ಬಟ್ಟೆ ಒಣಗಿಸುವಾಗ ಕರೆಂಟ್ ಶಾಕ್: ಒಂದೇ ಕುಟುಂಬದ ಮೂವರು ಬಲಿ
ಪಶ್ಚಿಮ ಬಂಗಾಳ: ವಿದ್ಯುತ್ ಅವಘಡ ಸಂಭವಿಸಿ ಒಂದೇ ಕುಟುಂಬದ ಮೂವರು ದಾರುಣ ಅಂತ್ಯವಾದ ಘಟನೆ ಕೋಲ್ಕತ್ತಾದ ಎಕ್ಬಾಲ್ಪೋರ್ ಪ್ರದೇಶದಲ್ಲಿ ಭಾನುವಾರ (ಮೇ.14 ರಂದು) ನಡೆದಿರುವುದು ವರದಿಯಾಗಿದೆ.
ಇಝರ್ ಅಖ್ತರ್ ಎಂಬಾತ ಗೋಡೆಯೊಂದರ ಮೇಲೆ ಹಾಯ್ದು ಹೋಗಿರುವ ಲೋಹದ ತಂತಿಯಲ್ಲಿ ತನ್ನ ಒದ್ದೆ ಬಟ್ಟೆಯನ್ನು ಒಣಗಿಸಲು ಹೋಗಿದ್ದಾನೆ. ಈ ವೇಳೆ ತೂಗುಹಾಕಿದ್ದ ಲೋಹದ ತಂತಿಯ ಮೂಲಕ ವಿದ್ಯುತ್ ಹರಿದಿದೆ. ಕೂಡಲೇ ಆತನನ್ನು ಉಳಿಸಲು ಆತನ ಪತ್ನಿ ಮುಂತಹಾ ಬೇಗಂ ಹಾಗೂ ಅತ್ತೆ ಖೈರುಲ್ ನೆಸ್ಸಾ ಧಾವಿಸಿದ್ದಾರೆ. ಆದರೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ.
ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದರಲ್ಲಿ ಪತ್ನಿ ಹಾಗೂ ಅತ್ತೆ ಇಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಮೃತಪಟ್ಟಿದ್ದು, ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಇಝರ್ ಅಖ್ತರ್ ಆಸ್ಪತ್ರೆಯಲ್ಲಿ ದಾಖಲಾಗಿ ಕೆಲ ಸಮಯದ ಬಳಿಕ ಮೃತಪಟ್ಟಿದ್ದಾರೆ. ಘಟನೆಯ ನಂತರ, ಕೋಲ್ಕತ್ತಾ ಎಲೆಕ್ಟ್ರಿಕ್ ಸಪ್ಲೈ ಕಾರ್ಪೊರೇಷನ್ (CESC) ಲಿಮಿಟೆಡ್ ಅಧಿಕಾರಿಗಳು ಅಪಘಾತಕ್ಕೆ ಕಾರಣವಾದ ಕೇಬಲ್ ನ್ನು ಪರಿಶೀಲಿಸಲು ಅಪಘಾತದ ಸ್ಥಳಕ್ಕೆ ಭೇಟಿ ನೀಡಿದರು.