ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ 86 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದು, 30 ರೌಡಿ ಶೀಟರ್‌ಗಳನ್ನ ಸಿಸಿಬಿ (CCB Police) ಕಚೇರಿಗೆ ಕರೆತಂದಿದ್ದಾರೆ.
ಐವರು ಎಸಿಪಿ (ACP), 30 ಇನ್ಸ್ಪೆಕ್ಟರ್‌ಗಳ ನೇತೃತ್ವದ ತಂಡ ದಾಳಿ ನಡೆಸಿದೆ. ನಂತರ ಸಿಸಿಬಿ ಕಚೇರಿಗೆ ಕರೆತಂದು ಸಿಸಿಬಿ ಎಸಿಪಿ ಧರ್ಮೆಂದ್ರ ನೇತೃತ್ವದಲ್ಲಿ ಫುಲ್ ಕ್ಲಾಸ್ ಮಾಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದರೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ವಾರ್ನಿಂಗ್ ನೀಡಲಾಗಿದೆ
ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿ ಕುಖ್ಯಾತ ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ 30 ರೌಡಿಗಳನ್ನ ವಶಕ್ಕೆ ಪಡೆದಿದ್ದು, ದಾಳಿ ವೇಳೆ ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಹಲವರು ಮನೆಯಿಂದ ಎಸ್ಕೇಪ್ ಆಗಿರುವುದು ಕಂಡುಬಂದಿದೆ.
ದಾಳಿ ವೇಳೆ ವಿಲ್ಸನ್‌ಗಾರ್ಡನ್ (Wilson Garden) ನಾಗ ತಮಿಳುನಾಡಿನಲ್ಲಿ ಇರುವುದು ಬೆಳಕಿಗೆ ಬಂದಿದ್ದು, ಕೋತಿರಾಮ, ಆರ್.ಟಿ ನಗರ ವೆಂಕಟೇಶ, ಟಾಮಿ ಸೇರಿ 30 ಮಂದಿ ಸಿಕ್ಕಿಬಿದ್ದಿದ್ದಾರೆ. ವಿಜಯನಗರದ ರೌಡಿಶೀಟರ್ ರಾಘವೇಂದ್ರ ಪ್ರಸಾದ್ ಮನೆಯಲ್ಲಿ ಎರಡು ಲಾಂಗ್‌ಗಳು ಪತ್ತೆಯಾಗಿವೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist