ಬಿಗ್‌ಬ್ಯಾಶ್‌ನಲ್ಲಿ ವಿವಾದಾತ್ಮಕ ಕ್ಯಾಚ್! ಇದು ಔಟ್/ನಾಟೌಟ್? ವಿಡಿಯೋ ವೈರಲ್
ಬ್ರಿಸ್ಬೇನ್(ಜ.02): ಆಸ್ಪ್ರೇಲಿಯಾದ ಬಿಗ್‌ಬ್ಯಾಶ್ ಟಿ20 ಲೀಗ್‌ನಲ್ಲಿ ಭಾನುವಾರ ಬ್ರಿಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ ನಡುವಿನ ಪಂದ್ಯ ವಿವಾದಾತ್ಮಕ ಕ್ಯಾಚ್‌ಗೆ ಸಾಕ್ಷಿಯಾಯಿತು. ಮಾರ್ಕ್ ಸ್ಟಿಕೀಟೆ ಎಸೆತದಲ್ಲಿ ಸಿಡ್ನಿಯ ಜೋರ್ಡನ್ ಸಿಲ್ಕ್ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಇದ್ದ ಕ್ಷೇತ್ರರಕ್ಷಕ ಮೈಕಲ್ ನೆಸರ್ ಹಿಡಿಯುವ ಯತ್ನ ನಡೆಸಿದರು. ಮೊದಲು ಬೌಂಡರಿ ಗೆರೆ ಆಚೆ ಚೆಂಡಿನ ಸಂಪರ್ಕಕ್ಕೆ ಬಂದ ನೆಸರ್, ಚೆಂಡನ್ನು ಗಾಳಿಯಲ್ಲಿ ಎಸೆದು ಬೌಂಡರಿ ಒಳಗೆ ಕಾಲಿಟ್ಟರು. ಬೌಂಡರಿ ಒಳಗೇ ಮತ್ತೆ ನೆಗೆದು ಚೆಂಡನ್ನು ಹೊರಕ್ಕೆ ಎಸೆದ ನೆಸರ್, ಗೆರೆಯಿಂದ ಒಳಬಂದು ಕ್ಯಾಚ್ ಪೂರ್ಣಗೊಳಿಸಿದರು.
ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಬ್ರಿಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್ ನಡುವಿನ ಪಂದ್ಯವು ಹೈಸ್ಕೋರಿಂಗ್ ಪಂದ್ಯಕ್ಕೆ ಸಾಕ್ಷಿಯಾಯಿತು. ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ಹೀಟ್ ತಂಡವು 5 ವಿಕೆಟ್ ಕಳೆದುಕೊಂಡು 224 ರನ್ ಬಾರಿಸಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ ತಂಡವು ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆಲುವಿನತ್ತ ಮುಖ ಮಾಡಿತ್ತು. ಆದರೆ 19ನೇ ಓವರ್‌ನ ಎರಡನೇ ಎಸೆತದಲ್ಲಿ ಈ ವಿವಾದಾತ್ಮಕ ಕ್ಯಾಚ್‌ಗೆ ಜೋರ್ಡನ್ ಸಿಲ್ಕ್ ಪೆವಿಲಿಯನ್ ಸೇರಿದರು. ಜೋರ್ಡನ್ ಸಿಲ್ಕ್ ವಿಕೆಟ್ ಒಪ್ಪಿಸುವ ಮುನ್ನ ಕೇವಲ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 41 ರನ್ ಬಾರಿಸಿದ್ದರು. ಅಂತಿಮವಾಗಿ ಸಿಡ್ನಿ ಸಿಕ್ಸರ್ಸ್ ತಂಡವು 209 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 15 ರನ್‌ಗಳ ಸೋಲು ಅನುಭವಿಸಿತು.