ಬೇಸಿಗೆಯಲ್ಲಿ ತಂಪಾಗಿರಿಸಲು ಉಪಯೋಗಿಸುವ ಕಲ್ಲಂಗಡಿ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು...?
ಹಣ್ಣುಗಳಲ್ಲಿ ಹಲವಾರು ವಿಧದ ಹಣ್ಣುಗಳು ನಮಗೆ ಋತುವಿಗೆ ಅನುಗುಣವಾಗಿ ಲಭ್ಯವಾಗುವುದು. ಅದರಲ್ಲೂ ಬೇಸಗೆ ಕಾಲದಲ್ಲಿ ನೀರಿನಾಂಶ ಅಧಿಕವಾಗಿ ಇರುವ ಕೆಲವು ಹಣ್ಣುಗಳ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಂತಹ ಒಂದು ಹಣ್ಣೆಂದರೆ ಅದು ಕಲ್ಲಂಗಡಿ ಹಣ್ಣು. ಕಲ್ಲಂಗಡಿ ಹಣ್ಣಿನಲ್ಲಿ ಶೇ.92ರಷ್ಟು ನೀರಿನಾಂಶವಿದ್ದು, ಇದು ದೇಹವನ್ನು ಹೈಡ್ರೇಟ್ ಆಗಿಡುವುದು.
ಕಲ್ಲಂಗಡಿಯಲ್ಲಿರುವ ಪೊಟ್ಯಾಷಿಯಮ್ ಮತ್ತು ಮೆಗ್ನೀಷಿಯಮ್ ಪ್ರಮಾಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟಲು ಸಹಾಯಕವಾಗಿದೆ.
ಯಾವುದೇ ಆಹಾರವಾಗಲಿ ಹಿತಮಿತವಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ತಿನ್ನಲು ರುಚಿಯಾಗಿದೆ ಎಂದು ಅತಿಯಾಗಿ ತಿಂದರೆ ಆರೋಗ್ಯಕ್ಕೆ ಅನಾರೋಗ್ಯಗಳೇ ಹೆಚ್ಚು. ಅತಿಯಾಗಿ ತಿಂದರೆ ಅಮೃತವೂ ವಿಷ ಎಂಬ ಮಾತಿನಂತೆ ಆಹಾರವನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟಪಟ್ಟು ತಿನ್ನುತ್ತಾರೆ. ಹಾಗಿರುವಾಗ ನಾವು ಸೇವಿಸುತ್ತಿರುವ ತರಕಾರಿಗಳು ಮತ್ತು ಹಣ್ಣುಗಳಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿದುಕೊಳ್ಳಲೇಬೇಕು. ಕಲ್ಲಂಗಡಿ ಹಣ್ಣಿನಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
- 100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 30 ಕ್ಯಾಲರಿ ಮಾತ್ರ ಇದೆ. ಇದು ಬಾಯಾರಿಕೆ ಹಾಗೂ ಹಸಿವು ಕಡಿಮೆ ಮಾಡುವುದು.
- ಇದರಲ್ಲಿ ಉನ್ನತ ಮಟ್ಟದ ಅರ್ಜಿನೈನ್ ಎನ್ನುವ ಅಮಿನೋ ಆಮ್ಲವಿದ್ದು, ಇದು ಹೊಟ್ಟೆಯ ಭಾಗದಲ್ಲಿನ ಕೊಬ್ಬನ್ನು ಶೇ.60ರಷ್ಟು ಕಡಿಮೆ ಮಾಡುವುದು ಹಾಗೂ ತೂಕ ಇಳಿಸಲು ಇದು ಸಹಕಾರಿ. ಶೇ.90ರಷ್ಟು ನೀರಿನಾಂಶ ಹೊಂದಿರುವ ಇದು ಹೊಟ್ಟೆಯು ತುಂಬಿರುವಂತೆ ಮಾಡುವುದು ಹಾಗೂ ಅತಿಯಾಗಿ ತಿನ್ನದಂತೆ ತಡೆಯುವುದು.
ದೇಹವನ್ನು ಹೈಡ್ರೀಕರಿಸುತ್ತದೆ ಕಲ್ಲಂಗಡಿಯಲ್ಲಿ ಶೇ.90ರಷ್ಟು ನೀರಿನ ಪ್ರಮಾಣ ಇರುವುದರಿಂದ ಇದು ನಿಮ್ಮ ದೇಹಕ್ಕೆ ನೀರಿನಾಂಶವನ್ನು ನೀಡುತ್ತದೆ. ಉಷ್ಣಾಂಶದಿಂದ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಹೆಚ್ಚು ತಂಪಾಗಿರುವುದರಿಂದ ಮಳೆಗಾಲದ ಸಮಯದಲ್ಲಿ ಈ ಹಣ್ಣನ್ನು ಹೆಚ್ಚು ಸೇವಿಸುವುದಿಲ್ಲ.
- ತೂಕ ಇಳಿಸಲು ಹಾಗೂ ಹೃದಯದ ಕ್ರಿಯೆಗಳಿಗೆ ಸಹಕಾರಿ ಆಗಿರುವ ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿ ಸುಧಾರಣೆ ಮಾಡುವುದು
- ಚರ್ಮದ ಕಾಂತಿ ಹೆಚ್ಚಳ
ಕಲ್ಲಂಗಡಿ ಹಣ್ಣು ಚರ್ಮ ಸುಕ್ಕು ಬೀಳುವುದು, ನೆರಿಗೆ ಮೂಡುವುದು ಮೊದಲಾದ ವೃದಾಪ್ಯ ಚಿಹ್ನೆಗಳನ್ನು ನಿವಾರಿಸುತ್ತದೆ. ಇದರಲ್ಲಿನ ಕೊಲಾಜನ್ ಅಂಶ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಮಿಟಮಿನ್ ಎ ಮುಖದಲ್ಲಿನ ಎಣ್ಣೆ ಅಂಶವನ್ನು ತಡೆಯುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಕಲ್ಲಂಗಡಿಯಲ್ಲಿ ಫೈಬರ್ ಅಂಶ ಕಂಡು ಬರುತ್ತದೆ. ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಾಯಕವಾಗಿದೆ. ಫೈಬರ್ಯುಕ್ತ ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯಕವಾಗಿದೆ.
ಹಗಲಿನಲ್ಲಿ ನೀವು ಯಾವುದೇ ಸಮಯದಲ್ಲೂ ಇದನ್ನು ಸೇವನೆ ಮಾಡಬುದು. ಆದರೆ ರಾತ್ರಿ ತಿನ್ನಬಾರದು. ಇದರಲ್ಲಿ ಸಕ್ಕರೆ ಹಾಗೂ ನಾರಿನಾಂಶವು ಇರುವ ಕಾರಣದಿಂದಾಗಿ ಹೊಟ್ಟೆ ತುಂಬಿದಂತೆ ಮಾಡುವುದು ಹಾಗೂ ಬಯಕೆ ಕಡಿಮೆ ಮಾಡುವುದು.
ರಾತ್ರಿ ತಿಂದರೆ ಅದರಿಂದ ಅಸಿಡಿಟಿ ಉಂಟಾಗಬಹುದು ಮತ್ತು ಇತರ ಸಮಸ್ಯೆಗಳು ಕಾಡಬಹುದು. ಅಧಿಕ ನೀರಿನಾಂಶ ಹೊಂದಿರುವ ಇದನ್ನು ರಾತ್ರಿ ವೇಳೆ ಸೇವನೆ ಮಾಡಬಾರದು. ಇದರಿಂದ ಹೊಟ್ಟೆ ಉಬ್ಬರ ಕಂಡುಬರುವುದು.