ಶುಕ್ರವಾರ, ಮಾರ್ಚ್ 29, 2024
ನೀತಿ ಸಂಹಿತೆ ಉಲ್ಲಂಘನೆ ಆರೋಪ ; ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಮನ್ಸ್ ಜಾರಿ..!-ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣಕ್ಕೆ ಪವನ್ ಕಲ್ಯಾಣ್ ಸ್ಟಾರ್ ಪ್ರಚಾರಕ.?-ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರು: ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿ ಆವರಣದಲ್ಲಿ ಕ್ರಿ.ಶ 1423 ಕಾಲದ ಶಾಸನ ಪತ್ತೆ

Twitter
Facebook
LinkedIn
WhatsApp
All about coconut tree 5

ಮಂಗಳೂರು: ವಿಜಯನಗರ (Vijaynagar) ಅರಸ ವಿಜಯ ಭೂಪತಿರಾಯರ ಕಾಲದ ಶಾಸನವೊಂದು ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿಯ ಆವರಣದಲ್ಲಿ ಪತ್ತೆಯಾಗಿದೆ. ಈ ಶಸನವನ್ನು ಪ್ಲೀಚ್ ಇಂಡಿಯಾ ಫೌಂಡೇಶನ್‌- ಹೈದರಾಬಾದ್​​ನ ಇತಿಹಾಸ ಮತ್ತು ಪರಾತತ್ವ ಸಂಶೋಧಕ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆಯವರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ದೇವಾಲಯದ ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಶಾಸನವನ್ನು ಸಿಕ್ಕಿದೆ. ಗ್ರಾನೈಟ್ ಕಲ್ಲಿನ ಮೇಲೆ ಕನ್ನಡ ಭಾಷೆಯಲ್ಲಿ “ಸ್ವಸ್ತಿಶ್ರೀ” ಎಂಬ ಮಂಗಳಕರ ಪದ ಮತ್ತು ಗಣೇಶನಿಗೆ ಅರ್ಪಿತವಾದ ಸ್ತೋತ್ರವನ್ನು ಕೆತ್ತಲಾಗಿದೆ ಎಂದು ಶ್ರುತೇಶ್ ಆಚಾರ್ಯರು ತಿಳಿಸಿದ್ದಾರೆ.

ಶಾಸನದ ಮೇಲ್ಭಾಗ ಮಾತ್ರ ದೊರೆತ್ತಿದ್ದು, ಕೆಳಭಾಗ ಮಣ್ಣಿನಲ್ಲಿ ಹುದುಗಿದೆ. ಮೇಲ್ಭಾಗದಲ್ಲಿ ದಕ್ಷಿಣ ಭಾರತೀಯ ಶಾಸನ ಸಂಪುಟ-7, ಶಾಸನ ಸಂಖ್ಯೆ:192ರ ಮೊದಲ 10 ಸಾಲುಗಳನ್ನು ಬರೆಯಲಾಗಿದೆ. ಶಾಸನ 32 ಸಾಲುಗಳನ್ನು ಹೊಂದಿದ್ದು, ಸಮಗ್ರ ಅಧ್ಯಯನ ನಡೆಸಿ ಹೆಚ್ಚಿನ ವಿವರಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕದ್ರಿ ದೇವಸ್ಥಾನದ ಪ್ರಧಾನ ಗುಮಾಸ್ತ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ಶಾಸನದ ಮೇಲ್ಭಾಗದಲ್ಲಿ, ಶಿವಲಿಂಗ, ಸೂರ್ಯ ಮತ್ತು ಚಂದ್ರ, ನಂದಿ ಮತ್ತು ನಂದಾದೀಪ (ದೀರ್ಘಕಾಲದ ವಚನ ದೀಪ) ಚಿತ್ರಗಳನ್ನು ಕಾಣಬಹುದು. ಈ ಶಾಸನವನ್ನು ಕ್ರಿ.ಶ. 1423 ಮಂಗಳೂರಿನ ದೊರೆ ನಾಗಣ್ಣ ಹೊರಡಿಸಿದ್ದಾರೆ. ದೂರ ವಿಜಯ ಭೂಪತಿರಾಯನ ಆಯುಷ್ಯಾಭಿವೃದ್ಧಿಗಾಗಿ ಶಕವರುಷ 1345ನೆಯ ಶೋಭಕೃತ ಸಂವತ್ಸರದ ಚೈತ್ರ ಶುದ್ಧ ಆದಿತ್ಯವಾರ (ಸಾ.ಶ. 21/02/1423) ದಂದು ಶ್ರೀ ತಿಮಿರೇಶ್ವರ ದೇವರಲ್ಲಿ ಶಾಲಂಕಾಯನ ಗೋತ್ರದ ರುಕ್ ಶಾಖೆಯ ನರಹರಿ ಭಟ್ಟರ ಪುತ್ರ ಕೃಷ್ಣ ಭಟ್ಟರು ಮತ್ತು ಆತ್ರೇಯ ಗೋತ್ರದ ಯರ್ಜು ಶಾಖೆಯ ಅನಂತ ಭಟ್ಟರ ಪುತ್ರ ಮಾಯಿ ಭಟ್ಟರಿಂದ ದುರ್ಗಾದೇವಿಯ ಜಪವ ಮಾಡಿಸುತ್ತಾನೆ.

ಈ ವೇಳೆ ಇಬ್ಬರು ಬ್ರಾಹ್ಮಣ ಕೃಷ್ಣ ಭಟ್ಟ ಮತ್ತು ಮಹಿ ಭಟ್ಟರಿಗೆ 120 ಮೂಡೆ ಭತ್ತ ಬೆಳೆಯುವ ಭೂಮಿಯನ್ನು ದಾನವಾಗಿ ನೀಡಿದನ್ನು ಕೆತ್ತಲಾಗಿದೆ. ಈ ದಾನದ ಸಮಯದಲ್ಲಿ ಮಂಗಳೂರಿನ ವಿಜಯನಗರ ಸಾಮ್ರಾಜ್ಯದ ಆಗಿನ ಪ್ರತಿನಿಧಿಯಾಗಿದ್ದ ಬೈಚೆ ದಂಡನಾಯಕ ಉಪಸ್ಥಿತನಿದ್ದನು. ಶಾಸನವು ಮಂಜುನಾಥ ಮತ್ತು ಚಕ್ರಪಾಣಿ ಗೋಪಿನಾಥ ದೇವಸ್ಥಾನಗಳ ಬಗ್ಗೆ ತಿಳಿಸುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ