ಆಮಿರ್ ಖಾನ್ (Aamir Khan) ಹಾಗೂ ರೀನಾ ದತ್ತ ದಂಪತಿ ಮಗಳು ಇರಾ ಖಾನ್ (Ira Khan) ತಮ್ಮ ಬಹುಕಾಲದ ಬಾಯ್ ಫ್ರೆಂಡ್ ನೂಪುರ್ ಶಿಖಾರೆ ಜತೆ ಶುಕ್ರವಾರ (ನ.18) ಮುಂಬೈನಲ್ಲಿ ನಿಶ್ಚಿತಾರ್ಥ (engaged) ಮಾಡಿಕೊಂಡಿದ್ದಾರೆ. ನೂಪುರ್ ಶಿಖಾರೆ ಅವರು ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಾಗಿದ್ದಾರೆ. ಇರಾ ಖಾನ್ ಮತ್ತು ನೂಪುರ್ ಶಿಖಾರೆ ಬಹಳ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಸದ್ಯ ಇಬ್ಬರೂ ಪರಸ್ಪರ ರಿಂಗ್ ಬದಲಾಯಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ನಟ ಆಮಿರ್ ಖಾನ್, ತಾಯಿ ರೀನಾ ದತ್ತಾ, ಆಮಿರ್ ಎರಡನೇ ಪತ್ನಿ ಆಗಿದ್ದ ಕಿರಣ್ ರಾವ್, ಆಮಿರ್ ಅವರ ಸೋದರಳಿಯ ಇಮ್ರಾನ್ ಖಾನ್ ಮತ್ತು ಅಜ್ಜಿ ಜೀನತ್ ಹುಸೇನ್ ಭಾಗವಹಿಸಿದ್ದರು. ಇರಾ ಖಾನ್ ತಮ್ಮ ನಿಶ್ಚಿತಾರ್ಥ ಸಮಾರಂಭದ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗುತ್ತಿವೆ.
ಕಳೆದ ಎರಡು ವರ್ಷಗಳಿಂದ ಇರಾ ಹಾಗೂ ನೂಪುರ್ ಡೇಟಿಂಗ್ ಮಾಡುತ್ತಿದ್ದರು. ಇದನ್ನು ಇಬ್ಬರೂ ಮುಚ್ಚಿಟ್ಟಿರಲಿಲ್ಲ. ನೂಪುರ್ ಜತೆ ಇರುವ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಇರಾ ಈ ಹಿಂದೆ ಹಂಚಿಕೊಳ್ಳುತ್ತಲೇ ಬಂದಿದ್ದರು. ಈಗ ಇಬ್ಬರೂ ಅಧಿಕೃತವಾಗಿ ತಮ್ಮ ಕುಟುಂಬಗಳ ಮುಂದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಾದ ನೂಪುರ್ ಶಿಖಾರೆ ಅವರು ಕೆಲವು ತಿಂಗಳ ಹಿಂದೆ ಇರಾ ಖಾನ್ ಅವರಿಗೆ ಇಟಲಿಯಲ್ಲಿ ನಡೆದ ತಮ್ಮ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಪ್ರಪೋಸ್ ಮಾಡಿದ್ದರು. ಆ ವಿಡಿಯೋವನ್ನು ನೂಪುರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಮಗಳ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಆಮಿರ್ ಖಾನ್
57 ವರ್ಷದ ಆಮಿರ್ ಖಾನ್ ಅವರು ಬಿಳಿ ಕುರ್ತಾ ಪೈಜಾಮಾದಲ್ಲಿ ತಮ್ಮ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲದೇ ‘ಪಾಪಾ ಕೆಹತಾ ಹೇ ಬಡಾ ನಾಮ್ ಕರೇಗಾ..’ ಹಾಡಿಗೆ ಹೆಜ್ಜೆ ಹಾಕಿ ಖುಷಿ ಪಟ್ಟಿದ್ದಾರೆ. ಸದ್ಯ ಆಮಿರ್ ಡ್ಯಾನ್ಸ್ ಮಾಡಿರು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಸೋಲಿನಿಂದ ಕುಗ್ಗಿ ಹೋಗಿರುವ ಆಮಿರ್ ಸದ್ಯ ಸಿನಿಮಾ ಮಾಡುವುದರಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist