ಭೇದ ಭಾವ ಮಾಡದ ಪ್ರಕೃತಿಯಿಂದಲೂ ಪಾಠ ಕಲಿಯದ ಬಲಪಂಥೀಯರು: ನಟ ಪ್ರಕಾಶ್ ರಾಜ್
Twitter
Facebook
LinkedIn
WhatsApp
ಮೈಸೂರು: ಭೇದ ಭಾವ ಮಾಡದ ಪ್ರಕೃತಿಯಿಂದಲೂ ಬಲಪಂಥೀಯರು ಪಾಠ ಕಲಿಯಲಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೀಮಾ ಕೋರೆಗಾಂವ್ 205ನೇ ವಾರ್ಷಿಕೋತ್ಸವ ಪ್ರಯುಕ್ತ ಜಯನಗರ ರೈಲ್ವೆ ಗೇಟ್ ಬಳಿ ಇರುವ ಕೋರೆಂಗಾವ್ ಸ್ಥಂಭಕ್ಕೆ ರವಿವಾರ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ”ಭೀಮಾ ಕೋರೆಂಗಾವ್ ವಿಜಯೋತ್ಸವ ದೇಶದ ಸ್ವಾಭಿಮಾನದ ಸಂಕೇತವಾಗಿದ್ದು, ಇದು ಜೈಭೀಮ್ ಅನುಯಾಯಿಗಳ ಅಸ್ಮಿತೆ ಮತ್ತು ಅಸ್ತಿತ್ವ. ಇದನ್ನು ಸಹಿಸಿಕೊಳ್ಳದ ಮನಸ್ಸುಗಳು ಈ ಚರಿತ್ರೆಯನ್ನು ತಿದ್ದಲು ಹುನ್ನಾರ ನಡೆಸಿವೆ. ಆದರೆ, ಇದು ಸಾಧ್ಯವಿಲ್ಲ” ಎಂದರು.