ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಫಸ್ಟ್‌ ಟೈಂ ನೇರ ಮುಖಾಮುಖಿ – ಅಮೆರಿಕ ಡ್ರೋನ್‍ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ

Twitter
Facebook
LinkedIn
WhatsApp
IMG 20230224 WA0000
 

ವಾಷಿಂಗ್ಟನ್‌/ ಮಾಸ್ಕೋ: ಉಕ್ರೇನ್‌ (Ukraine) ವಿರುದ್ಧ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಅಮೆರಿಕ (USA) ಮತ್ತು ರಷ್ಯಾ (Russia) ಮುಖಾಮುಖಿಯಾಗಿದೆ. ರಷ್ಯಾದ Su-27 ಜೆಟ್ ಫೈಟರ್ ಕಪ್ಪು ಸಮುದ್ರದ ಮೇಲೆ ಅಮೆರಿಕದ MQ-9 ರೀಪರ್ (MQ-9 Reaper) ಡ್ರೋನ್‍ಗೆ ಡಿಕ್ಕಿ ಹೊಡೆದಿದೆ ಎಂದು ಯುಎಸ್ ಮಿಲಿಟರಿಯ ಯುರೋಪಿಯನ್ ಕಮಾಂಡ್ ತಿಳಿಸಿದೆ.

ನಮ್ಮ MQ-9 ಡ್ರೋನ್‌ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿತ್ತು. ಅದನ್ನು ರಷ್ಯಾದ ಜೆಟ್ ತಡೆಹಿಡಿದು ಹೊಡೆದುರುಳಿಸಿದೆ. ಇದರ ಪರಿಣಾಮವಾಗಿ ಡ್ರೋನ್‌ ಪತನಗೊಂಡಿದೆ ಎಂದು ಅಮೆರಿಕ ಹೇಳಿದೆ.

ಬ್ರಸೆಲ್ಸ್‌ನಲ್ಲಿರುವ ನ್ಯಾಟೋ ರಾಜತಾಂತ್ರಿಕರು ಘಟನೆಯನ್ನು ದೃಢಪಡಿಸಿದ್ದಾರೆ. ಕಣ್ಗಾವಲು ಮಾಡಲು ಅಮೆರಿಕ MQ-9 ಬಳಸುತ್ತಿದೆ. ರಷ್ಯಾದ ನೌಕಾ ಪಡೆಗಳ ಮೇಲೆ ಕಣ್ಣಿಟ್ಟು ಕಪ್ಪು ಸಮುದ್ರದ ಮೇಲೆ ದೀರ್ಘಕಾಲ ಕಾರ್ಯನಿರ್ವಹಿಸುತ್ತಿತ್ತು. 

ಅಮೆರಿಕದ ಆರೋಪವನ್ನು ರಷ್ಯಾ ತಿರಸ್ಕರಿಸಿದೆ. MQ-9 ಡ್ರೋನ್‌ ರಷ್ಯಾದ ಗಡಿಯ ಬಳಿ ಹಾರಾಟ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ನಾವು ಎಚ್ಚರಿಕೆ ನೀಡಿದೆವು. ಈ ವೇಳೆ ಡ್ರೋನ್‌ ಎತ್ತರದಲ್ಲಿ ಸಂಚರಿಸುತ್ತಿದ್ದ ಕಾರಣ ನಿಯಂತ್ರಣ ಮಾಡಲು ಸಾಧ್ಯವಾಗದೇ ಪತನಗೊಂಡು ನೀರಿನ ಮೇಲೆ ಬಿದ್ದಿದೆ ಎಂದು ತಿಳಿಸಿದೆ.

ಏನಿದು MQ-9 ರೀಪರ್?
MQ-9 ರೀಪರ್ ಒಂದು ದೊಡ್ಡ ಮಾನವರಹಿತ ವಿಮಾನವಾಗಿದ್ದು ಇದನ್ನು ಇಬ್ಬರು ವ್ಯಕ್ತಿಗಳು ದೂರದಿಂದಲೇ ನಿರ್ವಹಿಸಬಹುದು. ಇದು ನೆಲದ ನಿಯಂತ್ರಣ ಕೇಂದ್ರ ಮತ್ತು ಉಪಗ್ರಹ ಉಪಕರಣಗಳನ್ನು ಒಳಗೊಂಡಿದೆ ಮತ್ತು 66-ಅಡಿ (20-ಮೀಟರ್) ರೆಕ್ಕೆಗಳನ್ನು ಹೊಂದಿದೆ.

ಇರಾಕ್ ಮತ್ತು ಅಫ್ಘಾನಿಸ್ತಾನದ ಯುದ್ಧಗಳ ಸಮಯದಲ್ಲಿ ಇದನ್ನು ಕಣ್ಗಾವಲು ಇಡಲು ಬಳಸಲಾಗಿತ್ತು. ಎಂಟು ಲೇಸರ್-ನಿರ್ದೇಶಿತ ಕ್ಷಿಪಣಿಗಳನ್ನು ಸಾಗಿಸಬಲ್ಲದು ಮತ್ತು ಸುಮಾರು 24 ಗಂಟೆಗಳ ಕಾಲ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

36 ಅಡಿ ಉದ್ದ, 12 ಅಡಿ ಎತ್ತರ ಮತ್ತು ಸುಮಾರು 4,900 ಪೌಂಡ್ (11 ಮೀಟರ್ ಉದ್ದ, 4 ಮೀಟರ್ ಎತ್ತರ ಮತ್ತು 2,200 ಕಿಲೋಗ್ರಾಂ) ತೂಗುತ್ತದೆ. ಇದು 50,000 ಅಡಿ (15 ಕಿಲೋಮೀಟರ್) ಎತ್ತರದಲ್ಲಿ ಹಾರಬಲ್ಲದು ಮತ್ತು ಸುಮಾರು 1,400 ನಾಟಿಕಲ್ ಮೈಲುಗಳ (2,500 ಕಿಲೋಮೀಟರ್) ವ್ಯಾಪ್ತಿಯನ್ನು ಹೊಂದಿದೆ.

2007 ರಲ್ಲಿ ಮೊದಲ ಬಾರಿಗೆ ರೀಪರ್‌ ಕಾರ್ಯನಿರ್ವಹಿಸಲು ಆರಂಭಿಸಿತು. ಪ್ರತಿ ರೀಪರ್ ಸುಮಾರು 32 ಮಿಲಿಯನ್ ಡಾಲರ್‌( ಅಂದಾಜು 263 ಕೋಟಿ ರೂ.) ವೆಚ್ಚವಾಗುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ