ಬಂಧುತ್ವ ಕ್ರಿಸ್ಮಸ್ ಆಚರಣೆ 2022; ಕ್ರಿಶ್ಚಿಯನ್ ಧರ್ಮವು ಶಾಂತಿ- ಪ್ರೀತಿಯ ಧರ್ಮ, “ಬದುಕು ಮತ್ತು ಬದುಕಲು ಬಿಡು” ಧ್ಯೇಯದಿಂದ ಮನುಕುಲಕ್ಕೆ ಶಾಂತಿ": ಶ್ರೀ ಶಶಿಕುಮಾರ್ IPS

ಮoಗಳೂರು, ಡಿ.28: “ಕ್ರಿಸ್ಮಸ್ ಎಂದರೆ ಶಾಂತಿಯ ಸಂಭ್ರಮ. ಕ್ರಿಸ್ತನ ಜನನವು ಜಗತ್ತಿಗೆ ಶಾಂತಿಯನ್ನು ತಂದಿದೆ. ಪ್ರಪಂಚದಾದ್ಯoತ ಕ್ರೈಸ್ತರು ತಮ್ಮ ಜೀವನದಲ್ಲಿ ಕ್ರಿಸ್ತನ ಶಾಂತಿ, ಸಂತೋಷ, ಸಹನೆ ಮತ್ತು ತ್ಯಾಗವನ್ನು ಪ್ರತಿಪಾದಿಸುತ್ತಾರೆ ಮತ್ತು ಈ ಜಗತ್ತನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡುತ್ತಾರೆ. ಕ್ರಿಶ್ಚಿಯನ್ ಧರ್ಮವು ಶಾಂತಿ-ಪ್ರೀತಿಯ ಧರ್ಮವಾಗಿದೆ. ‘ಬದುಕು ಮತ್ತು ಬದುಕಲು ಬಿಡು’ ಎಂಬ ಧ್ಯೇಯವಾಕ್ಯದಿಂದ ಕ್ರಿಶ್ಚಿಯನ್ ಸಮುದಾಯ ಎಲ್ಲೆಡೆ ಶಾಂತಿಯನ್ನು ನೆಲೆಸುವಂತೆ ಮಾಡಿದೆ” ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಶ್ರೀ ಎನ್ ಶಶಿಕುಮಾರ್ ಡಿಸೆಂಬರ್ 27 ರಂದು ನಗರದ ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಮಂಗಳೂರು ಧರ್ಮಕ್ಷೇತ್ರವು ಆಯೋಜಿಸಿದ ಬಂಧುತ್ವ ಕ್ರಿಸ್‌ಮಸ್ ಆಚರಣೆಯ ಗೌರವಾನ್ವಿತ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದರು.
‘ಬಂಧುತ್ವ’ ಕಾರ್ಯಕ್ರಮವು ಮಂಗಳೂರಿನ ಬಿಷಪ್ ಅತಿ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶದ ಮೂಲಕ ಇತರ ಧರ್ಮಗಳೊಂದಿಗೆ ಬಾಂಧವ್ಯವನ್ನು ಬಲಪಡಿಸಲು ಆರಂಬಿಸಿದ ಒಂದು ನೂತನ ಕಾರ್ಯಕ್ರಮ. ಇದನ್ನು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಬಿಷಪ್ ನಿವಾಸದಲ್ಲಿ ಆಯೋಜಿಸಲಾಗುತ್ತಿತ್ತು. ಈ ವರ್ಷ, ಮಂಗಳೂರು ಧರ್ಮಪ್ರಾಂತ್ಯವು ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಸಹಯೋಗದೊಂದಿಗೆ ಬಂಧುತ್ವ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಲಾಯಿತು.
ಮಂಗಳೂರು ಪೊಲೀಸ್ ಕಮಿಷನರ್, ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಬಂಧುತ್ವ ಆಚರಣೆಗೆ ಅತಿಥಿಗಳಾಗಿ ಆಗಮಿಸಿದ್ದರು. ರಾಜಕೀಯ ನಾಯಕರು; ಮಾಜಿ ಶಾಸಕ ಜೆ ಆರ್ ಲೋಬೋ, ಮಾಜಿ ಸಚಿವ ರಮಾನಾಥ್ ರೈ, ಮಾಜಿ ಒಐಅ ಐವನ್ ಡಿ ಸೋಜಾ ಸೇರಿದಂತೆ; ಸಾರ್ವಜನಿಕ ಆಡಳಿತದ ಗಣ್ಯರು, ನಗರದ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜಾ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಅಧಿಕಾರಿಗಳು, ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸತೀಶ್ ಭಂಡಾರಿ, ಯೆನೆಪೊಯ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಜಯ್ ಕುಮಾರ್, ಡಾ.ಭಾಸ್ಕರ ಶೆಟ್ಟಿ (ನಗರ ಆಸ್ಪತ್ರೆ), ಡಾ. ಶಾಂತಾರಾಮ ಶೆಟ್ಟಿ (ತೇಜಸ್ವಿನಿ ಆಸ್ಪತ್ರೆ), ಡಾ. ಯೂಸುಫ್ ಕುಂಬ್ಳೆ (ಇಂಡಿಯಾನಾ ಆಸ್ಪತ್ರೆ), ಬ್ಯಾಂಕಿoಗ್ ವಲಯದ ಅಧಿಕಾರಿಗಳು, ಎನ್‌ಜಿಒ, ಮಾಧ್ಯಮಗಳು, ಧಾರ್ಮಿಕ ಮುಖಂಡರು, ಕ್ರಿಶ್ಚಿಯನ್ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಶ್ರೀ ಶಶಿಕುಮಾರ್, “ಮಂಗಳೂರಿನ ಎಲ್ಲಾ ಕಥೋಲಿಕ್ ಸಂಸ್ಥೆಗಳಾದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು, ರೋಶಿನಿ ನಿಲಯ, ಸೇಂಟ್ ಅಲೋಶಿಯಸ್ ಕಾಲೇಜು, ಸೇಂಟ್ ಆಗ್ನೆಸ್ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಉತ್ತಮವಾಗಿ ಸಹಕರಿಸುತ್ತಿವೆ ಮತ್ತು ಅವರು ಸಾರ್ವಜನಿಕ ಆಡಳಿತದ ಕಡೆಗೆ ಉದಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಗಮನಿಸಲು ನನಗೆ ತುಂಬಾ ಸಂತೋಷವಾಗಿದೆ. ನಾನು ನಿಮಗೆ ಕೃತಜ್ಞನಾಗಿದ್ದೇನೆ” ಎಂದು ಕೃತಜ್ಞತಾಪೂರ್ವಕವಾಗಿ ನುಡಿದರು.
ಶ್ರೀ ಶಶಿಕುಮಾರ್, ಮಂಗಳೂರು ನಗರದ ಕುರಿತು ಪ್ರಶಂಶಣೀಯ ಮಾತುಗಳಾನ್ನಾಡುತ್ತಾ, “ಶಾಂತಿಯುತ ಮತ್ತು ವಿದ್ಯಾವಂತ ನಗರವಾಗಿರುವ ಮಂಗಳೂರಿಗೆ ಸೇವೆ ಸಲ್ಲಿಸಲು ನನಗೆ ಸಂತೋಷವಾಗಿದೆ. ನಗರವು ಬಾಹ್ಯವಾಗಿ ಸೂಕ್ಷ್ಮವಾಗಿ ಕಂಡುಬoದರೂ, ಮಂಗಳೂರಿಗರು ಪರಸ್ಪರ ಗೌರವ ಮತ್ತು ಪರಸ್ಪರ ಸಮನ್ವಯಕ್ಕೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿ ಸಾಮಾಜಿಕ ಶಾಂತಿ ಅಸ್ತವ್ಯಸ್ತಗೊಂಡಾಗ ನಗರವು ಸಹಜ ಸ್ಥಿತಿಗೆ ಬೇಗನೆ ಮರಳುತ್ತದೆ. ಶಾಂತಿಯು ಈ ನೆಲದ ಲಕ್ಷಣ” ಎಂದರು.
ಶ್ರೀ ಶಶಿಕುಮಾರ್ ಅವರು ತಮ್ಮ ಹಾಡಿನ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು ಮತ್ತು ಸುತ್ತಲೂ ಸಂತೋಷದ ವಾತಾವರಣವನ್ನು ಹರಡಿದರು.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ತಮ್ಮ ಸಂದೇಶದಲ್ಲಿ, “ದೇವ ಕುಮಾರನಾದ ಬಾಲ ಯೇಸುವು, ದೇವದೂತ ಅಥವಾ ಪ್ರಾಣಿಯಾಗಿ ಅಲ್ಲ ಜನಿಸಿಲ್ಲ. ಬದಲಾಗಿ ಮಾನವನಾಗಿ ಜನಿಸಿದ್ದಾನೆ. ಅದಕ್ಕಾಗಿಯೇ ಪ್ರತಿಯೊಬ್ಬ ಕ್ರಿಶ್ಚಿಯನ್ನರು ಗರ್ಭದಿಂದ ಸಮಾಧಿಯವರೆಗೆ ಮನುಷ್ಯನನ್ನು ಗೌರವಿಸುತ್ತಾರೆ. ಏಕೆಂದರೆ ದೇವರು ತಮ್ಮ ಜೀವನವನ್ನು ನಮ್ಮೊಂದಿಗೆ ಹಂಚಿಕೊoಡಿದ್ದಾನೆ. ಆತನ ಜೀವನವನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ನಾವು ದೇವರನ್ನು ಹೋಲುವಂತೆ ಮಾಡುವುದು ಆವರ ಉದ್ದೇಶ” ಎಂದು ಹೇಳಿದರು.

“ಕ್ರಿಸ್‌ಮಸ್ ಹಬ್ಬವು ನಮ್ಮೆಲ್ಲರನ್ನೂ ಬಂಧುಗಳಾಗಿ ಒಗ್ಗೂಡಿಸುತ್ತದೆ ಮತ್ತು ಸಹೋದರ ಪ್ರೀತಿಯ ಮೂಲಕ ‘ಬಂಧುತ್ವ’ವನ್ನು ನಿರ್ಮಿಸಲು ಕರೆ ನೀಡುತ್ತದೆ. ಯೇಸುವಿನಿಂದ ಸೌಮ್ಯ ಮತ್ತು ವಿನಮ್ರತೆ, ದಯೆ ಮತ್ತು ಸೌಮ್ಯವಾಗಿರಲು ಮತ್ತು ಸರಳತೆ, ಸಹಾನುಭೂತಿ, ನಮ್ರತೆಯಿಂದ ಒಬ್ಬರನ್ನೊಬ್ಬರು ಗೌರವಿಸಲು ಮತ್ತು ಅವನನ್ನು ಹೋಲುವ ವ್ಯಕ್ತಿಯಾಗಲು ಕಲಿಯುವುದೇ ಕ್ರಿಸ್‌ಮಸ್ ಆಚರಣೆಯ ಮೂಲ ಸಂದೇಶ,” ಎಂದು ಬಿಶಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರಾಯ್ ಕ್ಯಾಸ್ತಲಿನೋ ಸ್ವಾಗತಿಸಿದರು. ಫಾದರ್ ಮುಲ್ಲರ್ ಸಿಬ್ಬಂದಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ವಿವಿಧ ಭಾಷೆಗಳಲ್ಲಿ ಕ್ರಿಸ್‌ಮಸ್ ಹಾಡುಗಳನ್ನು ಹಾಡಿದರು ಮತ್ತು ಕ್ರಿಸ್ಮಸ್ ಸಾಂಟಾದೊoದಿಗೆ ನೃತ್ಯ ಮಾಡಿದರು. ಆಸ್ಪತ್ರೆಯ ಸಂಪರ್ಕ ಅಧಿಕಾರಿ ಡಾ ಕೆಲ್ವಿನ್ï ಪಾಯ್ಸ್, ಕೆಲವು ಒಗಟು ಹಾಗೂ ಸ್ಪರ್ಧೆಗಳೊಂದಿಗೆ ಸಭೆಯನ್ನು ಹುರಿದುಂಬಿಸಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಸಂಚಾಲಕ ವಂದನೀಯ ರಿಚರ್ಡ್ ಕುವೆಲ್ಹೊ ಧನ್ಯವಾದ ಸಲ್ಲಿಸಿ, ಅನ್ನಸಂತರ್ಪಣೆಗೂ ಮುನ್ನ ಪ್ರಾರ್ಥನೆ ಸಲ್ಲಿಸಿದರು. ಡಾ. ರಿತೇಶ್ ಡಿಕುನ್ಹಾ ಮತ್ತು ಡಾ. ಶಾನನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ವರದಿ ಮತ್ತು ಚಿತ್ರಗಳು: ವಂದನೀಯ ಅನಿಲ್ ಫೆರ್ನಾಂಡಿಸ್.