ಬಂಟ್ವಾಳ: ಪುಂಜಾಲಕಟ್ಟೆ ಬಳಿ ಲಾರಿ ಪಲ್ಟಿ; ಓರ್ವ ಸಾವು, ಮೂವರು ಗಂಭೀರ.!
ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ಇಂದು ಲಾರಿಯೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಇನ್ನು ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಮಾಹಿತಿ ಲಭ್ಯವಾಗಿದೆ.
ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂಬಾತ ಮೃತಪಟ್ಟ ವ್ಯಕ್ತಿಯಾಗಿದ್ದು. ಇತರೆ ಗಾಯಗೊಂಡವರ ಹೆಸರು ಮಾಹಿತಿ ಲಭ್ಯವಾಗಿಲ್ಲ.ವಗ್ಗ ಸಮೀಪದ ಮದ್ವ ಎಂಬಲ್ಲಿನ ಸಾಮಿಯಾನ ಅಂಗಡಿಗೆ ಸೇರಿದ ಲಾರಿ ಇದಾಗಿದ್ದು, ಐಶರ್ ಲಾರಿಯಲ್ಲಿ ಸಾಮಿಯಾನದ ಸಾಮಾಗ್ರಿಗಳನ್ನು ಬೆಳ್ತಂಗಡಿ ಕಡೆಗೆ ಕೊಂಡುಹೋಗುತ್ತಿದ್ದ ವೇಳೆ ಪುಂಜಾಲಕಟ್ಟೆ ಮಂದಿರದ ಬಳಿ ತಿರುವಿನಲ್ಲಿ ಲಾರಿ ಪಲ್ಟಿಯಾಗಿದೆ.
ಲಾರಿಯೊಳಗೆ ಒಟ್ಟು ಹತ್ತು ಮಂದಿ ಇದ್ದರು ಎನ್ನಲಾಗಿದ್ದು ಸರಿಯಾದ ಮಾಹಿತಿ ಲಭ್ಯವಾಗಿಲ್ಲ.ಗಾಯಗೊಂಡವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಪಲ್ಟಿಯಾಗಿ ಸುಮಾರು ಸಮಯ ಲಾರಿ ಅಡಿಯಲ್ಲಿ ಸಿಲುಕಿಕೊಂಡಿದ್ದ ಯುವಕರನ್ನು ಸ್ಥಳೀಯ ಯುವಕರು ಹರಸಾಹಸ ಪಟ್ಟು ಹೊರಗೆ ತೆಗೆದಿದ್ದಾರೆ.ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಪುಂಜಾಲಕಟ್ಟೆ ಪೋಲೀಸರು ಸ್ಥಳದಲ್ಲಿದ್ದಾರೆ.
ವಿಟ್ಲ: ಮನೆಗೆ ಸಿಡಿಲು ಬಡಿದ ವಿದ್ಯುತ್ ಉಪಕರಣಗಳು ಭಸ್ಮ.!
ವಿಟ್ಲ: ಸಿಡಿಲು ಬಡಿದು ಮನೆಗೆ ಹಾನಿಯುಂಟಾದ ಘಟನೆ ವಿಟ್ಲ ಸಮೀಪದ ಕೇಪು ಗ್ರಾಮದ ಚೆಲ್ಲಡ್ಕ ದಲ್ಲಿ ನಡೆದಿದೆ. ಚೆಲ್ಲಡ್ಕ ಶಶಿಶೇಖರ ಭಂಡಾರಿ ಎಂಬವರ ಮನೆಗೆ ಜು.18ರ ಗುರುವಾರ ರಾತ್ರಿ ಸಿಡಿಲು ಬಡಿದು ಮನೆಯೊಳಗಿದ್ದ ಫ್ರಿಡ್ಜ್, ಗ್ರೈಂಡರ್ ಹಾಗೂ ಇತರ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೆಂಕಿ ಹೊತ್ತಿ ಸುಟ್ಟು ಹೋಗಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿ ಮನೆಯ ಒಂದು ಬದಿಗೆ ಬೆಂಕಿ ತಗುಲಿ ಉರಿದಿದ್ದು, ಸ್ಥಳೀಯ ಯುವಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಮನೆಯೊಳಗಿದ್ದ ಶಶಿಶೇಖರ ಭಂಡಾರಿ, ಪತ್ನಿ, ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪಿಡಿಓ ಗೋಕುಲದಾಸ್ ಭಕ್ತ, ಪಂಚಾಯತ್ ಅಧ್ಯಕ್ಷ ರಾಘವ ಸಾರಡ್ಕ, ವಿಎ, ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ ಮೈರ, ಪುರುಷೋತ್ತಮ ಕಲ್ಲಂಗಳ, ಬಿಜೆಪಿ ಮುಖಂಡರಾದ ರಾಜೀವ ಭಂಡಾರಿ ಕುಂಡಕೋಳಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ವಿಎ ಆಫೀಸ್ ನ ಗಣೇಶ್ ಪ್ರಭು, ಗ್ರಾಮ ಪಂಚಾಯತ್ ಸಹಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪ್ಪಿನಂಗಡಿ :ಐರಾವತ ಬಸ್‌ನಲ್ಲಿ ಬೆಂಕಿ: ಪ್ರಯಾಣಿಕರ ರಕ್ಷಣೆ
ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ಸಿನಲ್ಲಿ ಬೆಂಕಿ ಕಾಣಸಿಕೊಂಡಿದ್ದು, ಪ್ರಯಾಣಿಕರನ್ನು ರಕ್ಷಿಸಿ ಬೇರೊಂದು ಬಸ್ಸಿನಲ್ಲಿ ಕಳುಹಿಸಿಕೊಟ್ಟ ಘಟನೆ ಜು.18ರಂದು ಇಲ್ಲಿನ ಹಳೆಗೇಟು ಬಳಿ ನಡೆದಿದೆ. ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಿಯಂತ್ರಿಸಲಾಯಿತು.
ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ಬಸ್ಸಿನ ಹಿಂಬದಿಯಲ್ಲಿದ್ದ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿ ಬೆಂಕಿ ಕಾಣಿಸಿ ಕೊಂಡಿತ್ತು.
ಹೊಗೆ ಬರುವುದನ್ನು ಕಂಡ ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿದರು.ಬಳಿಕ ಬಸ್ ಚಾಲಕ, ನಿರ್ವಾಹಕ ಹಾಗೂ ಸ್ಥಳೀಯರು ಸೇರಿ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ನೀರನ್ನು ಬಳಸಿ ಬೆಂಕಿಯನ್ನು ನಿಯಂತ್ರಿಸಿದರು.
ಮಂಗಳೂರು :ಕುಂಟಿಕಾನ ಜಂಕ್ಷನ್ ಬಳಿ ಉರುಳಿ ಬಿದ್ದ ಕಾರು,ಇಬ್ಬರಿಗೆ ಗಾಯ
ಮಂಗಳೂರು : ಮಂಗಳೂರು ನಗರದ ಕುಂಟಿಕಾನ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಾರಿ ಮಳೆಯ ಕಾರಣ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.