ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರಿಯಕರನ ಬ್ಲಾಕ್ಮೈಲ್ ಗೆ ಮನನೊಂದು ಯುವತಿ ಆತ್ಮಹತ್ಯೆ ; ಲೈವ್ ವಿಡಿಯೋ ಮಾಡಿ ನೇಣಿಗೆ ಶರಣು!

Twitter
Facebook
LinkedIn
WhatsApp
whatsapp account in one phone 1

ವಿಜಯಪುರ: ವಿವಾಹಿತೆ ಮಹಿಳೆಯೊಬ್ಬರು ನೇಣಿಗೆ ಶರಣಾಗುವ ಮುನ್ನ ಮೊಬೈಲ್ ವಿಡಿಯೋ ಆನ್ ಮಾಡಿ ಲೈವ್ ಸೊಸೈಡ್ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದೆ. ಸುಹಾನ್ ಸೋನಾರ್ (21) ಆತ್ಮಹತ್ಯೆಗೆ ಶರಣಾದ ವಿವಾಹಿತೆ ಮಹಿಳೆ. ಈಕೆ ನೇಣಿಗೆ ಶರಣಾಗುವ ಮುನ್ನ ಪ್ರಿಯಕರನ ಬ್ಲ್ಯಾಕ್ಮೇಲ್​ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಹೌದು ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಪ್ರಿಯಕರ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಮರ್ಯಾದೆಗೆ ಹೆದರಿ ಸುಹಾನಾ ಲೈವ್ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ ಏಪ್ರಿಲ್ 15ರಂದು ವಿವಾಹಿತೆ ಸುಹಾನಾ ಆತ್ಮಹತ್ಯೆಗೆ ಕಾರಣ ತಿಳಿಸಿ, ಮೊಬೈಲ್ ವಿಡಿಯೋ ಆನ್ ಮಾಡಿ ನೇಣಿಗೆ ಶರಣಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೆಮಾನ್ 1 ವರ್ಷದ ಹಿಂದೆ ಸುಹಾನಾ ಜೊತೆ ಸಲುಗೆ ಬೆಳೆಸಿ ಪ್ರೀತಿಸುತ್ತಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್​ಗೆ ತಾಕೀತು ಮಾಡಿದ್ದರು. ಬಳಿಕ ಸುಹಾನಾ ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಇತ್ತೀಚೆಗೆ ಮದುವೆ ಮಾಡಿ ಕೊಟ್ಟಿದ್ದರು.

ಮೂವರಿಂದ ಸುಹಾನಾಳಿಗೆ ಕಿರುಕುಳ

ಇನ್ನು ಗ್ರಾಮದ ಯುನೀಸ್ ಪಾರ್ಥನಳ್ಳಿ ಹಾಗೂ ದಸ್ತಗಿರಸಾಬ್ ಮುಳವಾಡ ಎಂಬುವವರ ಜೊತೆಗೆ ವಿವಾಹಿತೆ ತಂದೆ ಅಸ್ಲಂ ಮುಲ್ಲಾ ದ್ವೇಷ ಹೊಂದಿದ್ದ. ದಸ್ತಗಿರಸಾಬ್ ಮುಳವಾಡ ಮಗಳ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಕ್ಕೆ ಅಸ್ಲಂ ಮುಲ್ಲಾ ಕಾರಣವೆಂದು ಸಿಟ್ಟು ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಮೂವರು ಸೇರಿ ಸುಹಾನಾ ಬೆನ್ನು ಹತ್ತಿ ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಂಡನನ್ನು ಬಿಟ್ಟು ಬಾ, ಇಲ್ಲವಾದರೆ ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಸುಹಾನಾಳಿಗೆ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದ.

ಇದರಿಂದ ಬೆಸತ್ತಿದ್ದ ಸುಹಾನಾ, ಮೂವರ ಹೆಸರು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಳೆ. ಈ ಕುರಿತು ಸುಹಾನಾ ತಂದೆ ಅಸ್ಲಂ ಮುಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅಲ್ತಾಪ್ ಹಾಗೂ ಯುನೀಸ್​ನನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ