ಬೆಂಗಳೂರಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ
ಬೆಂಗಳೂರು: ರಾಜನಕುಂಟೆ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿ ಯುವತಿಯೊಬ್ಬಳ (Girl) ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಯಲಹಂಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ರಾಶಿ (19) ಮೃತ ಯುವತಿ. ರಾಶಿ ಎಂದಿನಂತೆ ಕಾಲೇಜು ಮುಗಿಸಿಕೊಂಡು ರಾಜನಕುಂಟೆ ಬಳಿ ಇರುವ ಶಾನುಭೋಗನಹಳ್ಳಿಯಲ್ಲಿರುವ ಮನೆಗೆ ಬಂದಿದ್ದ ರಾಶಿಯನ್ನು ತಾಯಿ ಸುಶೀಲಮ್ಮ ತೋಟದಲ್ಲಿರುವ ಹಸುವನ್ನು ಕರೆತರಲು ಹೇಳಿದ್ದಾರೆ.
ತಾಯಿಯ ಮಾತಿನಂತೆ ತಮ್ಮ ಜಮೀನನ ಪಕ್ಕದಲ್ಲಿರುವ ಲೇಔಟ್‌ನಲ್ಲಿ ಹೋಗುತ್ತಿದ್ದಾಗ ಅಪರಿಚಿತರು ಬೈಕ್‌ನಲ್ಲಿ (Bike) ಬಂದು ಕತ್ತಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಅಲ್ಲೇ ದೂರದಲ್ಲಿ ಕುರಿ ಮೇಯಿಸುತ್ತಿದ್ದ ಅಜ್ಜಿಯ ಬಳಿಗೆ ಹೋಗಿ ಜೀವ ಉಳಿಸಿಕೊಳ್ಳುವ ಪ್ರಯತ್ನವನ್ನು ರಾಶಿ ಮಾಡಿದ್ದಾಳೆ. ಆದರೆ ಚಾಕುವಿನ ಇರಿತದಿಂದ ರಕ್ತಸ್ರಾವ ಅಧಿಕವಾಗಿ ಜಮೀನನಲ್ಲೇ ರಾಶಿ ಬಿದ್ದು ಕೊನೆಯುಸಿರೆಳೆದ್ದಾರೆ. ಇನ್ನೂ ಘಟನಾ ನಡೆದ ಸ್ಥಳಕ್ಕೆ ರಾಜನಕುಂಟೆ ಪೊಲೀಸರು, ಬೆಂಗಳೂರು ಗ್ರಾಮಾಂತರ ಎಸ್‌ಪಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ರಾಶಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರಗೆ ರವಾನಿಸಿದ್ದು, ನಾಳೆ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರ ಮಾಡಲಿದ್ದಾರೆ. ಕೊಲೆಯನ್ನು ಯಾರು ಯಾಕೆ ಮಾಡಿದ್ದಾರೆ ಅನ್ನೋದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.