ಫ್ಯಾಷನ್ ಡಿಸೈನಿಂಗ್ ಕೆಲಸ ಬಿಟ್ಟು ಸ್ಟ್ರೀಟ್‌ಫುಡ್ ಅಂಗಡಿ ತೆರೆದ ಯುವತಿ
ಕೋಲ್ಕತ್ತಾ ನಗರದಲ್ಲಿ ಒಬ್ಬಾಕೆ ತಾನು ಕಲಿತ ಫ್ಯಾಶನ್ ಡಿಸೈನಿಂಗ್ ವೃತ್ತಿ ಬಿಟ್ಟು ಗಲ್ಲಿಯೊಂದರಲ್ಲಿ ಸ್ಟ್ರೀಟ್‌ಫುಡ್ ಅಂಗಡಿಯೊಂದನ್ನು ತೆರೆದಿದ್ದಾಳೆ. ಈಕೆಯ ಅಂಗಡಿಯಲ್ಲಿ ಪ್ರಸಿದ್ಧ ʻಬೆಂಗಾಲಿ ಥಾಲಿʼಗೆ ಬಲು ಬೇಡಿಕೆ. ಈಕೆ ಇದೀಗ ಕೋಲ್ಕತ್ತಾ ನಗರದಲ್ಲಿ ಫೇಮಸ್ ಆಗಿದ್ದಾಳೆ. ಇದೀಗ ಈಕೆಯ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.ಫ್ಯಾಷನ್ ಡಿಸೈನರ್ ಆಗಿದ್ದ ಕೋಲ್ಕತ್ತಾ ಮೂಲದ ನಂದಿನಿ ಗಂಗೂಲಿ ಎಂಬ ಯುವತಿಯೊಬ್ಬಳ ಸ್ಟ್ರೀಟ್ ಫುಡ್ ಅಂಗಡಿ ಇತ್ತೀಚೆಗೆ ಹೆಡ್‌ಲೈನ್ ಆಗಿತ್ತು.! ಈ ಬೆನ್ನಲ್ಲೇ ಈಕೆಯ ವೀಡಿಯೋಗಳೂ ಈಗ ವೈರಲ್ ಆಗಿದೆ.ಫ್ಯಾಷನ್ ಡಿಸೈನರ್ ಆಗಿದ್ದ ಕೋಲ್ಕತ್ತಾ ಮೂಲದ ನಂದಿನಿ ಗಂಗೂಲಿ ಎಂಬ ಯುವತಿಯೊಬ್ಬಳ ಸ್ಟ್ರೀಟ್ ಫುಡ್ ಅಂಗಡಿ ಇತ್ತೀಚೆಗೆ ಹೆಡ್‌ಲೈನ್ ಆಗಿತ್ತು.! ಈ ಬೆನ್ನಲ್ಲೇ ಈಕೆಯ ವೀಡಿಯೋಗಳೂ ಈಗ ವೈರಲ್ ಆಗಿದೆ.
ನಂದಿನಿಯ ತಂದೆ ರಬ್ಬರ್ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೊರೋನಾ ಕಾಲದಲ್ಲಿ ನಂದಿನಿಯ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ಆಗ ತನ್ನ ವೃತ್ತಿ ಬಿಟ್ಟು ಸ್ಟ್ರೀಟ್ ಫುಡ್ ಅಂಗಡಿಯೊಂದನ್ನು ಪ್ರಾರಂಭಿಸಿದ ನಂದಿನಿಯ ಅಂಗಡಿಯ ಮುಂದೆ ʻಬೆಂಗಾಲಿ ಥಾಲಿʼ ತಿನ್ನಲು ಇಂದು ಜನ ಕ್ಯೂ ನಿಲ್ಲುತ್ತಿದ್ದಾರೆ.ಅವರು ತಯಾರಿಸುವ ಆಹಾರಕ್ಕೂ, ಅವರು ತನ್ನ ಗ್ರಾಹಕರನ್ನು ಉಪಚರಿಸುವ ರೀತಿಗೂ ಜನ ಫಿದಾ ಆಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ವೀಡಿಯೋವೊಂದು ಕೆಲವೇ ಗಂಟೆಗಳಲ್ಲಿ ಸುಮಾರು 8 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಇವರ ಈ ಶ್ರಮಕ್ಕೆ ನೆಟ್ಟಿಗರು ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ.