ಬದಲಾವಣೆ ಪ್ರಯೋಗ ಮುಂದಿನ ಹತ್ತು ವರ್ಷಗಳಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತಂದು ಕೊಡುತ್ತದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಬೆಂಗಳೂರು: ಬದಲಾವಣೆ ಕಾಲದ ಅಗತ್ಯ. ಪಕ್ಷಕ್ಕೆ ಶಕ್ತಿ ಇರುವಾಗಲೇ ಹೊಸ ನಾಯಕತ್ವ ಸೃಷ್ಟಿಸುವ ಸಾಹಸಕ್ಕೆ ಕೈ ಹಾಕ ಬೇಕಾಗುತ್ತದೆ. ಈ ಪ್ರಯೋಗ ಮುಂದಿನ ಹತ್ತು ವರ್ಷಗಳಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತಂದು ಕೊಡುತ್ತದೆ ಎಂಬುದರಲ್ಲಿ ಅನು ಮಾನ ಬೇಡ. ಇದು ನಮ್ಮ ವರಿಷ್ಠರು ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ದಿಟ್ಟ ನಿಲುವು. ಬದಲಾವಣೆಯ ಚರ್ಚೆಯ ಜತೆಗೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.
“ಬದಲಾವಣೆ – ಪ್ರಯೋಗ ಬಿಜೆಪಿ ತೆಗೆದುಕೊಂಡ ಈ ಕ್ಷಣದ ನಿರ್ಧಾರವಲ್ಲ. ಸಾಕಷ್ಟು ಯೋಚಿಸಿ ಕೈಗೊಂಡ ತೀರ್ಮಾನ. ಬೇಸರಿಸಿದವರನ್ನು ಮನವೊಲಿಸುತ್ತೇವೆ. ಇಷ್ಟಾದ ಮೇಲೂ ಪಕ್ಷ ಬಿಡುತ್ತೇನೆ ಎನ್ನುವವರಿಗೆ ಶುಭವಾಗಲಿ’ ಎಂದಿದ್ದಾರೆ.
ಬದಲಾವಣೆ, ಪ್ರಯೋಗಕ್ಕೆ ಸಂಬಂಧಪಟ್ಟಂತೆ ಪಕ್ಷ ಸ್ಪಷ್ಟ ನಿಲುವನ್ನು ಹೊಂದಿದೆ. ಕೇವಲ ಈ ಒಂದು ಚುನಾವಣೆಯ ಟಿಕೆಟ್ ಹಂಚಿಕೆಗೆ ಸೀಮಿತವಾಗಿ ಪಕ್ಷ ಈ ತೀರ್ಮಾನ ಕೈಗೊಂಡಿಲ್ಲ. ಭವಿಷ್ಯದ ನಾಯಕತ್ವ ನಿರ್ಮಾಣವೇ ಇದರ ಹಿಂದಿರುವ ನೈಜ ಉದ್ದೇಶ. ಸಣ್ಣ ಸಮುದಾಯದಿಂದ ಬಂದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವನಾಯಕರಾಗಿ ಬೆಳೆದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಹಾಗೆಂದು ಹಿರಿಯರನ್ನು ಸಾರಾಸಗಟಾಗಿ ನಿರ್ಲಕ್ಷಿéಸಿಲ್ಲ. ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳುತ್ತದೆ ಎಂದಿದ್ದಾರೆ