ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?
ಮಂಗಳೂರು: ಎರಡನೇ ಹಂತದ ಚುನಾವಣೆಯಲ್ಲಿ ಮಂಗಳೂರು , ಉಡುಪಿ, ಕೊಡಗು ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯದ ಸೀಟುಗಳಲ್ಲಿ ಬಿಜೆಪಿ ಉದ್ದೇಶ ಪೂರ್ವಕವಾಗಿ ಡಲ್ ಪ್ರಚಾರವನ್ನು ನಡೆಸಿ ತಂತ್ರಗಾರಿಕೆ ಮೆರೆದಿದೆ ಎಂಬ ಅನುಮಾನ ಈಗ ರಾಜಕೀಯ ಪಂಡಿತರಲ್ಲಿ ಆರಂಭವಾಗಿದೆ.
ಆರಂಭದಲ್ಲಿ ಟಿಕೆಟ್ ನೀಡುವಾಗ ಸ್ವಾದಿ ಸೇರಿದಂತೆ ಅನಂತ್ ಕುಮಾರ್, ನಳಿನ್ ಕುಮಾರ್, ಪ್ರತಾಪ್ ಸಿಂಹ ಇಂತಹ ಉಗ್ರವಾಗಿ ಹಿಂದುತ್ವದ ಪರವಾಗಿ ಮಾಧ್ಯಮಗಳಲ್ಲಿ ಮಾತನಾಡುವ ತಮ್ಮ ನಾಯಕರುಗಳಿಗೆ ಟಿಕೆಟ್ ನೀಡದೆ ಆರಂಭದಲ್ಲಿ ಸಾಫ್ಟ್ ಪ್ರಚಾರದ ಮುನ್ಸೂಚನೆಯನ್ನು ಬಿಜೆಪಿ ನೀಡಿತ್ತು. ಆ ಮೂಲಕ ಉಗ್ರ ಹಿಂದುತ್ವದ ಪ್ರತಿಪಾದನೆಯನ್ನು ಈ ಚುನಾವಣೆಯಲ್ಲಿ ಬಿಜೆಪಿ ಮಾಡುವುದಿಲ್ಲ ಎಂಬುದನ್ನು ಕಾಂಗ್ರೆಸ್ನ ರಾಜಕೀಯ ಪಂಡಿತರು ಹಾಗೂ ಚುನಾವಣಾ ತಂತ್ರಗಾರಿಕೆ ಮಾಡುವವರು ಯೋಚಿಸಿದ್ದರು ಎನ್ನಲಾಗಿದೆ.
ಅದಕ್ಕೆ ಪೂರಕವಾಗಿ ಅಭಿವೃದ್ಧಿ ವಿಷಯಗಳು, ವಿಕಸಿತ ಭಾರತದಂತಹ ವಿಷಯಗಳನ್ನು ಬಿಜೆಪಿ ಏಳು ಹಂತದ ಚುನಾವಣೆಗಳಲ್ಲಿ ಪ್ರತಿಪಾದಿಸುತ್ತದೆ ಎಂದು ಕಾಂಗ್ರೆಸ್ಸಿಗೆ ತಂತ್ರಗಾರಿಕೆ ನಡೆಸುತ್ತಿದ್ದವರ ಪ್ರತಿಪಾದನೆಯಾಗಿತ್ತು.
ಇದರ ಪ್ರಕಾರವಾಗಿ ಇಡೀ ಕಾಂಗ್ರೆಸ್ನ ಹೈಕಮಾಂಡ್ ಹಾಗೂ ತಂತ್ರಗಾರರು ಹಿಂದುತ್ವದ ಪ್ರಯೋಗ ಶಾಲೆ, ಮಂಗಳೂರು ಉಡುಪಿ-ಚಿಕ್ಕಮಗಳೂರು ಗಳಲ್ಲಿ ಬಿಜೆಪಿ ನಡೆಸುತ್ತಿರುವ ಪ್ರಚಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಅದರಲ್ಲೂ ಮುಖ್ಯವಾಗಿ ಮಂಗಳೂರಿನಲ್ಲಿ ಬಿಜೆಪಿ ಡಲ್ ಪ್ರಚಾರ ನಡೆಸಿರುವುದು ಕಾಂಗ್ರೆಸ್ ನ ರಣತಂತ್ರ ಕಾರರಿಗೆ ಬಿಜೆಪಿ ಈ ಸಲ ಹಾರ್ಡ್ ಕೋರ್ ಹಿಂದುತ್ವದ ಬಗ್ಗೆ ಪ್ರಚಾರ ನಡೆಸುವುದಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದರು. ಅದರ ಪ್ರಕಾರವಾಗಿ ತಮ್ಮ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಕಂಟೆಂಟ್ ಗಳನ್ನು ಸಿದ್ಧಪಡಿಸಿದ್ದರು.
ರಾಜಕೀಯ ಪಂಡಿತರ ಪ್ರಕಾರ ಮಂಗಳೂರು ನಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಡಲ್ ಪ್ರಚಾರ ನಡೆಸಿ ಕಾಂಗ್ರೆಸ್ಸಿನ ದಾರಿ ತಪ್ಪಿಸಿ, ಈಗ ಬಿಜೆಪಿಯ ಬಹುಮುಖ್ಯ ಪ್ರಾಬಲ್ಯದ ಭಾಗಗಳಾದ ಉತ್ತರ ಭಾರತದಲ್ಲಿ ತನ್ನ ಮೊದಲೇ ಹೆಣೆದ ತಂತ್ರಗಾರಿಕೆಯಂತೆ ಹಾರ್ಡ್ ಕೋರ್ ಹಿಂದುತ್ವದ ವಿಷಯಗಳನ್ನು ಪ್ರಸ್ತಾಪಿಸುತ್ತಿರುವುದು ಕಾಂಗ್ರೆಸಿಗೆ ಶಾಕ್ ನೀಡಿದೆ ಎನ್ನಲಾಗುತ್ತಿದೆ.
ಮಂಗಳೂರಿನಲ್ಲಿ ನೀಡಿದ ತಪ್ಪು ಮಾಹಿತಿಗಳು, ತಪ್ಪು ಅಂದಾಜುಗಳಿಂದ ಕಾಂಗ್ರೆಸ್ನ ಹೈಕಮಾಂಡ್ ಮಟ್ಟದ ಪ್ರಚಾರ ಈಗ ಹಿಂದಿಯ ಹಿಂದುತ್ವದ ರಾಜ್ಯಗಳಲ್ಲಿ ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿರುವುದು, ಬಿಜೆಪಿಯನ್ನು ಸುಲಭವಾಗಿ ಮುನ್ನೂರರ ಗರಿ ದಾಟುವಂತೆ ಮಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಮಂಗಳೂರಿನ ಚುನಾವಣೆಯ ನಂತರ ನರೇಂದ್ರ ಮೋದಿಯವರು ಸತತವಾಗಿ ಕಠಿಣವಾದ ಹಿಂದುತ್ವದ ವಿಷಯಗಳನ್ನು ಪ್ರಸ್ತಾಪಿಸುತ್ತಿರುವುದು ಅದನ್ನು ಎದುರಿಸಲು ಕಾಂಗ್ರೆಸ್ ಈಗ ಚುನಾವಣೆ ನಡುವೆ ಸಿದ್ಧವಾಗಬೇಕಾದ ಅನಿವಾರ್ಯತೆ ಸಿಲುಕಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ.
ಮಂಗಳೂರಿನಲ್ಲಿ ನೀಡಲ್ಪಟ್ಟ ತಪ್ಪು ಮಾಹಿತಿ ಆಧಾರದ ಮೇಲೆ ಕಾಂಗ್ರೆಸ್ ಈಗ ಉತ್ತರ ಭಾರತದ ರಾಜ್ಯಗಳಲ್ಲಿ ಬಿಜೆಪಿಯಿಂದ ಅನಿರೀಕ್ಷಿತವಾದ ಮಾತಿನ ದಾಳಿಗಳನ್ನು ಎದುರಿಸಬೇಕಾಗಿ ಬಂದಿರುವುದು ಈ ಚುನಾವಣೆಯ ಟರ್ನಿಂಗ್ ಪಾಯಿಂಟ್ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ನಿಜವಾಗಿ ಕಾಂಗ್ರೆಸ್ ಅನ್ನು ದಾರಿ ತಪ್ಪಿಸಲು, ಮಂಗಳೂರಿನಲ್ಲಿ ಹಾಗೂ ಉಡುಪಿಯಲ್ಲಿ ಬಿಜೆಪಿ ಹೆಣೆದ ರಣತಂತ್ರಕ್ಕೆ ಈಗ ಉತ್ತರ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ಬೆಲೆ ತೇರುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.