ಬುಮ್ರಾ, ಹಾರ್ದಿಕ್ ಮ್ಯಾಜಿಕ್ ಬೌಲಿಂಗ್; ಸೂರ್ಯಕುಮಾರ್ ಸಕತ್ ಕ್ಯಾಚ್ - ಭಾರತಕ್ಕೆ ವಿಶ್ವಕಪ್
Men’sT20 World Cup:ಭಾರತ ಮತ್ತು ಸೌತ್ ಆಫ್ರಿಕ ನಡುವಿನ ರೋಚಕ ಪಂದ್ಯದಲ್ಲಿ 12 ನೇ ಓವರ್ ಗಳ ಬಳಿಕ ಬಹುತೇಕ ಸೌತ್ ಆಫ್ರಿಕಾ ಪರ ವಾಲಿದ ಕ್ರಿಕೆಟ್ ಪಂದ್ಯಾಟದಲ್ಲಿ ಹಾರ್ದಿಕ್ ಪಾಂಡ್ಯ ಅವರ 17 ನೇ ಓವರಿನ ಮೊದಲ ಎಸೆತದಲ್ಲಿ ಪಡೆದ ವಿಕೆಟ್ ಪಂದ್ಯವನ್ನು ಕುತೂಹಲಕಾರಿ ಘಟ್ಟಕ್ಕೆ ಕೊಂಡೊಯ್ಯುತ್ತು. ತದನಂತರ 18ನೇ ಓವರಿನಲ್ಲಿ ಒಂದು ವಿಕೆಟ್ ಪಡೆದು ಕೇವಲ ಎರಡು ರನ್ ನೀಡಿದ ಬೂಮ್ರ ಅವರ ಬೌಲಿಂಗ್ ಪಂದ್ಯವನ್ನು ಭಾರತದ ಕಡೆ ಪುನಃ ವಾಲಿಸಿತು. ನಂತರ ಅದೇ ಗತಿಯಲ್ಲಿ ಹರ್ಷದಿಪ್ ಅವರ ಬೌಲಿಂಗ್ ಪಂದ್ಯಾಟದಲ್ಲಿ ಭಾರತವು ಹಿಡಿತವನ್ನು ಸಾಧಿಸಿತ್ತು, ಹಾಗೂ ಕೊನೆಗೆ ಹಾರ್ದಿಕ್ ಪಾಂಡ್ಯ ಅವರ ಮೊದಲ ಎಸೆತದಲ್ಲಿ ಸೂರ್ಯ ಕುಮಾರ್ ಅವರು ಓಡೋಡಿ ಬಂದು ಹಿಡಿದ ಆ ಕ್ಯಾಚ್ ವಿಶ್ವಕಪ್ ಭಾರತದ ಕೈಯಲ್ಲಿ ಹಿಡಿಯುವಂತಾಯ್ತು. ಭಾರತದ ಬಹುದಿನಗಳ ಕನಸು ನನಸಾಯಿತು.
ಇಡೀ ಟೂರ್ನಮೆಂಟ್ ನಲ್ಲಿ ಕಳಪೆ ಬ್ಯಾಟಿಂಗ್ನಿಂದ ಟೀಕೆಗೆ ಒಳಗಾಗಿದ್ದ ವಿರಾಟ್ ಕೊಹ್ಲಿ ಅವರು ಫೈನಲ್ ಪಂದ್ಯಾಟದಲ್ಲಿ ಅದ್ಭುತ ಬ್ಯಾಟಿಂಗ್ ಪ್ರತಿಭೆಯ ಮೂಲಕ ಸೌತ್ ಆಫ್ರಿಕದ ಬೌಲಿಂಗ್ ಅನ್ನು ಕಟ್ಟಿ ಹಾಕಿದರು. ಅವರು ಕೇವಲ 59 ಎಸೆತಗಳಲ್ಲಿ 76 ರನ್ನುಗಳನ್ನು ಗಳಿಸಿದರು.
ಇಂದು ಬ್ಯಾಟಿಂಗ್ನಲ್ಲಿ ವೈಫಲ ಕಂಡುಕೊಂಡಿದ್ದ ಸೂರ್ಯ ಕುಮಾರ್ ಕೊನೆಯ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಎಸೆದ ಮೊದಲ ಎಸೆತವನ್ನು ಬಾನೆತ್ತರಕ್ಕೆ ಭಾರಿಸಿದ ಆಫ್ರಿಕದ ಆಟಗಾರನ ಆ ಅದ್ಭುತ ಕ್ಯಾಚ್ ಅನ್ನು ಹಿಡಿದು ಭಾರತದ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದರು
ತನ್ನ ಪಿಲ್ಡಿಂಗ್ ಕೌಶಲ್ಯವನ್ನು ಇಂದು ಬಳಸಿಕೊಂಡ ಸೂರ್ಯಕುಮಾರ್ ಭಾರತದ ಪರ ಹೀರೋ ಆಗಿ ಗೋಚರಿಸಿದರು. ಹಾಗೂ ಸೌತ್ ಆಫ್ರಿಕಾದ ವಿಲನಾಗಿ ಗೋಚರಿಸಿದರು.