ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಭದ್ರತಾ ಪಡೆ ಮೇಲೆ ದಾಳಿ: ಮೂವರನ್ನು ನೇಣುಗಂಬಕ್ಕೆ ಏರಿಸಿದ ಇರಾನ್‌ ಸರ್ಕಾರ

Twitter
Facebook
LinkedIn
WhatsApp
f 2

ಇರಾನ್:‌ ಕಳೆದ ವರ್ಷ ಮಹ್ಸಾ ಅಮಿನಿಯ ಸಾವಿನ ಘಟನೆ ನಡೆದ ನಂತರ ಪ್ರತಿಭಟನೆ ಸಂದರ್ಭದಲ್ಲಿ ಭದ್ರತಾ ಪಡೆಯ ಯೋಧರನ್ನು ಕೊಂದ ಆರೋಪದಲ್ಲಿ ಇರಾನ್‌ ಸರ್ಕಾರ ಮೂವರನ್ನು ನೇಣುಗಂಬಕ್ಕೆ ಏರಿಸಿದ್ದು, ಇದಕ್ಕೆ ಹಲವು ದೇಶಗಳು ತೀವ್ರ ಖಂಡನೆ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

2022ರ ನವೆಂಬರ್‌ 16ರಂದು ಇರಾನ್‌ ನ ಕೇಂದ್ರ ನಗರವಾದ ಇಸ್ಫಾಹಾನ್‌ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಭದ್ರತಾ ಪಡೆಯ ಯೋಧರನ್ನು ಕೊಂದಿದ್ದರು. ಈ ಪ್ರಕರಣದಲ್ಲಿ ಮಜೀದ್‌ ಕಾಝೇಮಿ, ಸಲೇಹ್‌ ಮಿರ್ಹಾಶೆಮಿ ಮತ್ತು ಸಯೀದ್‌ ಯಾಗೌಬಿಯನ್ನು ದೋಷಿ ಎಂದು ಘೋಷಿಸಲಾಗಿತ್ತು ಎಂದು ಮಿಝಾನ್‌ ಆನ್‌ ಲೈನ್‌ ನ್ಯೂಸ್‌ ವೆಬ್‌ ಸೈಟ್‌ ವರದಿ ಮಾಡಿದೆ.

ಪೊಲೀಸರ ವಶದಲ್ಲಿದ್ದ 22 ವರ್ಷದ ಮೆಹ್ಸಾ ಅಮಿನಿ ಸಾವನ್ನಪ್ಪಿದ್ದ ನಂತರ ಇರಾನ್‌ ನಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಇಸ್ಲಾಮಿಕ್‌ ರಿಪಬ್ಲಿಕ್‌ ನ ಕಠಿಣ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಅಮಿನಿಯನ್ನು ಇರಾನ್‌ ಕುರ್ದ್ ಪೊಲೀಸರು ಬಂಧಿಸಿದ್ದರು.

ಪ್ರಕರಣದಲ್ಲಿ ದೋಷಿಯಾದ ಮೂವರನ್ನು ಇರಾನ್‌ ಸರ್ಕಾರ ಶುಕ್ರವಾರ ನೇಣುಗಂಬಕ್ಕೆ ಏರಿಸಿದೆ. ಈ ಬಗ್ಗೆ ಯುರೋಪಿಯನ್‌ ಯೂನಿಯನ್‌ ತೀವ್ರ ಅಸಮಧಾನ ವ್ಯಕ್ತಪಡಿಸಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ