ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬ್ರಹತ್ ವಿಮಾನ ಖರೀದಿ ಒಪ್ಪಂದ :470 ವಿಮಾನ ಖರೀದಿಗೆ ಮುಂದಾದ ಟಾಟಾ ಗ್ರೂಪ್

Twitter
Facebook
LinkedIn
WhatsApp
ಬ್ರಹತ್ ವಿಮಾನ ಖರೀದಿ ಒಪ್ಪಂದ :470 ವಿಮಾನ ಖರೀದಿಗೆ ಮುಂದಾದ ಟಾಟಾ ಗ್ರೂಪ್

ನವದೆಹಲಿ: ಟಾಟಾ ಗ್ರೂಪ್‌ ಒಡೆತನದ ಏರ್‌ ಇಂಡಿಯಾ 250 ಏರ್‌ಬಸ್‌ ವಿಮಾನ ಹಾಗೂ 220 ಬೋಯಿಂಗ್‌ ವಿಮಾನಗಳ ಖರೀದಿ ಒಪ್ಪಂದವನ್ನು ಘೋಷಿಸಿದೆ. ಇದು ವಿಶ್ವ ವಿಮಾನಯಾನ ಇತಿಹಾಸದಲ್ಲೇ ಅತಿ ಬೃಹತ್‌ ವಿಮಾನ ಖರೀದಿ ಒಪ್ಪಂದ ಎನ್ನಿಸಿಕೊಂಡಿದೆ. ಒಟ್ಟಾರೆ ಖರೀದಿ ಮೊತ್ತ 11 ಲಕ್ಷ ಕೋಟಿ ರು. ಆಗಿದೆ. ಈ ಪೈಕಿ ಫ್ರಾನ್ಸ್‌ನ ಏರ್‌ಬಸ್‌ಗೆ 8.2 ಲಕ್ಷ ಕೋಟಿ ರು. ಹಾಗೂ ಅಮೆರಿಕದ ಬೋಯಿಂಗ್‌ಗೆ 2.7 ಲಕ್ಷ ಕೋಟಿ ರು.ಗಳನ್ನು ಏರ್‌ ಇಂಡಿಯಾ ಪಾವತಿಸಲಿದೆ.

ಏರ್‌ಬಸ್‌:

ಎ350: 300ರಿಂದ 410 ಪ್ರಯಾಣಿಕರನ್ನು ಒಯ್ಯುವ ಒಟ್ಟು 40 ಪ್ಲೇನ್‌ ಖರೀದಿ

ಎ320: 190 ಪ್ರಯಾಣಿಕರ ಸಾಮರ್ಥ್ಯದ 210 ವಿಮಾನಗಳಿಗೆ ಆರ್ಡರ್‌

ಬೋಯಿಂಗ್‌:

  • ಬಿ737 ಮ್ಯಾಕ್ಸ್‌ : 204 ಪ್ರಯಾಣಿಕರ ಸಾಮರ್ಥ್ಯ, 190 ವಿಮಾನ ಖರೀದಿ
  • ಬಿ787: 250 ಪ್ರಯಾಣಿಕರ ಸಾಮರ್ಥ್ಯ, 20 ವಿಮಾನ ಖರೀದಿ

  • ಬಿ777: 368 ಪ್ರಯಾಣಿಕರ ಸಾಮರ್ಥ್ಯ, 10 ವಿಮಾನ ಖರೀದಿ
  • ಖರೀದಿ ಏಕೆ?

    2005ರ ಬಳಿಕ ಏರ್‌ ಇಂಡಿಯಾ ಒಂದೂ ವಿಮಾನ ಖರೀದಿಸಿರಲಿಲ್ಲ. ಟಾಟಾ ಈಗ ಮಾರುಕಟ್ಟೆ ವಿಸ್ತರಣೆಯ ಉತ್ಸಾಹದಲ್ಲಿ ಇದೆ.

    15 ವರ್ಷದಲ್ಲಿ ದೇಶಕ್ಕೆ 2000 ವಿಮಾನ ಬೇಕು

    ವಿಮಾನಯಾನದಲ್ಲಿ ಭಾರತ ಶೀಘ್ರದಲ್ಲೇ ಜಗತ್ತಿನ 3ನೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ. ಮುಂದಿನ 15 ವರ್ಷಗಳಲ್ಲಿ ಭಾರತಕ್ಕೆ 2000 ವಿಮಾನ ಬೇಕಾಗಲಿವೆ — ನರೇಂದ್ರ ಮೋದಿ, ಪ್ರಧಾನಿ

    ಸರ್ಕಾರದ ಒಡೆತನದಲ್ಲಿದ್ದ ಏರ್‌ ಇಂಡಿಯಾ (Air India) ಇತ್ತೀಚೆಗೆ ಟಾಟಾತೆಕ್ಕೆಗೆ ಜಾರಿತ್ತು. ಇದರ ಬೆನ್ನಲ್ಲೇ ಏರ್‌ಬಸ್‌ನಿಂದ ಒಟ್ಟಾರೆ 470 ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಇದರಿಂದಾಗಿ ಏರ್‌ ಇಂಡಿಯಾದ ಕಾರ್ಯಾಚರಣೆ ಮತ್ತಷ್ಟು ವಿಸ್ತಾರವಾಗಲಿದೆ ಎಂದು ಟಾಟಾ ಗ್ರೂಪ್‌  (Tata Group)ಹೇಳಿದೆ.

 

ಫ್ರಾನ್ಸ್‌ ಮೂಲದ ಏರ್‌ಬಸ್‌ (Airbus)ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಏರ್‌ ಇಂಡಿಯಾದ ಮುಖ್ಯಸ್ಥ ಎನ್‌.ಚಂದ್ರಶೇಖರನ್‌ (Air India chief N. Chandrasekaran), ‘40 ವೈಡ್‌ ಬಾಡಿ ಎ350 ವಿಮಾನಗಳು ಮತ್ತು 210 ನ್ಯಾರೋ ಬಾಡಿ ಎ320 ವಿಮಾನಗಳು ಸೇರಿದಂತೆ 250 ವಿಮಾನಗಳ ಖರೀದಿಗೆ ಏರ್‌ಬಸ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವೈಡ್‌ ಬಾಡಿ ವಿಮಾನಗಳನ್ನು 16 ಗಂಟೆಗಳಿಗೂ ಹೆಚ್ಚು ಕಾಲ ಪ್ರಯಾಣಿಸುವ ಹಾದಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ನ್ಯಾರೋ ಬಾಡಿ ವಿಮಾನಗಳನ್ನು ಕಡಿಮೆ ದೂರದ ಪ್ರಯಾಣಕ್ಕೆ ಬಳಸಲಾಗುತ್ತದೆ ಎಂದರು. ಈ ಒಪ್ಪಂದದ ವೇಳೆ, ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹಾಗೂ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯಲ್‌ ಮ್ಯಾಕ್ರಾನ್‌ (French President Emmanuel Macron) ಹಾಜರಿದ್ದರು.

ಬೋಯಿಂಗ್‌ ಒಪ್ಪಂದ ಘೋಷಣೆ:

ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (US President Joe Biden)ಅವರು ತಮ್ಮ ದೇಶದ ಬೋಯಿಂಗ್‌ನಿಂದ 220 ವಿಮಾನಗಳನ್ನು ಏರ್‌ ಇಂಡಿಯಾ ಖರೀದಿಸಲಿದೆ ಎಂದು ವಾಷಿಂಗ್ಟನ್‌ನಲ್ಲಿ (Washington) ಘೋಷಿಸಿದರು. ಈ ಪೈಕಿ 190 ಬಿ737 ಮ್ಯಾಕ್ಸ್‌ , 20 ಬಿ787 ಹಾಗೂ 10 ಬಿ777 ಮ್ಯಾಕ್ಸ್‌ ವಿಮಾನಗಳನ್ನು (10 B777 Max aircraft) ಏರ್‌ ಇಂಡಿಯಾ ಖರೀದಿಸಲಿದೆ.

ಒಪ್ಪಂದ ಮೊತ್ತ ಸುಮಾರು 2.7 ಲಕ್ಷ ಕೋಟಿ ರು. ಆಗಲಿದ್ದು, ಇದೊಂದು ಐತಿಹಾಸಿಕ ಒಪ್ಪಂದ. ಅಮೆರಿಕದಲ್ಲಿ ಇದರಿಂದ 10 ಲಕ್ಷ ಉದ್ಯೋಗ ಸೃಷ್ಟಿಆಗಲಿವೆ ಎಂದು ಬಣ್ಣಿಸಿದರು. ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಫೋನ್‌ನಲ್ಲಿ ಮಾತನಾಡಿ, ‘ವ್ಯಾಪಾರ ಅಭಿವೃದ್ಧಿಯಲ್ಲಿ ಒಟ್ಟಾಗಿ ಸಾಗೋಣ’ ಎಂದರು.

17 ವರ್ಷ ಬಳಿಕ ಖರೀದಿ:

17 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಮಾನಗಳ ಖರೀದಿ ಒಪ್ಪಂದಕ್ಕೆ ಏರ್‌ ಇಂಡಿಯಾ ಸಹಿ ಹಾಕಿದೆ. ಇದಕ್ಕೂ ಮುನ್ನ 2005ರಲ್ಲಿ ಏರ್‌ ಇಂಡಿಯಾ ಬೋಯಿಂಗ್‌ನಿಂದ 68 ಮತ್ತು ಏರ್‌ಬಸ್‌ನಿಂದ 43 ವಿಮಾನ ಸೇರಿದಂತೆ 111 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಸದ್ಯ ಏರ್‌ ಇಂಡಿಯಾ ಬಳಿ 113 ವಿಮಾನಗಳು ಇವೆ.

ಯಾವಾಗ ಲಭ್ಯ?

ಏರ್‌ಬಸ್‌ ಜೊತೆಗೆ ಮಾಡಿಕೊಂಡಿರುವ ಒಪ್ಪಂದ 10 ವರ್ಷಗಳ ಅವಧಿಯದ್ದಾಗಿದ್ದು, ಆರ್ಡರ್‌ ಮಾಡಿರುವ ವಿಮಾನಗಳು ಹಂತಹಂತವಾಗಿ ಡೆಲಿವರಿಯಾಗಲಿವೆ. ಏರ್‌ ಇಂಡಿಯಾ ಆರ್ಡರ್‌ ಮಾಡಿರುವ 40 ವೈಡ್‌ ಬಾಡಿ ವಿಮಾನಗಳಲ್ಲಿ 6 ಎ350 ವಿಮಾನಗಳು 2023ರ ಅಂತ್ಯದ ವೇಳೆಗೆ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆಗಳಿವೆ. ನಂತರ ಉಳಿದವು ಹಸ್ತಾಂತರ ಆಗಲಿವೆ ಎಂದು ಮೂಲಗಳು ತಿಳಿಸಿವೆ. ಬೋಯಿಂಗ್‌ ವಿಮಾನ ಅಮೆರಿಕದ 44 ರಾಜ್ಯಗಳಲ್ಲಿ ಇನ್ನು ಮೇಲೆ ಉತ್ಪಾದನೆ ಆಗಿ, ಹಂತ ಹಂತವಾಗಿ ಡೆಲಿವರಿ ಆಗಲಿವೆ

ಭೀಕರ ಘಟನೆ-ಮನೆಯಲ್ಲಿ ಭಾರಿ ಸ್ಫೋಟ ಸಂಭವಿಸಿ ಕುಸಿದ ಮನೆ: 6 ಜನ ಸಾವು

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ