ಗುರುವಾರ, ಮಾರ್ಚ್ 28, 2024
ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!-ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ; ಚುನಾವಣೆಯ ರಣಕಹಳೆ ಶುರು.!-ಉಡುಪಿ: ನೇಜಾರಿನ ನಾಲ್ವರ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ.!-ಜಿಲ್ಲೆಯಲ್ಲಿ ಸದ್ಯಕ್ಕೆ ರೇಶನಿಂಗ್ ಇಲ್ಲ; ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ-ಓವೈಸಿ ವಿರುದ್ದ ಸಾನಿಯಾ ಮಿರ್ಜಾಗೆ ಟಿಕೆಟ್? ಏನಿದು ಕಾಂಗ್ರೆಸ್ ಪ್ಲ್ಯಾನ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

'ಫೇಸ್ ಬುಕ್ ಪೋಸ್ಟ್' - ಸೌದಿ ಜೈಲಿನಿಂದ ಬಿಡುಗಡೆಯಾದ ಹರೀಶ್ ಬಂಗೇರಾ ಶೀಘ್ರ ತವರಿಗೆ.

Twitter
Facebook
LinkedIn
WhatsApp
‘ಫೇಸ್ ಬುಕ್ ಪೋಸ್ಟ್’ – ಸೌದಿ ಜೈಲಿನಿಂದ ಬಿಡುಗಡೆಯಾದ ಹರೀಶ್ ಬಂಗೇರಾ  ಶೀಘ್ರ ತವರಿಗೆ.

ಉಡುಪಿ:ತನ್ನದಲ್ಲದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿರುವ ಜೈಲಿನಲ್ಲಿ ಕೋಟೇಶ್ವರ ಬೀಜಾಡಿ ಗ್ರಾಮದ ನಿವಾಸಿ ಹರೀಶ್‌ ಬಂಗೇರ ಎಸ್‌. ಅವರು ಜೈಲಿನಿಂದ ಬಿಡುಗಡೆಯಾಗಿ ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ.

ಈ ಬಗ್ಗೆ ಮಂಗಳೂರು ಅಷೋಷಿಯೇಷನ್ ಸೌದಿ ಅರೇಬಿಯಾ(MASA) ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಮಾಹಿತಿ ನೀಡಿ ಶೀಘ್ರದಲ್ಲೇ ತಯ್ನಾಡಿಗೆ ಮರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ವಿಮಾನ ಪ್ರಯಾಣದ ವೆಚ್ಚವನ್ನು ಕೂಡಾ ಮಂಗಳೂರು ಅಷೋಷಿಯೇಷನ್ ನ ಪರವಾಗಿ ಜೈಲು ಅಧಿಕಾರಿಗಳಿಗೆ ನೀಡಲಾಗಿದೆ. ಇವರ ಬಿಡುಗಡೆಯ ಎಲ್ಲಾ ದಾಖಲೆ ಪತ್ರ ಪೂರ್ಣವಾಗಿದ್ದು ಅವರು ಭಾರತ ಪ್ರಯಾಣದ ಸಿದ್ದತೆಯ ಕೊನೆಯ ಹಂತದಲ್ಲಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕಾಗಿ ಸಹಕರಿಸಿದ, ಭಾರತ ರಾಯಭಾರಿ ಕಚೇರಿ (Indian embassy), IOF ( Indian overseas forum ) ಸಂಸ್ಥೆ , ಮನಿಕಂಠನ್, ಮಹಮ್ಮದ್ ಶರೀಫ್ ದಮ್ಮಾಮ್ ,ಪ್ರಸನ್ನ ಭಟ್ ರಿಯಾದ್ , ಪ್ರಕಾಶ್ ಪೂಜಾರಿ ರಿಯಾದ್ , ಕಮಾಲಾಕ್ಷ ಅಡ್ಯಾರ್ ಅಲ್ , ಕೋಬರ್ ,ಜೋಯಿಸನ್ ಅಲ್ ಅಸಾ, ಹಾಗೂ ಅವರ ಬಿಡುಗಡೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಬಂದು ಮಿತ್ರರಿಗೂ ಧನ್ಯವಾದಗಳನ್ನು ತಿಳಿಸಿದರು.

ಹರೀಶ್‌ ಬಂಗೇರ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿದ್ದ ಮೂಡುಬಿದಿರೆಯ ಸಹೋದರರು, ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು. ಇದರಿಂದ ಹರೀಶ್ ಬಂಗೇರಾ ತನ್ನದಲ್ಲ ತಪ್ಪಿಗೆ ಸೌದಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದರು.

‘ಫೇಸ್ ಬುಕ್ ಪೋಸ್ಟ್’ – ಸೌದಿ ಜೈಲಿನಿಂದ ಬಿಡುಗಡೆಯಾದ ಹರೀಶ್ ಬಂಗೇರಾ  ಶೀಘ್ರ ತವರಿಗೆ.

ಘಟನೆಯ ವಿವರ:

ಪೌರತ್ವ ಮಸೂದೆ ವಿರೋಧಿಸಿ 2019 ರ ಡಿಸೆಂಬರ್ ನಲ್ಲಿ ಮಂಗಳೂರಿನಲ್ಲಿ ನಡೆದ ವೀಡಿಯೋವೊಂದನ್ನು ಹರೀಶ್‌ ಬಂಗೇರ ಎಸ್‌. ಎನ್ನುವ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದರು. ಕೂಡಲೇ ಅಲ್ಲಿನ ಯುವಕರು ಹರೀಶ್‌ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಘಟನೆಯ ಬಗ್ಗೆ ಹರೀಶ್‌ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್‌ ಲೋಡ್‌ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಕೂಡ ಆಗಿತ್ತು. 2019 ರ ಡಿ.19 ರಾತ್ರಿ ತನ್ನ ಫೇಸ್‌ ಬುಕ್‌ ಖಾತೆಯನ್ನು ಡಿ-ಆಕ್ಟಿವೇಟ್‌ ಮಾಡಿದ್ದರು. ಈ ಎಲ್ಲ ವಿಚಾರಗಳನ್ನು ಹರೀಶ್‌ ಬಂಗೇರ ಅವರು ತಮ್ಮ ಪತ್ನಿಯಲ್ಲಿ ಹಂಚಿಕೊಂಡಿದ್ದರು.

ಆದರೆ ೨೦೧೯ ಡಿ. 20ರಂದು ಮತ್ತೆ ಯಾರೋ ಕಿಡಿಗೇಡಿಗಳು ಹರೀಶ್‌ ಬಂಗೇರ ಎನ್ನುವ ನಕಲಿ ಫೇಸ್‌ ಬುಕ್‌ ಖಾತೆಯಿಂದ ಮೆಕ್ಕಾ ಕುರಿತು, ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿ ಅಪ್‌ಲೋಡ್‌ ಮಾಡಿದ್ದರು. ಇದು ನಿಂದನಾತ್ಮಕ ಹಾಗೂ ವಿವಾದಾತ್ಮಕವಾಗಿದ್ದು, ಸೌದಿಯಾದ್ಯಂತ ಭಾರಿ ವೈರಲ್‌ ಆಗಿತ್ತು. ಈ ಬಗ್ಗೆ ಹರೀಶ್ ದುಬೈನಲ್ಲಿ ಕೆಲಸ ಮಾಡುತ್ತಿದ್ದ ದಮಾಮ್‌ನ ಆಲ್‌ಹಸಾ ಗಲ್ಫ್ ಕಾರ್ಟೂನ್‌ ಕಂಪೆನಿ ಅವರನ್ನು ಪೊಲೀಸ್‌ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆ ಬಳಿಕ ಅವರನ್ನು ಸೌದಿ ಪೊಲೀಸರು ವಶಕ್ಕೆ ಪಡೆದಿದ್ದರು.

ಇನ್ನು ಇತ್ತ ಪತಿ ಬಂಧನದಿಂದ ಕಂಗೆಟ್ಟ ಹರೀಶ್‌ ಬಂಗೇರ ಎಸ್‌. ಅವರ ಪತ್ನಿ , ” ಫೇಕ್‌ ಅಕೌಂಟ್‌ ಮೂಲಕ ಅವಹೇಳನಕಾರಿ ಪೋಸ್ಟ್‌ ಮಾಡಲಾಗಿರುವ ವಿಚಾರದ ಕುರಿತು ಉಡುಪಿ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು . ಅಲ್ಲದೆ ದೂರಿನ ವರದಿಯನ್ನು ಸೌದಿ ಪೊಲೀಸರಿಗೆ ಉಡುಪಿ ಪೊಲೀಸರು ರವಾನಿಸಿದ್ದರು.

ಮಂಗಳೂರು: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳ ಮೇಲೆ ಠಾಣೆಯಲ್ಲೇ ಹಲ್ಲೆ-ಯುವತಿ ಸೇರಿ ಮೂವರು ವಶಕ್ಕೆ

ನಕಲಿ ಖಾತೆ ಸೃಷ್ಟಿಸಿದ್ದ ಮೂಡುಬಿದಿರೆ ಮೂಲದ ಕಿಡಿಗೇಡಿಗಳು:

ನಕಲಿ ಖಾತೆ ಕ್ರಿಯೇಟ್ ಆಗಿರುವ ಬಗ್ಗೆ ಉಡುಪಿ ಸೆನ್ ಪೊಲೀಸರು ತನಿಖೆ ನಡೆಸಿದಾಗ ಮೂಡುಬಿದಿರೆಯ ಸಹೋದರರಾದ ಅಬ್ದುಲ್ ಹುಯೇಸ್ ಹಾಗೂ ಅಬ್ದುಲ್ ತುವೇಸ್ ಈ ಕೃತ್ಯದ ಹಿಂದಿರುವುದು ಬೆಳಕಿಗೆ ಬಂದಿತ್ತು. ೨೦೨೦ ರ ಜೂನ್ ತಿಂಗಳಲ್ಲಿ ಸಹೋದರರಿಬ್ಬರನ್ನು ಬಂಧಿಸಿ ಅಕ್ಟೋಬರ್ ನಲ್ಲಿ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಈ ಎಲ್ಲಾ ಘಟನೆ ನಡೆದು ಸುಮಾರು ಒಂದೂವರೆ ವರ್ಷದ ಬಳಿಕ ಹರೀಶ್ ಬಂಗೇರಾ ಸೌದಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!

ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!

ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..! Twitter Facebook LinkedIn WhatsApp ಮಂಗಳೂರು : ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಇಂದು(ಗುರುವಾರ) ಬೆಳಿಗ್ಗೆ ಭಾರಿ ಅಗ್ನಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು