ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬಾಲಿವುಡ್ ವಿರುದ್ಧ ಗುಡುಗಿದ ಬೆನ್ನಲ್ಲೇ ಕರಣ್ ಜೋಹರ್ ತಬ್ಬಿ ಅಭಿನಂದಿಸಿದ ಪ್ರಿಯಾಂಕಾ; ವಿಡಿಯೋ ವೈರಲ್

Twitter
Facebook
LinkedIn
WhatsApp
1 2

ಬಾಲಿವುಡ್ ಸ್ಟಾರ್ ನಟಿ, ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಟ್ಟು ಹೋಗಿದ್ದೇಕೆ ಎಂದು ಬಹಿರಂಗ ಪಡಿಸಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದರು. ಪ್ರಿಯಾಂಕಾ ಹೇಳಿಕೆಗೆ ಪರ ವಿರೋಧ ಚರ್ಚೆ ಪ್ರಾರಂಭವಾಗಿತ್ತು. ಪ್ರಿಯಾಂಕಾ ಹಾಲಿವುಡ್‌ನಲ್ಲಿ ಬ್ಯುಸಿಯಾಗಿ ಅನೇಕ ವರ್ಷಗಳೇ ಆಗಿವೆ. ಆದರೆ ಈಗ ಬಾಲಿವುಡ್ ತೊರೆದ ಬಗ್ಗೆ ಮಾತನಾಡಿ ಅಚ್ಚರಿ ಹೇಳಿಕೆ ನೀಡಿದ್ದರು. ಹಿಂದಿ ಸಿನಿಮಾರಂಗದ ಕರಾಳ ಮುಖವನ್ನು ಬಹಿರಂಗ ಪಡಿಸಿದ್ದರು. ನಪೋಟಿಸಂ ಬಗ್ಗೆ ಮಾತನಾಡಿದ್ದರು. ಪ್ರಿಯಾಂಕಾ ಚೋಪ್ರಾ ಹೇಳಿಕೆಯನ್ನು ಬೆಂಬಲಿಸಿ ನಟಿ ಕಂಗನಾ ರಣಾವತ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ದೊಡ್ಡ ಮಟ್ಟದ ಸಂಚಲನ ಮೂಡಿಲಿದ ಬೆನ್ನಲ್ಲೇ ನಟಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಮರಳಿದ್ದಾರೆ. 

ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಇಡೀ ಬಾಲಿವುಡ್ ಭಾಗಿಯಾಗಿತ್ತು. ಸಮಾರಂಭಕ್ಕೆಂದು ಪ್ರಿಯಾಂಕಾ ಅಮೆರಿಕಾದಿಂದ ಪತಿ ನಿಕ್ ಜೋನಸ್ ಜೊತೆ ಮರಳಿದ್ದರು. ಮೊದಲ ಬಾರಿಗೆ ಮಗಳು ಮಾಲ್ತಿ ಜೊತೆ ಭಾರತಕ್ಕೆ ಬಂದಿಳಿದ್ದಾರೆ. ಸಮಾರಂಭದಲ್ಲಿ ಪ್ರಿಯಾಂಕಾ ನಿರ್ಮಾಪಕ ಕರಣ್ ಜೋಹರ್ ಅವರನ್ನು ತಬ್ಬಿಕೊಂಡು ಅಭಿನಂದಿಸಿದರು. ಇಬ್ಬರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

desktop wallpaper priyanka chopra bollywood actress saree beauty thumbnail

ಅಂದಹಾಗೆ ಪ್ರಿಯಾಂಕಾ ಬಾಲಿವುಡ್ ಬಿಡಲು ಕಾರಣ ಕರಣ್ ಜೋಹರ್ ಎಂದು ಹೇಳಲಾಗುತ್ತಿದೆ. ಕರಣ್ ಬ್ಯಾನ್ ಮಾಡಿದ ಕಾರಣ ಪ್ರಿಯಾಂಕಾ ಭಾರತ ಬಿಟ್ಟು ಹೋಗಿದ್ದು ಎನ್ನುವ ಮಾತು ಕೇಳಿಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ನಟಿ ಕಂಗನಾ ರಣಾವತ್ ಕೂಡ ಇದೇ ಮಾತನ್ನು ಹೇಳಿದ್ದರು.  ಕರಣ್ ಜೋಹರ್, ಪ್ರಿಯಾಂಕಾ ಅವರನ್ನು ಬ್ಯಾನ್ ಮಾಡಿದ್ದರು ಎಂದು ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಎಲ್ಲಾ ಬೆಳವಣಿಗಳ ನಡುವೆ ಪ್ರಿಯಾಂಕಾ ಮತ್ತು ಕರಣ್ ಒಟ್ಟಿಗೆ ಕಾಣಿಸಿಕೊಂಡಿರುವುದು ಬಾಲಿವುಡ್ ಮಂದಿಯ ಹುಬ್ಬೇರುವಂತೆ ಮಾಡಿದೆ. 

ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಇಬ್ಬರೂ ಮಾತನಾಡುತ್ತಿದ್ದರು. ಪಕ್ಕದಲ್ಲೇ ಇದ್ದ ಕರಣ್ ನಟ ರಣ್ವೀರ್ ಸಿಂಗ್ ಜೊತೆ ಮಾತನಾಡುತ್ತಿದ್ದರು. ಆಗ ಪ್ರಿಯಾಂಕಾ ಅವರನ್ನು ನೋಡಿ ಹಗ್ ಮಾಡಿ ಮಾತನಾಡಿದರು. ಬಳಿಕ ಪ್ರಿಯಾಂಕಾ ಪತಿ ನಿಕ್ ಜೋನಸ್ ಅವರನ್ನು ಹಗ್ ಮಾಡಿ ಅಭಿನಂದಿಸಿದರು ಕರಣ್. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

HD wallpaper priyanka chopra actress hollywood

ಬಾಲಿವುಡ್ ತೊರೆದ ಬಗ್ಗೆ ಪ್ರಿಯಾಂಕಾ ಹೇಳಿಕೆ

ಡಾಕ್ಸ್ ಶೆಫರ್ಡ್ ಅವರ ಪಾಡ್‌ಕಾಸ್ಟ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನಲ್ಲಿ ಮಾತನಾಡದ  ಪ್ರಿಯಾಂಕಾ ಭಾರತ ಬಿಟ್ಟು ಯಾಕೆ ಬಂದೆ ಎಂದು ಬಹಿರಂಗಪಡಿಸಿದ್ದಾರೆ. ‘ನಾನು ಇಂಡಸ್ಟ್ರಿಯಲ್ಲಿ (ಬಾಲಿವುಡ್) ಮೂಲೆಗೆ ತಳ್ಳಲ್ಪಟ್ಟಿದ್ದೆ, ನನ್ನನ್ನು ಯಾವುದೇ ಸಿನಿಮಾಗೆ ಆಯ್ಕೆ ಮಾಡುತ್ತಿರಲಿಲ್ಲ. ನಾನು ಬಾಲಿವುಡ್ ಜನರ ಜೊತೆ ಗೋಮಾಂಸ ತಿಂದಿದ್ದೇನೆ. ನನಗೆ ಆ ಆಟದಲ್ಲಿ ಆಡಲು ಇಷ್ಟವಿರಲ್ಲ. ಆ ರಾಜಕೀಯದಿಂದ ಬೇಸತ್ತಿದ್ದೆ ಮತ್ತು ನನಗೆ ಬ್ರೇಕ್ ಬೇಕಿತ್ತು’ ಎಂದು ಬಹಿರಂಗ ಪಡಿಸಿದ್ದಾರೆ. 


ಕಂಗನಾ ಪ್ರತಿಕ್ರಿಯೆ 

‘ಬಾಲಿವುಡ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಕೂಡ ಇದನ್ನೇ ಹೇಳುತ್ತಿದ್ದಾರೆ. ಜನರ ಗುಂಪು ಪ್ರಿಯಾಂಕಾ ವಿರುದ್ಧ ತಿರುಗಿಬಿತ್ತು. ಆಕೆಯನ್ನು ಬೆದರಿಸಿದರು. ಅವಳನ್ನು ಓಡಿಸಿದರು. ಸಿನಿಮಾರಂಗದ ಸ್ವಯಂ ನಿರ್ಮಿತ ಮಹಿಳೆಯನ್ನು ಭಾರತದಿಂದ ಓಡಿಸಿದರು. ಕರಣ್ ಜೋಹರ್ ಆಕೆಯನ್ನು ಬ್ಯಾನ್ ಮಾಡಿದ್ದರು ಎನ್ನುವುದು ಕೂಡ ಪ್ರತಿಯೊಬ್ಬರಿಗೂ ಗೊತ್ತು’ ಎಂದು ಹೇಳಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist