ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಫುಡ್‌ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಪೂರೈಕೆ; ಮಿಜೋರಾಂ ಮೂಲದ ವ್ಯಕ್ತಿ ಬಂಧನ

Twitter
Facebook
LinkedIn
WhatsApp
ಫುಡ್‌ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಪೂರೈಕೆ; ಮಿಜೋರಾಂ ಮೂಲದ ವ್ಯಕ್ತಿ ಬಂಧನ

ಬೆಂಗಳೂರು: ಫುಡ್‌ ಡೆಲಿವರಿ ಹುಡುಗರ ಸೋಗಿನಲ್ಲಿ ಗ್ರಾಹಕರಿಗೆ ಗಾಂಜಾ ಪೂರೈಸುತ್ತಿದ್ದ ಚಾಲಾಕಿ ಪೆಡ್ಲರ್‌ವೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್‌ಎಎಲ್‌ ನಿವಾಸಿ ಡೇವಿಡ್‌ ಬಂಧಿತನಾಗಿದ್ದು, ಆರೋಪಿಯಿಂದ .3 ಲಕ್ಷ ಮೌಲ್ಯದ 4 ಕೇಜಿ ಗಾಂಜಾ, ಮೊಬೈಲ್‌ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. ಬೆಳ್ಳಂದೂರು ಸಮೀಪ ಗಾಂಜಾ ಮಾರಾಟಕ್ಕೆ ವ್ಯಕ್ತಿಯೊಬ್ಬ ಯತ್ನಿಸಿರುವ ಬಗ್ಗೆ ಲಭ್ಯವಾದ ಮಾಹಿತಿ ಮೇರೆಗೆ ಸಿಸಿಬಿ ಕಾರ್ಯಾಚರಣೆ ನಡೆಸಿದೆ.

ಮಿಜಾರಂ ಮೂಲದ ಡೇವಿಡ್‌, ಐದು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಆರಂಭದಲ್ಲಿ ರಸ್ತೆ ಬದಿ ಹೋಟೆಲ್‌ ಆರಂಭಿಸಿದ್ದ. ನಂತರ ಸುಲಭವಾಗಿ ಹಣ ಸಂಪಾದನೆಗೆ ಗಾಂಜಾ ದಂಧೆಗಳಿದ ಆತ, ಈಶಾನ್ಯ ರಾಜ್ಯದ ಪೆಡ್ಲರ್‌ ಮೂಲಕ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡಿದ್ದ. ಆಗ ಆತನನ್ನು ಹೆಣ್ಣೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾಗ ಡೇವಿಡ್‌ಗೆ ಕೇರಳ ಮೂಲದ ಪೆಡ್ಲರ್‌ ಪರಿಚಯವಾಗಿದೆ. ಕೊನೆಗೆ ಡೇವಿಡ್‌ಗೆ ಜಾಮೀನು ಕೊಡಿಸಲು ನೆರವಾದ ಆ ಪೆಡ್ಲರ್‌, ನಂತರ ಡೇವಿಡ್‌ ಮೂಲಕ ನಗರದಲ್ಲಿ ಗಾಂಜಾ ದಂಧೆ ಶುರು ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ.

ವಾಟ್ಸ್‌ ಆಪ್‌ ಮೂಲಕವೇ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಗಾಂಜಾ ದಂಧೆಕೋರ, ಗಾಂಜಾ ಬುಕ್‌ ಮಾಡಿದ ಗ್ರಾಹಕರನಿಗೆ ಪೂರೈಸಲು ಟೀ ಶರ್ಟನ್ನು ಗುರುತಾಗಿ ಬಳಸಿಕೊಳ್ಳುತ್ತಿದ್ದ. ಅಲ್ಲದೆ ಗಾಂಜಾ ಪೂರೈಸಲು ತೆರಳುವ ತಮ್ಮ ತಂಡದ ಪೆಡ್ಲರ್‌ನನ್ನು ಜಿಪಿಎಸ್‌ ಮೂಲಕ ದಂಧೆಕೋರರು ಟ್ರ್ಯಾಕ್‌ ಮಾಡುತ್ತಿದ್ದರು. ಬೆಳ್ಳಂದೂರು ಸಮೀಪ ಸಾಫ್‌್ಟವೇರ್‌ ಕಂಪನಿಯ ಉದ್ಯೋಗಿಗೆ ಡೇವಿಡ್‌ಗೆ ಗಾಂಜಾ ಪೂರೈಸಲು ಸೂಚಿಸಲಾಗಿತ್ತು.

ಆಗ ಮುಖ್ಯ ಪೆಡ್ಲರ್‌ಗೆ ಆ ಗ್ರಾಹಕ ತಾನು ಧರಿಸಿದ್ದ ಟೀ ಶರ್ಚ್‌ನ ಭಾವಚಿತ್ರವನ್ನು ವಾಟ್ಸ್‌ ಮೂಲಕ ಕಳುಹಿಸಿದ್ದ. ಈ ಫೋಟೋವನ್ನು ಡೇವಿಡ್‌ಗೆ ಕಳುಹಿಸಿ ಆ ಟೀ ಶರ್ಟ್ ಧರಿಸಿದ್ದ ಗ್ರಾಹಕನಿಗೆ ಗಾಂಜಾ ನೀಡುವಂತೆ ಹೇಳಲಾಗಿತ್ತು. ಹೀಗಾಗಿ ಗ್ರಾಹಕ ಮತ್ತು ಡೇವಿಡ್‌ ನಡುವೆ ಯಾವುದೇ ಸಂಪರ್ಕವಿರಲಿಲ್ಲ. ಇನ್ನು ತಮ್ಮ ತಂಡದ ಸದಸ್ಯ ಏನಾದರೂ 5 ನಿಮಿಷ ಸಂಪರ್ಕ ಕಡಿತಗೊಂಡರೆ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಭಾವಿಸಿ ದಂಧೆಕೋರರು ಪರಾರಿಯಾಗುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌
ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ