ಬೆಳ್ತಂಗಡಿ ಹೈಡ್ರಾಮ: ರಾಜಕೀಯವಾಗಿ ಕೈ ಸುಟ್ಟುಕೊಂಡ ಬಿಜೆಪಿ ಹಾಗೂ ಕಾಂಗ್ರೆಸ್!
ಬೆಳ್ತಂಗಡಿ: ಬೆಳ್ತಂಗಡಿಯ ಹೈಡ್ರಾಮಕ್ಕೆ ಕೊನೆಗೂ ರಾತ್ರಿ ಶಾಸಕ ಹರೀಶ್ ಪೂಂಜಾ ರವರಿಗೆ ಸ್ಟೇಷನ್ ಬೇಲ್ ಸಿಗುವ ಮೂಲಕ ಕೊನೆಗೊಂಡಿದೆ.
ಆದರೆ ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳು ಮುಜುಗರ ಅನುಭವಿಸಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಡುತ್ತಾರೆ.
ಬಿಜೆಪಿಯ ಕಾರ್ಯಕರ್ತರ ಪ್ರಕಾರ ಶಾಸಕ ಹರೀಶ್ ಪೂಂಜ ಈ ರೀತಿ ಬಂಧನದ ಬಾಗಿಲುವರೆಗೆ ಹೋಗುವ ಅಗತ್ಯವಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕಾಂಗ್ರೆಸ್ ಕಾರ್ಯಕರ್ತರ ಪ್ರಕಾರ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಹರೀಶ್ ಪೂಂಜಾ ಬಂದಿಸಬೇಕು ಎಂದು ಪತ್ರಿಕಾಗೋಷ್ಠಿ ನಡೆಸಿ ಬಂಧಿಸಲು ಸಫಲವಾಗದೆ ಇದ್ದದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಹೊರಹೊಮ್ಮುವಂತೆ ಮಾಡಿದೆ.
ಬೆಳ್ತಂಗಡಿ ಹೈಡ್ರಾಮ ಹರೀಶ್ ಪೂಂಜ ಹಾಗೂ ರಕ್ಷಿತ್ ಶಿವರಾಂ ವಿರುದ್ಧ ತಮ್ಮ ಕಾರ್ಯಕರ್ತರು ಆಕ್ರೋಶಗೊಳ್ಳುವಂತೆ ಮಾಡಿರುವ ಹೊಸ ಬೆಳವಣಿಗೆಯ ಪ್ರಕರಣವಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಒಂದು ಕ್ಷೇತ್ರದಲ್ಲಿ ಜಿದ್ದಿನ ವಾತಾವರಣದ ಬಂಧನದ ಹಂತದವರೆಗೆ ಹೋದ ಪ್ರಕರಣವಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಡುತ್ತಾರೆ.
ದಕ್ಷಿಣ ಕನ್ನಡದಲ್ಲಿ ಇಂತಹ ಪ್ರಕರಣಗಳು ನಡೆದಿರುವುದೇ ಅಪರೂಪವಾಗಿದೆ. ರಾಜಕೀಯವಾಗಿ ಎದುರಿಸಬೇಕೆ ಹೊರತು ಇಂತಹ ಪ್ರಕರಣಗಳು ರಾಜಕೀಯ ದ್ವೇಷಕ್ಕೆ ಕಾರಣವಾಗುತ್ತದೆ ,ಇದು ಮುಂದಕ್ಕೆ ಬೆಳ್ತಂಗಡಿಯಲ್ಲಿ ರಾಜಕೀಯವಾಗಿ ಬಹುದೊಡ್ಡ ತಿರುವನ್ನು ನೀಡಬಲ್ಲದು ಎಂದು ರಾಜಕೀಯ ಪಂಡಿತರು ಸ್ಪಷ್ಟವಾಗಿ ಅಭಿಪ್ರಾಯ ಪಡುತ್ತಾರೆ.