ಬರಿಮಾರು ಗ್ರಾಮದ ಕಡೆಕನ ನಿವಾಸಿ ರೋಹಿತ್ ಎಂಬವರ ಪತ್ನಿ ಪವಿತ್ರ ಎಂಬಾಕೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಮನೆಯಿಂದ ರಾಬರಿ ಮಾಡಲಾಗಿದೆ ಎಂಬ ದೂರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆ ವಿವರ:
ರೋಹಿತ್ ಕುಮಾರ್ ಅವರು ಐಸ್ ಕ್ರೀಂ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಪವಿತ್ರ ಮನೆಯಲ್ಲಿರುತ್ತಿದ್ದರು. ಇವರ ಜೊತೆಗೆ ರೋಹಿತ್ ಅವರ ಇಬ್ಬರು ಮಕ್ಕಳು ಮನೆಯಲ್ಲಿದ್ದಾರೆ.
ಗುರುವಾರ ಮಕ್ಕಳಿಬ್ಬರು ಮೂಡಬಿದಿರೆಯಲ್ಲಿ ನಡೆಯುವ ಜಾಂಬೂರಿ ಕಾರ್ಯಕ್ರಮಕ್ಕೆ ತೆರಳಿದರೆ, ಗಂಡ ಕೆಲಸಕ್ಕೆ ಹೋಗಿದ್ದಾರು .
ಸಂಜೆ ಸುಮಾರು 6.30 ರ ವೇಳೆ ಪವಿತ್ರ ಅವರು ಮನೆಯ ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮನೆಯ ಮಾಡಿಗೆ ಕಲ್ಲು ಹೊಡೆದ ಶಬ್ದ ವಾಯಿತು, ಅ ಬಳಿಕ ಮನೆಯ ಕಿಟಕಿ ಬಾಗಿಲಿನ ಗಾಜು ಗೆ ಕಲ್ಲು ಎಸೆಯಲಾಗಿತ್ತು .
ಸ್ನಾನ ಮಾಡಿ ಹೊರ ಬಂದು ನೋಡಿದಾಗ ಯಾರು ಕಾಣಲಿಲ್ಲ, ಯಾರು ಎಂದು ಅಂತ ವಾಪಾಸು ಬರುವ ವೇಳೆ ಇಬ್ಬರು ಮುಸುಕುದಾರಿ ಅಪರಿಚಿತ ವ್ಯಕ್ತಿಗಳು ಏಕಾಏಕಿ ಪವಿತ್ರ ಅವರನ್ನು ಎಳೆದುಕೊಂಡು ಹೋಗಿ ಮನೆಯ ಆಂಗಳದಲ್ಲಿದ್ದ ಅಡಿಕೆ ಮರದ ಕಂಬಕ್ಕೆ ನೈಲಾನ್ ಹಗ್ಗದಿಂದ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಅ ಬಳಿಕ ಕುತ್ತಿಗೆಯಲ್ಲಿದ್ದ ಕರಿಮಣಿಸರ ಕಾಣೆಯಾಗಿದೆ.
ಮನೆಯೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಟೇಬಲ್ ಮೇಲೆ ಇದ್ದ ನಗದು 4 ಸಾವಿರ ಹಾಗೂ ಅಂಗಳದಲ್ಲಿದ್ದ ಅಡಿಕೆಗೋಣಿಯನ್ನು ಕೊಂಡುಹೋಗಿದ್ದಾರೆ, ಮತ್ತು ಕಪಾಟು ಒಳಗೆ ಜಾಲಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪವಿತ್ರ ಅವರನ್ನು ಕಟ್ಟಿ ಹಾಕಿದ ಬಗ್ಗೆ ಯಾರು ಕೂಡ ಗಮನಿಸಿ ಲ್ಲ, ಸುಮಾರು 7 ಅಂದಾಜಿಗೆ ಮನೆಯ ಸಮೀಪದ ಮನೆಯವರು ನೋಡಿ ಕಟ್ಟಿ ಹಾಕಿದನ್ನು ಬಿಚ್ಚಿದ ಬಳಿಕ ಘಟನೆಯ ಬಗ್ಗೆ ತಿಳಿದಿದೆ. ಬಿಜೆಪಿ ಮುಖಂಡ ಗಣೇಶ್ ರೈ ಮಾಣಿ ಅವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್. ಐ.ಹರೀಶ್ ಬೇಟಿ ನೀಡಿದ್ದಾರೆ.ಇಂದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸುವ ಬಗ್ಗೆ ಎಸ್.ಐ.ಹರೀಶ್ ಮಾಹಿತಿ ನೀಡಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist