗ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಆಮಂತ್ರಣ ಪತ್ರಿಕೆ ವಿತರಣೆ ಸಂದರ್ಭದಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಅರುಣ್ ಪುತ್ತಿಲ ಬೆಂಬಲಿಗರ ಗುಂಪು ಒತ್ತಾಯಿಸಿದ್ದಾರೆ. ಶಾಸಕ ಮತ್ತು ಪುತ್ತಿಲ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಕಿರಿಕ್ ತಲುಪಿದೆ. ಬಳಿಕ ಸ್ಥಳದಲ್ಲಿದ್ದ ಮುಖಂಡರು ಎರಡು ಗುಂಪುಗಳನ್ನು ಸಮಾಧಾನ ಪಡಿಸಿ ಚದುರಿಸಿದ್ದಾರೆ.