ರಾಜಿ ಸಂಧಾನದ ಬಳಿಕ ಪ್ರಹ್ಲಾದ್ ಜೋಶಿ ಸಹೋದರನ 2 ಕೋಟಿ ವಂಚನೆ ಪ್ರಕರಣ ವಾಪಸ್?

ರಾಜಿ ಸಂಧಾನದ ಬಳಿಕ ಪ್ರಹ್ಲಾದ್ ಜೋಶಿ ಸಹೋದರನ 2 ಕೋಟಿ ವಂಚನೆ ಪ್ರಕರಣ ವಾಪಸ್?
ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮಿ ಮತ್ತು ಗೋಪಾಲ್ ಅವರ ಪುತ್ರ ಅಜಯ್ ವಿರುದ್ಧ 2 ಕೋಟಿ ರೂಪಾಯಿ ವಂಚನೆ ದೂರು ದಾಖಲಿಸಿದ್ದ ಮಹಿಳೆ ಸುನೀತಾ ಚವ್ಹಾಣ್ (48) ಕೊನೆಗೂ ರಾಜಿ ಸಂಧಾನದ ಬಳಿಕ ತಾವು ದಾಖಲಿಸಿದ್ದ ಪ್ರಕರಣ ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ದೂರುದಾರರಾದ ಜೆಡಿಎಸ್ ಮಾಜಿ ಶಾಸಕ ದೇವಾನಂದ್ ಫುಲ್ಸಿಂಗ್ ಚವ್ಹಾಣ್ ಅವರ ಪತ್ನಿ ಸುನೀತಾ ಚವ್ಹಾಣ್ (48) ಅವರು ದಾಖಲಿಸಿದ್ದ ವಂಚನೆ ಪ್ರಕರಣವನ್ನು ಅವರು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ TNIE ಗೆ ಮಾಹಿತಿ ನೀಡಿರುವ ಯಶವಂತಪುರದ ನಿವಾಸಿ ಸುನೀತಾ, ಪ್ರಕರಣವನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಈ ವಂಚನೆ ಪ್ರಕರಣ ಸಂಬಂಧ ಈ ವರೆಗೂ ಮೂವರನ್ನು ಬಂಧಿಸಲಾಗಿತ್ತು. ಅಲ್ಲದೆ ಪೊಲೀಸರು ಮತ್ತೋರ್ವ ಆರೋಪಿ ಗೋಪಾಲ್‌ಗಾಗಿ ಶೋಧ ನಡೆಸುತ್ತಿದ್ದಾರೆ ಎಂಬ ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಹೇಳಿದ್ದರು. ಈ ಬಗ್ಗೆಯೂ ಪ್ರತಿಕ್ರಿಯಿಸಿರುವ ಸುನಿತಾ ಅವರು, ‘ಸಮಸ್ಯೆ ಬಗೆಹರಿದಿದ್ದರಿಂದ ಯಾರನ್ನೂ ಬಂಧಿಸಲಾಗಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತುಂಬಾ ಒಳ್ಳೆಯವರು. ಅವರ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ಅವರ ಬಗ್ಗೆ ನನಗೆ ಧ್ವೇಷವಿಲ್ಲ. ನನಗೆ ವಂಚನೆಯಾಗಿದ್ದರಿಂದ ಮಾತ್ರ ನಾನು ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇನೆ. ಈಗ ಪ್ರಕರಣ ಬಗೆಹರಿದಿದೆ. ಹೀಗಾಗಿ ಪ್ರಕರಣ ವಾಪಸ್ ಪಡೆಯುತ್ತೇನೆ. ಅವರಿಗೆ ನೀಡಿದ ಹಣ ಮೂರ್ನಾಲ್ಕು ಮಂದಿಗೆ ಸೇರಿದ್ದು, ಅದನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ ಎಂದು ಸುನಿತಾ ಹೇಳಿದರು.
ವಂಚನೆ ಪ್ರಕರಣ ಸಂಬಂಧ ಬಸವೇಶ್ವರನಗರ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿದ್ದು, ದೂರುದಾರರು ರಾಜಿ ಅರ್ಜಿ ಸಲ್ಲಿಸುವ ಮೂಲಕ ದೂರನ್ನು ಹಿಂಪಡೆಯಲು ನ್ಯಾಯಾಲಯವನ್ನು ಸಂಪರ್ಕಿಸಬೇಕು… ನಾವು ಸೆಕ್ಷನ್ 164 CrPC ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, ತನಗೆ ಸಹೋದರಿ ಇಲ್ಲ, ಮತ್ತು ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿಯನ್ನು ತನ್ನ ಸಹೋದರಿ ಎಂದು ನಮೂದಿಸಿರುವುದು ವಾಸ್ತವಿಕವಲ್ಲ ಮತ್ತು ತಾನು ಮತ್ತು ಗೋಪಾಲ್ 32 ವರ್ಷಗಳ ಹಿಂದೆಯೇ ಬೇರ್ಪಟ್ಟಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಚನ್ನಪಟ್ಟಣ ಬೈ ಎಲೆಕ್ಷನ್: ಮೈತ್ರಿ ಅಭ್ಯರ್ಥಿ ಫೈನಲ್…?
ಬೆಂಗಳೂರು: ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾತು ಕೇಳಿ ಬರುತ್ತಿದೆಯಾದರೂ, ಸೈನಿಕನ ಹಠವೇ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.. ಈಗಾಗಲೇ ಹಲವು ಸಭೆ ನಡೆದಿದ್ದು, ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಜೆಡಿಎಸ್ ಚಿನ್ಹೆಯಡಿ ಯೋಗೇಶ್ವರ್ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬ ಮಾಹಿತಿ ಮೂಲಗಳಿಂದ ದೂರಕಿದೆ.
ಇದಕ್ಕೆ ಪೂರಕವಾಗಿ ನಿಖಿಲ್ ಕುಮಾರಸ್ವಾಮಿ ತ್ಯಾಗದ ಮಾತನಾಡಿದ್ದಾರೆ.. ಇನ್ನು, ಪ್ರೀತಿ, ವಿಶ್ವಾಸದಿಂದ ಎಲೆಕ್ಷನ್ ನಡೆಯಬೇಕು ಅಂತ ಹೆಚ್ಡಿಕೆ ಹೇಳಿದ್ರೆ, ಯೋಗೇಶ್ವರ್ಗೆ ಅನ್ಯಾಯ ಆಗ್ಬಾರದು ಅಂತ ಸೈನಿಕನ ಪರ ವಿಜಯೇಂದ್ರ ಬ್ಯಾಟಿಂಗ್ ಮಾಡಿದ್ದಾರೆ.
ಈಗಾಗಲೇ ಬಿಜೆಪಿ ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ. ಹೀಗಾಗಿ ಇಂದು ಸಂಜೆಯೊಳಗೆ ಚನ್ನಪಟ್ಟಣ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿಪಿವೈ ಸ್ಪರ್ಧೆ ಮಾಡಿದರೆ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದಂತೆ ಆಗುತ್ತದೆ . ಇದರಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗುತ್ತದೆ. ಹೀಗಾಗಿ ಮೈತ್ರಿ ಧರ್ಮ ಪಾಲನೆ ಮಾಡಲು ಜೆಡಿಎಸ್ ಚಿಹ್ನೆಯಿಂದ ಸಿಪಿ ಯೋಗೇಶ್ವರ್ ಸ್ಪರ್ಧೆ ಸಾಧ್ಯತೆ ಇದೆ. ನಿನ್ನೆ ನೆಡೆದ ಸಮನ್ವಯ ಸಭೆಯಲ್ಲೂ ಕೂಡ ಸಿಪಿ ಯೋಗೇಶ್ವರ್ ಜೆಡಿಎಸ್ ನಿಂದ ಸ್ಪರ್ಧೆ ಮಾಡುವ ಬಗ್ಗೆ ಹೆಚ್ಚಿನ ಚರ್ಚೆಯಾಗಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಸ್ಪರ್ಧೆ ಸಾಧ್ಯತೆ ಹೆಚ್ವಿವೆ.
ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಅಭ್ಯರ್ಥಿ ವಿಚಾರವಾಗಿ ತಾವು ಯಾವುದೇ ಡಿಮ್ಯಾಂಡ್ ಇಡುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರೆ. ನಿಮ್ಮ ಕ್ಷೇತ್ರವಾಗಿರುವ ಕಾರಣ ನೀವೇ ಚರ್ಚಿಸಿ ತೀರ್ಮಾನ ಮಾಡಿ ಎಂದು ವಿಜಯೇಂದ್ರ ಮತ್ತು ಅಶೋಕ್ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಸರ್ವೇ ಬೇಕಾದರೂ ನಡೆಸಲಿ ನಂತರ ತೀರ್ಮಾನ ಮಾಡಲಿ ಎಂದು ಸಭೆಯಲ್ಲಿ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚನ್ನಪಟ್ಟಣ ಕ್ಷೇತ್ರ ಬಾಕಿ ಇರಿಸಿರುವ ಕಾರಣ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಬಹುತೇಕ ಖಚಿತವಾಗಿದೆ.
ಇನ್ನು, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕ್ಲೋಸ್ಡ್ ಡೋರ್ ಸಭೆ ನಡೆಸಿದ್ದ, ಈ ಸಭೆಯಲ್ಲಿ ಡಿಕೆ ಸುರೇಶ್ರತ್ತ ಮುಖಂಡರು ಒಲವು ತೋರಿದ್ದಾರೆ. ಸಭೆ ಬಳಿಕ ನಗುತ್ತಲೇ ಡಿಕೆಶಿ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಜೆಡಿಎಸ್ನವರು ಹೆದರಿಕೊಂಡು ಶರಣಾಗಿದ್ದಾರೆ ಎಂದು ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟರು. ಅಷ್ಟೇ ಅಲ್ಲ ಚನ್ನಪಟ್ಟಣದಲ್ಲಿ ಡಿಕೆ ಸುರೇಶ್ ಅವರನ್ನೇ ಅಭ್ಯರ್ಥಿಯನ್ನಾಗಿಸಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆ, ನಾವು ಯಾರನ್ನ ಅಭ್ಯರ್ಥಿ ಎಂದು ಹೇಳುತ್ತೇವೋ ಅವರೇ ಫೈನಲ್ ಎಂದಿದ್ದಾರೆ.