ಫೆ.23 ರಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ವಿಚಾರ ಸಂಕಿರಣ ಮತ್ತು ಅರಿವು ಯಾನ ಮಾಲಿಕೆಯ ಕೃತಿ ಬಿಡುಗಡೆ
ಬಂಟ್ವಾಳ:ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30 ರ ನೆನಪು ವಿಚಾರ ಸಂಕಿರಣ ಮತ್ತು ಅರಿವು ಯಾನ ಮಾಲಿಕೆಯ ಕೃತಿ ಬಿಡುಗಡೆ ಫೆ.23 ರಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ್ ಪೂಜಾರಿ ತಿಳಿಸಿದ್ದಾರೆ.
ಡಾ. ಹೇಮಾವತಿ ವಿ. ಹೆಗ್ಗಡೆ ಅವರು ವಿಚಾರ ಸಂಕಿರಣದ ಉದ್ಘಾಟನೆ ಮತ್ತು ಕೃತಿಗಳ ಬಿಡುಗಡೆಗೊಳಿಸುವರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದು,
ಡಾ.ಪಿ.ಎನ್. ನರಸಿಂಹಮೂರ್ತಿ
ಪ್ರೊ. ಕೆ. ಶಂಕರ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಳಿಕ ಗೋಷ್ಠಿಗಳು ನಡೆಯಲಿದ್ದು,
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ ನೂರರ ನೆನಪು ಎಂಬ ವಿಷಯದ ಬಗ್ಗೆ ಉಡುಪಿ ಎಂಜಿಎಂ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ. ಮಾಲತಿ ಮೂರ್ತಿ ಹಾಗೂ ಆಳುಪರು ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ ಎಂಬ ವಿಷಯದ ಬಗ್ಗೆ ಇತಿಹಾಸ ಸಂಶೋಧಕರಾದ ಡಾ. ಪಿ.ಎನ್. ನರಸಿಂಹ ಮೂರ್ತಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡನೆ ಗೋಷ್ಠಿಯಲ್ಲಿ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ. ಪುಂಡಿಕ್ಕಾ ಗಣಪಯ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ “ಸ್ಮಾರಕ ಸಂರಕ್ಷಣೆ: ಸವಾಲುಗಳು ಮತ್ತು ಸಾಧ್ಯತೆಗಳು” ವಿಷಯದ ಬಗ್ಗೆ ತಜ್ಞ ಸಂವಾದ ನಡೆಯಲಿದೆ.ಇತಿಹಾಸ ಸಂಶೋಧಕರಾದ
ಡಾ. ಪಿ.ಎನ್. ನರಸಿಂಹ ಮೂರ್ತಿ ಸರ್ವಾಧ್ಯಕ್ಷತೆ ವಹಿಸುವರು.ವಿದ್ವಾಂಸರುಗಳಾದ ಎಂ. ಕುಲದೀಪ ಚೌಟ , ನಿರೇನ್ ಜೈನ್ ,ಡಾ. ಗಣಪತಿ ಗೌಡ ಅವರು ಭಾಗವಹಿಸಲಿದ್ದಾರೆ ಎಂದು ಪ್ರೊ.ತುಕರಾಮ್ ಪೂಜಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.