ಭಾರತದಲ್ಲೇ ಇರ್ತೀನಿ, ಗಂಡನ ಜೊತೆಯಲ್ಲಿಯೇ ಸಾಯ್ತೀನಿ- ಪಾಕ್ ಯುವತಿ ಇಕ್ರಾ ಜಿವಾನಿ
ಬೆಂಗಳೂರು: ನಾನು ಇರೋದಾದ್ರೆ ಭಾರತ (India) ದಲ್ಲಿಯೇ ಇರ್ತೀನಿ. ಗಂಡನ ಜೊತೆಯಲ್ಲಿಯೇ ಸಾಯ್ತೀನಿ. ಹೀಗಂತ ಪಾಕಿಸ್ತಾನದ ಮಹಿಳೆ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ. ನಾನು ಪ್ರೀತಿಸಿ ಪ್ರೀತಿಗಾಗಿ ಅಲ್ಲಿಂದ ಬಂದಿದ್ದೇನೆ ನಾನು ಆತನನ್ನು ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾಳೆ.
ಪ್ರೀತಿಗಾಗಿ ದೇಶವನ್ನೇ ಬಿಟ್ಟು ಬಂದು ಭಾರತದ ಪ್ರಜೆಯನ್ನು ಮದುವೆಯಾಗಿರೋ ಪಾಕಿಸ್ತಾನ (Pakistan) ದ ಮಹಿಳೆ ಮತ್ತೊಂದು ವರಸೆ ತೆಗೆದಿದ್ದಾಳೆ. ನಾನು ಪ್ರೀತಿಸಿ ಅಲ್ಲಿಂದ ಬಂದಿದ್ದೀನಿ ತವರಿಗೆ ಹೋಗಲು ಒಲ್ಲೆ ಎನ್ನುತ್ತಿದ್ದಾಳಂತೆ ಇಕ್ರಾ ಜಿವಾನಿ. ಇಲ್ಲಿಯೇ ಇರುತ್ತೇನೆ ಅಂತೀರೋ ಪಾಕ್ ಯುವತಿ ಹೇಳಿದ್ದು, ನಾನು ಪಾಕಿಸ್ತಾನಕ್ಕೆ ಹೋಗಲ್ಲ, ನಾವಿಬ್ಬರು ಮದುವೆ (Marriage) ಯಾಗಿದ್ದೀವಿ. ಮುಲಾಯಂ ಸಿಂಗ್ ಯಾದವ್ ಬಿಟ್ಟು ಹೋಗಲ್ಲ ಎಂದು ಯುವತಿ ಪಟ್ಟು ಹಿಡಿದಿದ್ದಾಳಂತೆ ಯುವತಿ ವರಸೆಯಿಂದ ಪೊಲೀಸರಿಗೆ ಹೊಸ ತಲೆಬಿಸಿಯಾಗಿದೆ.
ಯುವತಿ ಮಾತಿಗೆ ಸೊಪ್ಪು ಹಾಕದ ಪೊಲೀಸರು: ಯುವತಿ ಭಾರತ ಬಿಟ್ಟು ಹೋಗೋದಿಲ್ಲ ಅಂತ ಪಟ್ಟು ಹಿಡಿದಿದ್ದಾಳೆ. ಆದರೆ ಕಾನೂನಿನಲ್ಲಿ ಇದಕ್ಕೆಲ್ಲಾ ಅವಕಾಶ ಇಲ್ಲ. ಯುವತಿ ಒಲ್ಲೆ ಎಂದರೂ ಆಕೆಯನ್ನ ಡಿಪೋರ್ಟ್ ಮಾಡಲು ಬೇಕಾದ ಪ್ರಕ್ರಿಯೆ ನಡೆಸುತ್ತಾ ಇದ್ದಾರೆ. ಸದ್ಯ ಪೊಲೀಸರು ಮತ್ತು ಎಫ್‍ಆರ್ ಆರ್ ಒ ಅಧಿಕಾರಿಗಳು ಯುವತಿ ಭಾರತಕ್ಕೆ ಬಂದಿರೋದೇ ಅಕ್ರಮವಾಗಿ, ಹೀಗಾಗಿ ಯುವತಿಯನ್ನ ಪಾಕಿಸ್ತಾನಕ್ಕೆ ಕಳಿಸಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರದ ಸಂಬಂಧಪಟ್ಟ ಏಜೆನ್ಸಿಗಳ ಜೊತೆ ಎಫ್‍ಆರ್‍ಆರ್‍ಓ ಸಂಪರ್ಕ ಮಾಡಿದ್ದಾರೆ. ಪಾಕ್ ಯುವತಿ ವಾಪಸ್ ಕಳಿಸಲು ಕನಿಷ್ಠ ಎರಡು ತಿಂಗಳ ಸಮಯ ಬೇಕಾಗುತ್ತೆ. ಹೀಗಾಗಿ ಎರಡು ದೇಶಗಳ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಯುವತಿಯನ್ನ ವಾಪಸ್ ಕಳಿಸಬೇಕು. ಸದ್ಯ ಯುವತಿಯನ್ನ ಡಿಪೋರ್ಟ್ ಮಾಡಲು ಬೇಕಾದ ಕಾನೂನು ಪ್ರಕ್ರಿಯೆ ಪರಿಶೀಲನೆಯನ್ನು ಎಫ್‍ಆರ್ ಆರ್ ಓ ಮತ್ತು ಪೊಲೀಸರು ನಡೆಸಿದ್ದಾರೆ.
ಪಾಕ್ ಯುವತಿ ಇಕ್ರಾ ಜಿವಾನಿ ಮತ್ತು ಮುಲಾಯಂ ಸಿಂಗ್ (Mulayam Singh Yadav) ಮದುವೆ ಬಗ್ಗೆಯೇ ಖಾಕಿಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರ ವಿಚಾರಣೆ ವೇಳೆ ಇಬ್ಬರು ಮದುವೆಯಾಗಿದ್ದೀವಿ ಎಂದಿದ್ದಾರೆ. ಆದರೆ ಮದುವೆಯಾದ ಬಗ್ಗೆ ಯಾವುದೇ ಅಧಿಕೃತ ದಾಖಲೆ, ಫೋಟೊಗಳಿಲ್ಲ. ಮದುವೆಯಾದ ಬಗ್ಗೆ ಮ್ಯಾರೇಜ್ ಸರ್ಟಿಫಿಕೆಟ್ ಕೂಡ ಇಲ್ಲ. ಬೇರೆ ದಾಖಲಾತಿಗಳು ಕೂಡ ಪತ್ತೆಯಿಲ್ಲ. ಈ ರೀತಿ ಮದುವೆಯನ್ನ ಒಪ್ಪಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ವಿದೇಶಿ ಮಹಿಳೆಯನ್ನ ಮದುವೆಯಾದಾಗ ಕಾನೂನಾತ್ಮಕ ದಾಖಲೆ ಇರಬೇಕು. ಮುಲಾಯಂ ಸಿಂಗ್ ಯಾದವ್ ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರ ಸಿದ್ಧ ಮಾಡಿಕೊಳ್ತಾ ಇದ್ದಾರೆ. ಸದ್ಯ ಈ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿರೋ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.