ಶುಕ್ರವಾರ, ಮಾರ್ಚ್ 14, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪ್ರಾಣಿಗಳ ರಕ್ಷಣೆಗೆ ಆ್ಯಂಬುಲೆನ್ಸ್‌ ಸೇವೆ ಶುರು ಮಾಡಿದ ಸಂಯುಕ್ತಾ ಹೊರನಾಡು

Twitter
Facebook
LinkedIn
WhatsApp
ಪ್ರಾಣಿಗಳ ರಕ್ಷಣೆಗೆ ಆ್ಯಂಬುಲೆನ್ಸ್‌ ಸೇವೆ ಶುರು ಮಾಡಿದ ಸಂಯುಕ್ತಾ ಹೊರನಾಡು

ಸಂಯುಕ್ತಾ ಹೊರನಾಡು ಪ್ರಾಣಿಗಳ ರಕ್ಷಣೆ, ಏಳಿಗೆಯ ಕನಸಿಟ್ಟುಕೊಂಡು ಪ್ರಾಣ ¶ೌಂಡೇಶನ್‌ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ಪ್ರಾಣಿಗಳ ರಕ್ಷಣೆಗೆ ಆ್ಯಂಬುಲೆನ್ಸ್‌ ಸೇವೆ ಶುರು ಮಾಡುತ್ತಿದ್ದಾರೆ. ಫೆ.14ರಂದು ಪ್ರಕಾಶ್‌ ರೈ ಈ ಆ್ಯಂಬುಲೆನ್ಸ್‌ ಸೇವೆ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ವಾರದ ಎಲ್ಲಾ ದಿನ 24 ಗಂಟೆ ಕೆಲಸ ಮಾಡುವ ಸಹಾಯವಾಣಿಯನ್ನೂ ಆರಂಭಿಸಲಿದ್ದಾರೆ.

No photo description available.

ನಟಿಯೊಬ್ಬರು ತನ್ನ ಸಮಯ ಮತ್ತು ತಾನು ದುಡಿದ ಹಣವನ್ನು ಪ್ರಾಣಿಗಳ ರಕ್ಷಣೆಗಾಗಿ ಬಳಸುತ್ತಿರುವ ಈ ವಿದ್ಯಮಾನ ಅಪರೂಪ ಮತ್ತು ಮಹತ್ವದ್ದು. ಅವರು ¶ೌಂಡೇಶನ್ನಿನ ಸುಮಾರು ಐದು ವರ್ಷಗಳ ಕಾರ್ಯಯೋಜನೆಯನ್ನು ಈಗಾಗಲೇ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಆ್ಯಂಬುಲೆನ್ಸ್‌ ಸೇವೆ ಮೂಲಕ ಅವರ ಕೆಲಸಗಳು ಆರಂಭವಾಗುತ್ತವೆ. ಸ್ನೇಹಿತರಾದ ಅನಿರುದ್ಧ, ಅದಿತಿ ನಾಗ್‌ ಅವರ ಜೊತೆ ನಿಂತಿದ್ದಾರೆ. ತಮ್ಮ ಕನಸಿನ ಕುರಿತು ಸಂಯುಕ್ತಾ ಹೊರನಾಡು ಮಾತುಗಳು ಇಲ್ಲಿವೆ-

– ಚಿಕ್ಕಂದಿನಿಂದಲೂ ನನಗೆ ಪ್ರಾಣಿಗಳು ಎಂದರೆ ಇಷ್ಟ. ನನಗೆ ಪಶು ವೈದ್ಯಳಾಗಬೇಕು ಎಂಬ ಆಸೆ ಇತ್ತು. ಆದರೆ ನಟಿಯಾದೆ. ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡುವಾಗ ನನ್ನ ಚಿಕ್ಕಂದಿನ ಆಸೆ ಮತ್ತೆ ಚಿಗುರಿತು. ಪ್ರಾಣಿಗಳ ಒಳಿತಿಗೆ ಕೆಲಸ ಮಾಡಬೇಕು ಎಂಬ ಹಂಬಲ ಗಟ್ಟಿಯಾಯಿತು. ಅದಕ್ಕಾಗಿಯೇ ಪ್ರಾಣ ¶ೌಂಡೇಶನ್‌ ಆರಂಭಿಸಿದ್ದೇನೆ.

No photo description available.

ನಾನು ಗಮನಿಸಿದ ಹಾಗೆ ದಕ್ಷಿಣ ಬೆಂಗಳೂರಿನಲ್ಲಿ ಯಾವುದೇ ಪ್ರಾಣಿಗಳಿಗೆ ತೊಂದರೆಯಾದರೆ, ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದರೆ ತಕ್ಷಣದ ಸೇವೆ ಸಿಗುವುದಿಲ್ಲ. ಉತ್ತರ ಭಾಗದಿಂದ ಆ್ಯಂಬುಲೆನ್ಸ್‌ ಬಂದು ಆ ಪ್ರಾಣಿಗಳನ್ನು ಕರೆದುಕೊಂಡು ಹೋಗುವ ಹೊತ್ತಿಗೆ ತಡವಾಗಿರುತ್ತದೆ. ಅದಕ್ಕಾಗಿಯೇ ಯಾವುದೇ ಹೊತ್ತಿನಲ್ಲಿ ಕರೆ ಮಾಡಿದರೂ ದೊರಕುವ ಆ್ಯಂಬುಲೆನ್ಸ್‌ ಸೇವೆ ಆರಂಭಿಸುತ್ತಿದ್ದೇವೆ. ಸದ್ಯ ಬೆಂಗಳೂರಿನಲ್ಲಿ ಆರಂಭಿಸಿ ಮುಂದಿನ ದಿನಗಳಲ್ಲಿ ಬೇರೆ ಕಡೆಗೂ ಈ ಸೌಲಭ್ಯ ಒದಗಿಸುವ ಕನಸಿದೆ.

May be an image of 1 person

– ಬಾಲ್ಯದಿಂದಲೂ ನನಗೆ ಸ್ನೇಹಿತರು ಕಡಿಮೆ. ಮರ ಗಿಡ ಪ್ರಾಣಿ ಪಕ್ಷಿಗಳೇ ಹೆಚ್ಚು ಇಷ್ಟ. ನನಗೆ ಹಾವು ಎಂದರೆ ಭಯವಾಗುವುದಿಲ್ಲ. ಮನುಷ್ಯರಿಗಿಂತ ಹೆಚ್ಚು ಪ್ರಾಣಿಗಳೇ ನಂಗಿಷ್ಟ. ಆ ಪ್ರಾಣಿಗಳಿಗೆ ಕಷ್ಟಬಂದರೆ ನೋಡುವುದು ಕಷ್ಟವಾಗುತ್ತದೆ. ಅವುಗಳಿಗೆ ಕಿಂಚಿತ್ತಾದರೂ ನೆರವು ನನ್ನಿಂದ ದೊರಕಲಿ.

No photo description available.

ಭಾರ್ಗವಿ ನಾರಾಯಣ್‌ ನೆನಪು

ಫೆ.14ಕ್ಕೆ ಭಾರ್ಗವಿ ನಾರಾಯಣ್‌ ತೀರಿಕೊಂಡು ಒಂದು ವರ್ಷ ಆಗಲಿದೆ. ಅವತ್ತೇ ತನ್ನ ಕನಸಿನ ಯೋಜನೆಯನ್ನು ಸಂಯುಕ್ತಾ ಆರಂಭಿಸುತ್ತಿದ್ದಾರೆ. ‘ನನಗೆ ಪ್ರಾಣಿಗಳು ಪ್ರೀತಿ. ಅಜ್ಜಿ ನನ್ನ ಇನ್ನೊಂದು ಪ್ರೀತಿ. ಅವರು ತೀರಿಕೊಂಡ ದಿನವೇ ಆ್ಯಂಬುಲೆನ್ಸ್‌ ಆರಂಭಿಸುತ್ತಿದ್ದೇವೆ. ಆ ಮೂಲಕ ನಾನು ಪ್ರೀತಿಯನ್ನು ಸಂಭ್ರಮಿಸುತ್ತಿದ್ದೇನೆ’ ಎನ್ನುತ್ತಾರೆ ಸಂಯುಕ್ತಾ.

No photo description available.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist