ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬಹು ವರ್ಷಗಳ ಕನಸು ನನಸು; ಟಿ-20 ವಿಶ್ವಕಪ್ ಕಿರೀಟ ಗೆದ್ದ ಭಾರತ

Twitter
Facebook
LinkedIn
WhatsApp
ಬಹು ವರ್ಷಗಳ ಕನಸು ನನಸು; ಟಿ-20 ವಿಶ್ವಕಪ್ ಕಿರೀಟ ಗೆದ್ದ ಭಾರತ

ಬಾರ್ಬಡೋಸ್​: ಕಿಂಗ್ ಕೊಹ್ಲಿಯ ಅಬ್ಬರದ ಅರ್ಧ ಶತಕ (76 ರನ್​) ರನ್ ಹಾಗೂ ಆಲ್​ರೌಂಡರ್ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​, 31 ಎಸೆತ, 4 ಸಿಕ್ಸರ್​, 1 ಫೋರ್​) ನೆರವು ಹಾಗೂ ಕೊನೇ ಕ್ಷಣದ ರೋಚಕ ಹೋರಾಟ ಫಲವಾಗಿ ಭಾರತ ತಂಡ ವಿಶ್ವ ಕಪ್​ ಗೆದ್ದುಕೊಂಡಿತು. ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ಗಳ ರೋಚಕ ಗೆಲುವು ದಾಖಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತದ ಪಾಲಿಗೆ ಇದು ಸ್ಮರಣೀಯ ಟ್ರೋಫಿ. ಹಿರಿಯ ಆಟಗಾರರಾದ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ಅಪೇಕ್ಷಿತ ಚಾಂಪಿಯನ್ ಪಟ್ಟ. ಅತ್ತ ದಕ್ಷಿಣ ಆಫ್ರಿಕಾ ತಂಡ ತನ್ನ ಚೋಕರ್ಸ್​ ಹಣೆಪಟ್ಟಿಯನ್ನು ಮತ್ತಷ್ಟು ದಿನ ಕಟ್ಟಿಕೊಳ್ಳುವಂತಾಯಿತು. 4 ದಶಕಗಳ ತನ್ನ ವಿಶ್ವ ಕಪ್​ ಅಭಿಯಾನದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದೇ ನಿರಾಸೆ ಎದುರಿಸಿತು.

ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ವಿಶ್ವ ಕಪ್​ ಹಾಗೂ 17 ವರ್ಷಗಳ ಬಳಿಕ ದೊರೆತ ಟಿ20 ವಿಶ್ವ ಕಪ್​. ಭಾರತ ತಂಡ 2007ರ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವ ಕಪ್​ ಗೆದ್ದಿದ್ದರೆ 2011ರ ಏಕ ದಿನ ವಿಶ್ವ ಕಪ್ ಗೆದ್ದುಕೊಂಡಿದೆ.

ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ನಿಗದಿತ 20 ಓವರ್​ಗಳು ಮುಕ್ತಾಯಗೊಳ್ಳುವಾಗ 7 ವಿಕೆಟ್​ ನಷ್ಟ ಮಾಡಿಕೊಂಡು 176 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 169 ರನ್ ಬಾರಿಸಿ ಸೋಲೊಪ್ಪಿಕೊಂಡಿತು

ಸ್ಥಳೀಯವಾಗಿ ಬೆಳಗಿನ ಅವಧಿಯಾಗಿದ್ದ ಕಾರಣ ಸ್ವಲ್ಪ ಮಟ್ಟಿನ ತೇವಾಂಶ ಪಿಚ್​ ಮೇಲೆ ಇತ್ತು .ಅದರ ಲಾಭ ಪಡೆಯಲು ರೋಹಿತ್ ಮುಂದಾದರು. ಆದರೆ, ದಕ್ಷಿಣ ಆಫ್ರಿಕಾ ಬೌಲರ್​​ಗಳು ಅದಕ್ಕೆ ಆಸ್ಪದ ಕೊಡಲಿಲ್ಲ .ಮೊದಲ ಓವರ್​ನಲ್ಲಿ ಭಾರತಕ್ಕೆ ಉತ್ತಮ ರನ್ ಬಂದ ಹೊರತಾಗಿಯೂ ಕಳೆದ ಎರಡು ಪಂಂದ್ಯಗಳ ಹೀರೋ ರೋಹಿತ್ ಶರ್ಮಾ 9 ರನ್​ಗೆ ಔಟಾದರು. ಅವರು ಅದಕ್ಕೆ ಮೊದಲು ಸತತ 2 ಫೋರ್​ ಬಾರಿಸಿದ್ದರು. ಆದರೆ, ನಾಯಕ ಮಾರ್ಕ್ರಮ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದು. ರೋಹಿತ್ ಔಟಾದ ತಕ್ಷಣವೇ ಭಾರತಕ್ಕೆ ಆಘಾತ ಉಂಟಾಯಿತು. ಆದರೆ ರಿಷಭ್ ಪಂತ್ ಸರಿಪಡಿಸುವರೆಂಬ ವಿಶ್ವಾಸ ಇತ್ತು. ಆದರೆ, ಅವರು ಶೂನ್ಯಕ್ಕೆ ನಿರ್ಗಮಿಸಿದರು. 2 ಎಸೆತ ಎದುರಿಸಿದ ಅವರು ಸ್ವೀಪ್​ ಮಾಡಲು ಹೋಗಿ ಅನಗತ್ಯ ಕ್ಯಾಚ್ ನೀಡಿ ಔಟಾದರು.

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಸೂರ್ಯಕುಮಾರ್ 4 ಎಸೆತ ಎದುರಿಸಿ 3 ರನ್​ಗೆ ಔಟಾದ ತಕ್ಷಣ ಭಾರತಕ್ಕೆ ಆಘಾತ ಉಂಟಾಯಿತು. ಹೆನ್ರಿಚ್ ಕ್ಲಾಸೆನ್ ಬೌಂಡರಿ ಲೈನ್​ನಲ್ಲಿ ಹಿಡಿದ ಅದ್ಭುತ ಕ್ಯಾಚ್ ಗೆ ಅವರು ಔಟಾದರು. ಈ ವೇಳೆ 4.3 ಓವರ್​ಗಳಲ್ಲಿ ಭಾರತ 3 ವಿಕೆಟ್ ಕಳೆದುಕೊಂಡಿತು.

ಮಿಂಚಿದ ಕೊಹ್ಲಿ

ಭಾರತ ತಂಡದ ವಿಕೆಟ್​ಗಳು ಪತನಗೊಳ್ಳುತ್ತಿದ್ದಂತೆ ವಿರಾಟ್ ಕೊಹ್ಲಿ ಜಾಗೃತರಾದರು. ಅವರು ನಿಧಾನಗತಿಯ ಆಟಕ್ಕೆ ಮೊರೆ ಹೋಗಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ಆದರೆ, ಮುಂಬಡ್ತಿ ಪಡೆದುಕೊಂಡು ಕ್ರೀಸ್​ಗೆ ಬಂದ ಅಕ್ಷರ್ ಪಟೇಲ್ ಇದೇ ತಕ್ಕ ಸಮಯ ಎಂಬಂತೆ ಆಡಿದರು. ಅಗತ್ಯ ಸಂದರ್ಭದಲ್ಲಿ ಬಿಡುಬೀಸಿನ ಆಟವಾಡಿದರು. ಹೀಗಾಗಿ ಭಾರತ ತಂಡದ ಸ್ಕೋರ್​ ಪಟ್ಟಿ ಬೆಳೆಯಲು ಆರಂಭಗೊಂಡಿತು. ಕೊಹ್ಲಿ ಜತೆ ಉತ್ತಮ ಜತೆಯಾಟವಾಡಿದ ಅಕ್ಷರ್​ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಆದರೆ, ರನ್​ಗಾಗಿ ಓಡುವ ವೇಳೆ ಯಾಮಾರಿ ಔಟಾದರು. ಅವರು 3 ರನ್ ಕೊರತೆಯಿಂದ ಅರ್ಧ ಶತಕದ ಅವಕಾಶ ಕಳೆದುಕೊಂಡರು.

ಶಿವಂ ದುಬೆ ಹಿಂಬಡ್ತಿ ಪಡೆದುಕೊಂಡು ಬಂದು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರು 16 ಎಸೆತಕ್ಕೆ 27 ರನ್ ಬಾರಿಸಿದರು. ಏತನ್ಮಧ್ಯೆ, 48 ಎಸೆತಕ್ಕೆ ಅರ್ಧ ಶತಕ ಪೂರೈಸಿದ ವಿರಾಟ್ ಕೊಹ್ಲಿ ಅಬ್ಬರಿಸಲು ಆರಂಭಿಸಿದರು. ಬೌಂಡರಿ ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಬೆದರಿಕೆ ಹುಟ್ಟಿಸಿದರು. ಇದು ಫೈನಲ್​ ಪಂದ್ಯದಲ್ಲಿ ಅವರ ಪಾಲಿಗೆ ಸ್ಮರಣೀಯ ಇನಿಂಗ್ಸ್ ಎನಿಸಿತು.

ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಸೆ

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡಿತು. ಆದರೆ, ನಂತರದಲ್ಲಿ ಚೇತರಿಸಿಕೊಂಡು ಪೈಪೋಟಿ ಒಡ್ಡಿತು. ಒಂದು ಹಂತದಲ್ಲಿ ಭಾರತದ ಗೆಲುವು ನಷ್ಟವಾಯಿತು ಎಂದು ಅಂದುಕೊಳ್ಳಲಾಯಿತು. ಆದರೆ ಕೊನೇ ಹಂತದಲ್ಲಿ ಮ್ಯಾಜಿಕ್ ಮಾಡಿದ ಹಾರ್ದಿಕ್ ಪಾಂಡ್ಯ, ಜಸ್​ಪ್ರಿತ್​ ಬುಮ್ರಾ ಹಾಗೂ ಅರ್ಶ್​ ದೀಪ್​ ಗೆಲುವು ತಂದುಕೊಟ್ಟರು. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್​, 39 ರನ್ , ಟ್ರಿಸ್ಟಾನ್ಸ್ ಸ್ಟಬ್ಸ್​ 31 ರನ್​, ಬಾರಿಸಿದರೆ ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್​ 52 ರನ್ ಬಾರಿಸಿ ಭಾರತಕ್ಕೆ ಭಯ ಹುಟ್ಟಿಸಿದರು. ಕೊನೆಯಲ್ಲಿ ಡೇವಿಡ್​ ಮಿಲ್ಲರ್​ 21 ರನ್ ಬಾರಿಸಿದರೂ ಭಾರತದ ಕೊನೇ ಹಂತದ ಪ್ರಯತ್ನಕ್ಕೆ ಅವರ ಹೋರಾಟ ಮಂಕಾಯಿತು.

2024 T20 World Cup

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ