ಭ್ರಷ್ಟಾಚಾರ ಆರೋಪ : ಹಾವೇರಿ ಶಾಸಕ ನೆಹರೂ ಓಲೇಕಾರ್ ಗೆ 2 ವರ್ಷ ಜೈಲು ಶಿಕ್ಷೆ!
ಬೆಂಗಳೂರು (ಫೆ.13): ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಶಿಕ್ಷೆ ಪ್ರಕರಣದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಓಲೆಕಾರ್ ಅವರಿಗೆ 2ವರ್ಷ ಜೈಲುಶಿಕ್ಷೆಯನ್ನು ವಿಧಿಸಿ ಬೆಂಗಳೂರಿನ 91 ಸಿಸಿಹೆಚ್ ಕೋರ್ಟ್ ಆದೇಶವನ್ನು ಹೊರಡಿಸಿದೆ.ಇನ್ನು ಶಾಸಕ ನೆಹರು ಓಲೆಕಾರ್ ಅವರೊಂದಿಗೆ ಅವರ ಇಬ್ಬರು ಮಕ್ಕಳಿಗೂ 2ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಲಾಗಿದೆ. ನೆಹರು ಓಲೆಕಾರ್ ಮಕ್ಕಳಾದ ದೇವರಾಜ್ ಓಲೆಕಾರ್ ಹಾಗೂ ಮಂಜುನಾಥ್ ಓಲೆಕಾರ್ ಅವರೂ ಜೈಲು ಸೇರಲಿದ್ದಾರೆ. ಬೆಂಗಳೂರಿನ 91 ಸಿಸಿಹೆಚ್ ಕೋರ್ಟ್ ನಿಂದ ಆದೇಶ ಹೊರಡಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಶಿಕ್ಷೆ ಪ್ರಕಟ ಮಾಡಲಾಗಿದೆ. 2 ವರ್ಷ ಜೈಲು ಜೊತೆಗೆ 2ಸಾವಿರ ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ.
ಇನ್ನು ಮತ್ತೊಂದೆಡೆ ಹೊಸಕೋಟೆ ನಗರದ ಎಂವಿಜೆ ಕಾಲೇಜು ಬಳಿ ಸರಣಿ ಸಪಘಾತ ಸಂಭವಿಸಿದೆ. ಘಟನೆಯಲ್ಲಿ ಟಿಟಿ ವಾಹನ, ಬೈಕ್, ಕ್ಯಾಂಟರ್ ನಡುವೆ ಡಿಕ್ಕಿಯಾಗಿದ್ದು ಮೂವರಿಗೆ ಗಾಯಗಳಾಗಿವೆ.
ಭ್ರಷ್ಟಾಚಾರದ ಆರೋಪ: ಹಲವಾರು ಲೋಕೋಪಯೋಗಿ ಗುತ್ತಿಗೆಗಳನ್ನು ಶಾಸಕರ ಕುಟುಂಬದವರೇ ಪಡೆದುಕೊಂಡಿದ್ದಾರೆ. ಎಂ.ಜಿ.ತಿಮ್ಮಾಪುರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 5 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಗುತ್ತಿಗೆ ಪಡೆದಿದ್ದಾರೆ ಮತ್ತು ನೆಲೋಗಲ್ ಗ್ರಾಮ ಮತ್ತು ತೋಟದ ಯಲ್ಲಾಪುರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಸಹ ಪಡೆದುಕೊಂಡಿದ್ದಾರೆ. ಹಾವೇರಿ ತಾಲೂಕಿನ ಗ್ರಾಮ ಹಾಗೂ ಸವಣೂರು ತಾಲೂಕಿನ ಹೊನ್ನಿಕೊಪ್ಪ ಗ್ರಾಮಗಳಲ್ಲಿ ಪ್ರತಿ ಗುತ್ತಿಗೆ ಅಂದಾಜು 5 ಲಕ್ಷ ರೂ.ನಂತೆ ಗುತ್ತಿಗೆ ಪಡೆದಿದ್ದಾರೆ. ಜೊತೆಗೆ, ಬೇರೊಬ್ಬರು ಯಾರೂ ಟೆಂಡರ್‌ನಲ್ಲಿ ಭಾಗವಹಿಸದಂತೆ ಬೆದರಿಕೆ ಹಾಕಿದ್ದಾರೆ. ಕಾನೂನಿಗೆ ತಿಳಿದಿಲ್ಲದ ಇತರ ಯಾವುದೇ ವ್ಯಕ್ತಿಗೆ ಗುತ್ತಿಗೆಗಳನ್ನು ಪಡೆಯಲು ಅವಕಾಶ ನೀಡದೆ ಎಲ್ಲಾ ಸರ್ಕಾರಿ ಗುತ್ತಿಗೆಗಳನ್ನು ತಮ್ಮ ಮನೆಯವರೇ ಪಡೆದುಕೊಂಡು ನಿರ್ವಹಣೆ ಮಾಡಿದ್ದರು. ಇದರಲ್ಲಿ ಭಾರಿ ಪ್ರಮಾಣದ ಅಕ್ರಮ ಎಸಗಿದ್ದು, ಭ್ರಷ್ಟಾಚಾರದ ಆರೋಪ ಕೂಡ ಎದುರಾಗಿತ್ತು. ಭ್ರಷ್ಟಾಚಾರ ಆರೋಪ ಕುರಿತಂತೆ ಈ ಬಗ್ಗೆ ಹಾವೇರಿ ಜಿಲ್ಲಾ ಪೊಲೀಸರು ತನಿಖೆ ಕೈಗೊಂಡು ಆರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಇದಕ್ಕೆ ಸಂಬಂಧಿಸದಂತೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮಾಡಿದಾಗ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ. ೀ ಹಿನ್ನೆಲೆಯಲ್ಲಿ ಸಾರ್ವಜನಿಕ ಹಣದ ದುರುಪಯೋಗ ಹಾಗೂ ಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆಯನ್ನು ಪ್ರಕಟಿಸಲಾಗಿದೆ.