![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಬೆಳ್ತಂಗಡಿಗೆ ನಿನ್ನೆ ದಿವಸ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ಯಾಡಿಯ ಮರಣ ಹೊಂದಿದ ಕಾಂಗ್ರೆಸ್ ಕಾರ್ಯಕರ್ತ ಮನೆಗೆ ಆಗಮಿಸಿದ್ದರು. ಮಾಜಿ ಶಾಸಕ ವಸಂತ ಬಂಗೇರ ಅವರ ವಿಶೇಷ ಮನವಿ ಮೇರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.
ಈ ಮೂಲಕ ರಾಜಕೀಯ ನಿವೃತ್ತಿ ಇಲ್ಲದೆ ಮತ್ತೊಮ್ಮೆ ತಾನು ಬೆಳ್ತಂಗಡಿಯ ಕಾಂಗ್ರೆಸ್ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ತನ್ನ ಆಪ್ತ ವಲಯದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ತಾನು ಖಂಡಿತವಾಗಿಯೂ ಸ್ಪರ್ಧಿಸುವುದಾಗಿ ಮಾಜಿ ಶಾಸಕ ವಸಂತ ಬಂಗೇರ ಘೋಷಿಸಿಕೊಂಡಿದ್ದಾರೆ. ಈ ಮೂಲಕ ಇನ್ನೊಬ್ಬರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯರನ್ನು ಬೆಳ್ತಂಗಡಿಗೆ ಕರೆಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಆ ಮೂಲಕ ಸಾಬೀತುಪಡಿಸಿದ್ದಾರೆ. ಸಿದ್ದರಾಮಯ್ಯ ಮತ್ತು ವಸಂತ ಬಂಗೇರ ನಡುವಿನ ಸ್ನೇಹ ಬಹಳ ಹಳೆಯದು. ಈ ಮೂಲಕ ಬಂಗೇರ ಅಭ್ಯರ್ಥಿಯಾಗುವುದರಲ್ಲಿ ಸಿದ್ದರಾಮಯ್ಯನವರ ಕೃಪಾಕಟಾಕ್ಷ ಇದ್ದೇ ಇರುತ್ತದೆ ಎಂದು ಬಂಗೇರರವರ ಕಟ್ಟಾ ಬೆಂಬಲಿಗರು ಅಭಿಪ್ರಾಯಪಡುತ್ತಾರೆ.
ರಾಜಕೀಯ ನಿವೃತ್ತಿ ಇಲ್ಲ, ನಾನು ಇನ್ನು ಕೂಡ ಸಕ್ರಿಯವಾಗಿದ್ದೇನೆ ಎಂದು ನನ್ನ ಆತ್ಮೀಯ ಬಳಗದಲ್ಲಿ ಬಂಗೇರ ಹೇಳಿದ್ದಾರೆ. ಈ ಮೂಲಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನು ಎಂಬುದನ್ನು ಪರೋಕ್ಷವಾಗಿ ಪಕ್ಷಕ್ಕೆ ಬಂಗೇರ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ವಸಂತ ಬಂಗೇರ ಕ್ಷೇತ್ರದ ಪ್ರತಿ ಮೂಲೆ ಮೂಲೆಯನ್ನು ತಿರುಗಾಡುತ್ತಿದ್ದು, ಅಲ್ಲದೆ ಹಿರಿಯ ನಾಯಕ ಸಿದ್ದರಾಮಯ್ಯನವರನ್ನು ಕ್ಷೇತ್ರಕ್ಕೆ ಕರೆದುಕೊಂಡು ತನ್ನ ರಾಜಕೀಯ ದಾಳವನ್ನು ಉರುಳಿಸಲು ಮುಂದಾಗಿರುವುದು ಈಗ ಕುತೂಹಲ ಕೆರಳಿಸಿದೆ. ನಾನು ಇನ್ನು ರಾಜಕೀಯವಾಗಿ ಸಕ್ರಿಯವಾಗಿ ಇದ್ದೇನೆ ಎಂಬುದನ್ನು ಎಂಬುದನ್ನು ತೋರ್ಪಡಿಸಿದ್ದಾರೆ. ಮತ್ತೆ ತನ್ನ ಬೆಂಬಲಿಗ ಪಡೆಯನ್ನು ಸಕ್ರಿಯ ಗೊಳಿಸಿರುವ ವಸಂತ ಬಂಗೇರ ಆ ಮೂಲಕ ಬೇರೆ ಅಭ್ಯರ್ಥಿಗಳಿಗೆ ಹೊಸ ಸಂದೇಶವನ್ನು ರವಾನಿಸಿದ್ದಾರೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist