ಪ್ರೇಮಿಗಳ ದಿನ ವಿರೋಧಿಸಿ ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ
Twitter
Facebook
LinkedIn
WhatsApp
ಚೆನ್ನೈ: ಪ್ರೇಮಿಗಳ ದಿನಾಚರಣೆಯನ್ನು (Valentine’s Day) ವಿರೋಧಿಸಿ ಹಿಂದೂ ಸಂಘಟನೆಯೊಂದು ಬೀದಿ ನಾಯಿಗಳಿಗೆ (Dog) ಮದುವೆ (Marriage) ಮಾಡಿಸಿರುವ ಘಟನೆ ತಮಿಳುನಾಡಿನ (Tamil Nadu) ಶಿವಗಂಗಾದಲ್ಲಿ (Sivaganga) ನಡೆದಿದೆ.
ತಮಿಳುನಾಡಿನ ಹಿಂದೂ ಮುನ್ನಾನಿ ಸಂಘಟನೆ ಪ್ರೇಮಿಗಳ ದಿನವನ್ನು ವಿರೋಧಿಸಿದ್ದು, ಇದು ಭಾರತದ ಸಂಸ್ಕೃತಿಗೆ ವಿರೋಧವಾಗಿದೆ ಎಂದು ಹೇಳಿದೆ. ಈ ಹಿಂದೆಯೂ ಸಂಘಟನೆ ಪ್ರತಿ ವರ್ಷ ಪ್ರೇಮಿಗಳ ದಿನವನ್ನು ವಿರೋಧಿಸಿ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸಿದೆ.
ಸೋಮವಾರ ಹಿಂದೂ ಮುನ್ನಾನಿಯ ಕಾರ್ಯಕರ್ತರು 2 ಬೀದಿ ನಾಯಿಗಳನ್ನು ಕರೆತಂದು, ಅದಕ್ಕೆ ಬಟ್ಟೆ ಹೊದಿಸಿ, ಹಾರ ಹಾಕಿ, ಅಣುಕು ಮದುವೆ ಮಾಡಿಸಿದ್ದಾರೆ.
ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಇದನ್ನು ವಿರೋಧಿಸಿ ಬೀದಿ ನಾಯಿಗಳ ಮದುವೆಯನ್ನು ಮಾಡಲಾಗಿದೆ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ.