ಶುಕ್ರವಾರ, ಮೇ 3, 2024
ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೀದರ್​: ಕೊರೊನಾ ಲಾಕ್​ಡೌನ್ ಸದುಪಯೋಗ ಮಾಡಿಕೊಂಡ ಮಹಿಳೆಯ ಬಾಳಿಗೆ ಬೆಳಕು ಕೊಟ್ಟ ಎಲ್​ಇಡಿ ಬಲ್ಬ್​​ ತಯಾರಿಸುವ ಕಲೆ

Twitter
Facebook
LinkedIn
WhatsApp
ಬೀದರ್​: ಕೊರೊನಾ ಲಾಕ್​ಡೌನ್ ಸದುಪಯೋಗ ಮಾಡಿಕೊಂಡ ಮಹಿಳೆಯ ಬಾಳಿಗೆ ಬೆಳಕು ಕೊಟ್ಟ ಎಲ್​ಇಡಿ ಬಲ್ಬ್​​ ತಯಾರಿಸುವ ಕಲೆ

ಬೀದರ್​: ಜಿಲ್ಲೆಯ ಕಮಲನಗರ ತಾಲೂಕಿನ ಕೋರೆಕಲ್ ಗ್ರಾಮದ ಅಂಬಿಕಾ(Ambika)ಎಂಬ ಮಹಿಳೆಯು ಲಾಕ್​ಡೌನ್ ಸಂದರ್ಭದಲ್ಲಿ ಆನ್ ಲೈನ್ ಮೂಲಕ ಎಲ್.ಇ.ಡಿ ಬಲ್ಬ್​ ತರಬೇತಿ ಪಡೆದು ಮನೆಯಲ್ಲಿಯೇ ಬಲ್ಬ್ ತಯಾರಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಗ್ರಾಮದ ಯುವಕ ಯುವತಿಯರಿಗೂ ಕೆಲಸವನ್ನು ನೀಡಿದ್ದಾರೆ.

ಈ ಹಿಂದೆ ದೇಶದಲ್ಲಿ ಕೋರೋನಾ ಮಹಾಮಾರಿಯಿಂದ ಇಡೀ ದೇಶ ನಿಶಬ್ದವಾಗಿತ್ತು, ಕೋವಿಡ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್​ಡೌನ್ ಹೇರಿದ ಪರಿಣಾಮವಾಗಿ ಅದೆಷ್ಟೋ ಜನರು ಕೆಲಸವನ್ನು ಕಳೆದುಕೊಂಡು ಮನೆ ಸೇರಿದ್ದಾರೆ. ಈ ಸಮಯವನ್ನು ಚೆನ್ನಾಗಿ ಬಳಸಿಕೊಂಡ ಅಂಬಿಕಾ ಅವರು ಆನ್​ಲೈನ್​ನಲ್ಲಿ ಎಲ್ಇಡಿ ಬಲ್ಬ್ ತಯಾರಿಕೆ ಬಗ್ಗೆ ತರಬೇತಿ ಪಡೆದುಕೊಂಡರು, ತಾವು ಬಲ್ಬ್​ ತಯಾರಿಸುತ್ತೇನೆಂದು ಖಚಿತವಾದ ಬಳಿಕ ಸ್ವತಃ ತಾವೇ ಒಂದು ಸಣ್ಣ ಅಂಗಡಿ ಇಟ್ಟಕೊಂಡು ಎಲ್ಇಡಿ ಬಲ್ಬ್​ ತಯಾರಿ ಮಾಡುತ್ತಿದ್ದಾರೆ. ಹೀಗೆ ಛಲ ಬಿಡದೆ ಎಲ್ಇಡಿ ಬಲ್ಬ್ ತಯಾರಿಸುತ್ತಿರುವ ಅಂಬಿಕಾ ಅವರು 9 ವ್ಯಾಟ್,12 ವ್ಯಾಟ್ ಬಲ್ಪ್ ಸೇರಿ 18 ವ್ಯಾಟ್ ಬಲ್ಬ್​​ಗಳನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದಾರೆ.

ಇನ್ನು ಇವರು ತಯಾರಿಸುವ ಎಲ್ಇಡಿ ಬಲ್ಬ್​​ಗಳು ಬೀದರ್, ಔರಾದ್ ಮತ್ತು ಭಾಲ್ಕಿ ತಾಲೂಕು ಸೇರಿದಂತೆ ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ. ಒಂದು ಬಲ್ಬ್​ಗೆ  70 ರಿಂದ 140 ರೂಪಾಯಿಯವರೆಗೆ ಮಾರಾಟ ಮಾಡಿ ಬಂದ ಹಣದಿಂದ ಇಡೀ ಕುಟುಂಬವನ್ನು ಸಾಕುತ್ತಿದ್ದಾರೆ. ಇನ್ನು ಇವರು ತಯಾರಿಸುವ ಬಲ್ಬ್​ಗಳು ಗುಣಮಟ್ಟದಿಂದ ಕೂಡಿದ್ದು, ಗ್ರಾಹಕರಿಗೂ ಬಲ್ಬ್​​ಗಳು ಹಿಡಿಸಿದ್ದು ಹೆಚ್ಚು ದಿನಗಳ ಕಾಲ ಬಾಳಿಕೆ ಕೂಡಾ ಬರುತ್ತಿದೆ. ಹೀಗಾಗಿ ಕೆಲವು ಅಂಗಡಿಯವರು ನೂರು ಇನ್ನೂರು ಬಲ್ಬ್​ಗಳನ್ನು ಇವರಿಂದ ಆರ್ಡರ್ ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಾರೆ.

ಜೊತೆಗೆ ಇನ್ನು ಕೆಲವು ಗ್ರಾಮ ಪಂಚಾಯತ್​ನವರು ಕೂಡಾ ಈ ಮಹಿಳೆಗೆ ಪ್ರೋತ್ಸಾಹಿಸುವ ಸಲುವಾಗಿ ಇವರಿಂದ ಬಲ್ಬ್​ಗಳನ್ನು ಖರಿದೀಸಿಕೊಂಡು ಹೋಗುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ಕಲಿತ ವಿದ್ಯೆಯು ಈ ಮಹಿಳೆ ಬದುಕಿಗೆ ಆಸರೆಯಾಗಿ ನಿಂತಿದೆ. ಅಲ್ಲದೆ ಎಲ್ಇಡಿ ಬಲ್ಬ್​ಗೆ ಬೇಕಾದ ಕಚ್ಚಾ ವಸ್ತುಗಳನ್ನು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದ ತರೆಸಿಕೊಂಡು ತಾವೇ ಖುದ್ದು ಎಲ್ಇಡಿ ಬಲ್ಬ್​​ಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೆ ಕೆಲಸ ಸಿಗದೆ ಊರು ಅಲೆಯುತ್ತಿದ್ದ ಗಂಡ ವೇಂಕಟ್​ಗೂ ಕೆಲಸ ನಿಡಿದ್ದಾಳೆ. ಹೀಗೆ ಹೋಸ ಪ್ರಯೋಗದ ಮೂಲಕ ಎಲ್ಇಡಿ ಬಲ್ಬ್​ ತಯಾರಿಸಿದ ಬಲ್ಬ್​​ಗಳಿಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆಯಾಗಿದೆ. ಅಷ್ಟೇ ಅಲ್ಲದೆ ತಮ್ಮ ಕುಟುಂಬಕ್ಕೂ ಕೆಲಸ ನೀಡಿದ್ದಲ್ಲದೆ ಗ್ರಾಮದ ಯುವಕ ಯುವತಿಯರಿಗೆ ಕೆಲಸ ನೀಡಿ ಇತರರಿಗೂ ಸ್ವಾವಲಂಬಿ ಬದುಕು ರೂಪಿಸುತ್ತಿದ್ದಾಳೆ ಎನ್ನುತ್ತಿದ್ದಾರೆ ಗ್ರಾಮದ ಮುಖಂಡರು.

ದೇಶದಲ್ಲಿ ಕರೋನಾ ಮಹಾಮಾರಿಯಿಂದ ಅದೇಷ್ಟೋ ಜನ ಪ್ರಾಣ ಕಳೆದುಕೊಂಡರು, ಲಾಕ್​ಡೌನ್ ಹೇರಿದ್ದರಿಂದ ಅದೇಷ್ಟೊ ಯುವಕ ಯುವತಿಯರು ಉದ್ಯೋಗ ಕಳೆದುಕೊಂಡು ಕಂಗಾಲಾಗಿದ್ದರು. ಆದರೆ ಅಂಬಿಕಾ ಅವರು ಲಾಕ್ ಡೌನ್ ಸಮಯದಲ್ಲಿ ಸಮಯ ವ್ಯರ್ಥ ಮಾಡದೆ ಎಲ್ಇಡಿ ಬಲ್ಬ್​ ತಯಾರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಲ್ಲದೆ ಇತರ ಯುವತಿ ಯುವಕರಿಗೆ ಕೆಲಸ ನಿಡಿದ್ದು, ಗ್ರಾಮಸ್ಥರು ಅಂಬಿಕಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ