ಹುಲಿಗಳ ಭೀಕರ ಕಾದಾಟ
ಕೆಲ ದಿನಗಳ ಹಿಂದೆ ಹುಲಿಗಳೆರಡು ಭೀಕರವಾಗಿ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. one_earth__one_life ಹೆಸರಿನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದರು. ಎರಡು ಹುಲಿಗಳ ಭಯಾನಕ ಕದನ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಆದರೆ ಈ ಘಟನೆ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ವಿಡಿಯೋದಲ್ಲಿ ಉಲ್ಲೇಖವಿಲ್ಲ. ಶ್ವಾನಗಳ, ಕಾದಾಟವನ್ನು ನೋಡಿರಬಹುದು ಆದರೆ ಎರಡು ಹುಲಿಗಳು ಕಾದಾಡುವುದನ್ನು(Tiger Fighting) ನೋಡಲು ಸಿಗುವುದು ಬಲು ಅಪರೂಪ. ಆದರೂ ಇಲ್ಲೊಂದು ಕಡೆ ಎರಡು ವ್ಯಾಘ್ರಗಳು ಭೀಕರವಾಗಿ ಕಾದಾಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿವೆ. ಹೇಗೆ ಹುಲಿಗಳೆರಡು ಒಂದರ ಮೇಲೆ ಒಂದು ಮುಗಿ ಬೀಳುತ್ತಾ ಭಯಾನಕವಾಗಿ ಕಾದಾಡುತ್ತಿವೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. ಹಲವು ಸೆಕೆಂಡುಗಳವರೆಗೆ ಈ ಹುಲಿಗಳು ಭೀಕರವಾಗಿ ಕಾದಾಡಿ ನಂತರ ದೂರ ಸರಿದು ಹೋಗಿವೆ. ಯಾರೋ ಪ್ರವಾಸಿಗರು ಸಫಾರಿ ಜೀಪ್ನಲ್ಲಿ(Saffari jeep ಕುಳಿತುಕೊಂಡು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದು, ಇದು ತುಂಬಾ ಅಪರೂಪದ ದೃಶ್ಯ ಹಿಂದೆಂದೂ ಇಂತಹ ದೃಶ್ಯ ನೋಡಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅವುಗಳ ಘರ್ಜನೆ ನನ್ನ ಮೈ ನವಿರೇಳುವಂತೆ ಮಾಡಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವೀಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಕೆಲ ದಿನಗಳ ಹಿಂದೆ ತಬ್ಬಲಿ ಹುಲಿಮರಿಗೆ ಚಿಂಪಾಂಜಿಯೊಂದು ಆರೈಕೆ ಮಾಡುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಅಮೆರಿಕಾದ ದಕ್ಷಿಣ ಕೆರೊಲಿನಾದ ಮಿರ್ಟಲ್ ಬೀಚ್ ಸಫಾರಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಚಿಂಪಾಜಿಯೊಂದು ತನ್ನದಲ್ಲದ ಹುಲಿಯ ಮರಿಗಳನ್ನು ತನ್ನ ಮಕ್ಕಳಂತೆ ಆರೈಕೆ ಮಾಡುತ್ತಿದೆ. ತಾಯಿ ತೊರೆದ ಮುದ್ದಾದ ಮರಿಗಳಿಗೆ ಈ ಚಿಂಪಾಜಿ ಬಾಟಲ್ ಹಾಲು ನೀಡುತ್ತ ಮಡಿಲಲ್ಲಿ ಮಲಗಿಸಿಕೊಂಡು ಎತ್ತಿ ಆಡಿಸುತ್ತಾ ಮುದ್ದಾಡುತ್ತಿದೆ. ಹುಲಿ ಮರಿಗಳು ಕೂಡ ಈ ಚಿಂಪಾಜಿಯಲ್ಲೇ ತಮ್ಮ ತಾಯಿಯನ್ನು ಕಾಣುತ್ತಿವೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist