ಭೀಕರ ಸ್ಫೋಟ – ಡೈರಿ ಫಾರ್ಮ್‌ನಲ್ಲಿದ್ದ 18,000 ಹಸುಗಳು ಸಾವು
ವಾಷಿಂಗ್ಟನ್: ಡೈರಿ ಫಾರ್ಮ್ (Dairy Farm) ಒಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ (Explosion) ಅದರಲ್ಲಿದ್ದ ಬರೋಬ್ಬರಿ 18 ಸಾವಿರ ಹಸುಗಳು (Cows) ಸಾವನ್ನಪ್ಪಿರುವ ಭೀಕರ ಘಟನೆ ಅಮೆರಿಕದ (America) ಟೆಕ್ಸಾಸ್‌ನಲ್ಲಿ (Texas) ನಡೆದಿದೆ.
ಸ್ಫೋಟ ಸ್ಥಳೀಯ ಕುಟುಂವೊಂದರ ಡೈರಿ ಫಾರ್ಮ್‌ನಲ್ಲಿ ನಡೆದಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಬಗ್ಗೆ ಡೈರಿಯ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಫೋಟೋಗಳು ಹರಿದಾಡಿವೆ. ಸ್ಫೋಟದ ಬಳಿಕ ಸ್ಥಳದಲ್ಲಿ ಭಾರೀ ಬೆಂಕಿ ಉದ್ಭವವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿದ್ದು, ಫಾರ್ಮ್‌ನಲ್ಲಿ ಸಿಲುಕಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಸಾರ್ವಜನಿಕರ ಸುರಕ್ಷತೆಗಾಗಿ ಫಾರ್ಮ್‌ನ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ಅಮೆರಿಕದಲ್ಲಿ ಜಾನುವಾರುಗಳ ಕೊಟ್ಟಿಗೆಗಳಲ್ಲಿ ಬೆಂಕಿಯಂತಹ ಘಟನೆಗಳು ನಡೆದಿರುವುದು ಮೊದಲೇನಲ್ಲ. 2013 ರಿಂದ ಇಂತಹ ಘಟನೆಗಳನ್ನು ಅಮೆರಿಕದಲ್ಲಿ ಪತ್ತೆಹಚ್ಚಲಾಗುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಕೋಳಿ ಫಾರ್ಮ್‌ಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ವರದಿಯಾಗಿದೆ. ಆದರೆ ಟೆಕ್ಸಾಸ್‌ನಲ್ಲಿ ನಡೆದ ಸ್ಫೋಟ ಅಮೆರಿಕದ ಡೈರಿ ಫಾರ್ಮ್‌ನಲ್ಲಿ ನಡೆದಿರುವ ಅತ್ಯಂತ ಭೀಕರ ಘಟನೆ ಎನಿಸಿಕೊಂಡಿದೆ.