ಬೆಂಗಳೂರು: ಕರ್ನಾಟಕದ 2021-22ರ ಶೈಕ್ಷಣಿಕ ವರ್ಷವೂ ಮೇ 29 ರಿಂದ ಆರಂಭವಾಗಿ ಏಪ್ರಿಲ್ 10ಕ್ಕೆ ಮುಕ್ತಾಯವಾಗುತ್ತದೆ. ಆದರೆ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೇಸಿಗೆ ರಜೆಯನ್ನು ಕಡಿತಗೊಳಿಸಿ ಕೊಂಚ ಮುಂಚಿತವಾಗಿಯೇ ಶಾಲೆಗಳು ಆರಂಭಗೊಳ್ಳಲಿದೆ.
ಕೋವಿಡ್ ನಿಂದ ಸರಿಯಾದ ತರಗತಿಗೆ ಹಾಜರಾಗದೆ ವಿದ್ಯಾರ್ಥಿಗಳ ಹಿನ್ನಡೆಯನ್ನು , ಕಲಿಕಾ ಕೊರತೆಯನ್ನು ಸರಿದೂಗಿಸಲು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಎಂದು ಸರ್ಕಾರ ತೀರ್ಮಾನಿಸಿದ್ದು ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷ 2021-22 ಅನ್ನು ದಿನಾಂಕ 09-04-2022 ಕ್ಕೆ ಮುಕ್ತಾಯಗೊಳಿಸಲು, 2021-22ನೇ ಸಾಲಿನ ಬೇಸಿಗೆ ರಜೆಯನ್ನು ದಿನಾಂಕ 10-04-2022 ರಿಂದ 15-05-2022 ರವರೆಗೆ ನೀಡಲು ತೀರ್ಮಾನಿಸಿದೆ. ಹಾಗೂ ಮುಂದಿನ ಶೈಕ್ಷಣಿಕ ವರ್ಷವನ್ನು ದಿನಾಂಕ 16-05-2022 ರಿಂದ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.
ಏಪ್ರಿಲ್ 9ರಂದು ಶೈಕ್ಷಣಿಕ ವರ್ಷ ಕೊನೆಗೊಳ್ಳುತ್ತಿದ್ದು, ಮಾರ್ಚ್ 24 ರಿಂದ ಏ.4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಶಾಲೆಗಳು ಏಪ್ರಿಲ್ 9ರಂದು ಫಲಿತಾಂಶ ಪ್ರಕಟ ಮಾಡಬೇಕು. 8 ಮತ್ತು 9 ನೇ ತರಗತಿಗಳಿರುವ ಪ್ರೌಢ ಶಾಲೆಗಳಲ್ಲಿ ಮಾರ್ಚ್ 21 ರಿಂದ ಮಾರ್ಚ್ 26 ರವರೆಗೆ ವಿಷಯವಾರು ಪರೀಕ್ಷೆ, ಮಾರ್ಚ್ 29 ರಿಂದ ಭಾಗ 2 (ದೈಹಿಕ ಶಿಕ್ಷಣ ಮತ್ತು ಇತರೆ) ಪರೀಕ್ಷೆ ನಡೆಸಿ ಏಪ್ರಿಲ್ 7 ರಂದು ಫಲಿತಾಂಶ
ಪ್ರಕಟಿಸ ಬೇಕು ಎಂಬ ಆದೇಶ ಹೊರಡಿಸಲಾಗಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist