ಶುಕ್ರವಾರ, ಏಪ್ರಿಲ್ 19, 2024
ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೌಂಡರಿ ಹೊಡೆಸಿಕೊಳ್ಳದೆ 100 ಎಸೆತಗಳನ್ನು ಎಸೆದ ಮೊದಲ ಬೌಲರ್ ರಶೀದ್ ಖಾನ್- ವಿಶ್ವ ದಾಖಲೆ

Twitter
Facebook
LinkedIn
WhatsApp
All about coconut tree 26

ಹೊಡಿಬಡಿ ಕ್ರಿಕೆಟ್ ಪಂದ್ಯಾಟ ಎಂದೇ ಖ್ಯಾತಿ ಪಡೆದಿರುವ ಟಿ20 ಕ್ರಿಕೆಟ್​ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಿಕೊಳ್ಳದೇ ಸತತವಾಗಿ ಎಷ್ಟು ಓವರ್ ಎಸೆಯಬಹುದು? ಒಂದು…ಎರಡು…ಮೂರು…ನಾಲ್ಕು..! ಆದರೆ ಅಫ್ಘಾನಿಸ್ತಾನ್ ಸ್ಪಿನ್ ಮಾಂತ್ರಿ ರಶೀದ್ ಖಾನ್ ಬರೋಬ್ಬರಿ 17 ಓವರ್​ಗಳನ್ನು ಎಸೆದಿದ್ದಾರೆ.

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರಶೀದ್ ಖಾನ್ ಕಳೆದ 17 ಓವರ್​ಗಳಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಂಡಿರಲಿಲ್ಲ. ಅಂದರೆ ಅವರ ಬೌಲಿಂಗ್​ನಲ್ಲಿ ಯಾವುದೇ ಬ್ಯಾಟರ್​ ಫೋರ್ ಅಥವಾ ಸಿಕ್ಸ್ ಬಾರಿಸಿರಲಿಲ್ಲ. ಇದುವೇ ಈಗ ಹೊಸ ವಿಶ್ವ ದಾಖಲೆಯಾಗಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದೆ 100 ಎಸೆತಗಳನ್ನು ಎಸೆದ ಮೊದಲ ಬೌಲರ್ ಎಂಬ ವಿಶ್ವ ದಾಖಲೆ ರಶೀದ್ ಖಾನ್ ಪಾಲಾಗಿದೆ. ಅಷ್ಟೇ ಅಲ್ಲದೆ ಒಂದೇ ಒಂದು ಬೌಂಡರಿ ಚಚ್ಚಿಸಿಕೊಳ್ಳದೇ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಓವರ್​ ಎಸೆದ ವಿಶ್ವ ದಾಖಲೆ ಕೂಡ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಹೆಸರಿಗೆ ಸೇರ್ಪಡೆಯಾಗಿದೆ.

ಇನ್ನು ರಶೀದ್ ಖಾನ್ ಹೆಸರಿನಲ್ಲಿ ಮುಂದುವರೆದಿದ್ದ ಈ ವಿಶೇಷ ದಾಖಲೆಗೆ ಬ್ರೇಕ್ ಹಾಕಿದ್ದು ಪಾಕಿಸ್ತಾನದ ಬ್ಯಾಟರ್ ಸೈಮ್ ಅಯ್ಯೂಬ್. ಶಾರ್ಜಾದಲ್ಲಿ ನಡೆದ ಪಾಕಿಸ್ತಾನ್-ಅಫ್ಘಾನಿಸ್ತಾನ್ ನಡುವಣ 3ನೇ ಟಿ20 ಪಂದ್ಯದಲ್ಲಿ ಸೈಮ್ ರಶೀದ್ ಖಾನ್ ಎಸೆತದಲ್ಲಿ ಬೌಂಡರಿ ಬಾರಿಸಿದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸತತ 105 ಎಸೆತಗಳಲ್ಲಿ ಯಾವುದೇ ಬೌಂಡರಿ ನೀಡದೆ ಮಿಂಚಿದ ರಶೀದ್ ಖಾನ್ ಇದೀಗ ಐಪಿಎಲ್​ಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ಬಾರಿಯಂತೆ ಈ ಸಲ ಕೂಡ ಅಫ್ಘಾನ್ ಸ್ಪಿನ್ನರ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಭಾರತೀಯ ಪಿಚ್​ನಲ್ಲೂ ರಶೀದ್ ಖಾನ್ ಅವರ ಸ್ಪಿನ್ ಮೋಡಿಯನ್ನು ನಿರೀಕ್ಷಿಸಬಹುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ